ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಐತಿಹಾಸಿಕ ಸಮಾರಂಭವಾಗಬೇಕು

ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಐತಿಹಾಸಿಕ ಸಮಾರಂಭವಾಗಬೇಕು

ಸಾಮಾಜಿಕ ಜಾಲತಾಣದ ರಾಜ್ಯ ಉಸ್ತುವಾರಿ ನಟರಾಜ್ ಗೌಡ ಕರೆ

ದಾವಣಗೆರೆ, ಜೂ.28- ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಸಮಾರಂಭದ ಪೂರ್ವ ತಯಾರಿ ವೀಕ್ಷಿಸಲು ಸಾಮಾಜಿಕ ಜಾಲತಾಣದ ರಾಜ್ಯ ಉಸ್ತುವಾರಿ ಗಳಾದ ನಟರಾಜ್ ಗೌಡ ಹಾಗೂ ಬೆಂಗ ಳೂರು ವಿಭಾಗದ ಉಸ್ತುವಾರಿ ವಾಸುದೇವ ಮೂರ್ತಿ ಅವರುಗಳು ನಿನ್ನೆ ನಗರಕ್ಕೆ ಆಗ ಮಿಸಿ, ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದರು.

ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭ ಕೇವಲ ಸಮಾರಂಭವಾಗದೇ, ಐತಿಹಾಸಿಕ ಕಾರ್ಯಕ್ರಮವಾಗ ಬೇಕು ಎಂದು  ನಟರಾಜ್ ಗೌಡ ತಿಳಿಸಿದರು. ಎಂಟು ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಕಾರ್ಯಕ್ರಮ ವೀಕ್ಷಣೆ ನಡೆಯಲಿದ್ದು, ಜಿಲ್ಲೆಯಲ್ಲಿಯೂ ಸಹ ಯಶಸ್ವಿಗೊಳಿಸಲು ಜಿಲ್ಲಾ ಸಮಿತಿ ಸಹಕರಿಸಬೇಕು ಎಂದು ವಾಸುದೇವಮೂರ್ತಿ ತಿಳಿಸಿದರು.  

ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ಮಾತನಾಡಿ, ಸಾಮಾಜಿಕ ಜಾಲತಾಣ, ಪಕ್ಷದ ಬಲವರ್ಧನೆಗೆ ಮುಖ್ಯವಾದ ವಿಭಾಗವಾಗಿದ್ದು, ಪಕ್ಷದ ನಾಯಕರು ಅವರನ್ನು ಗುರುತಿಸಿ ಅವರಿಗೆ ಶಕ್ತಿ ನೀಡಬೇಕು ಎಂದು ಕರೆ ನೀಡಿದರು.

ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಶಿವಗಂಗಾ ಬಸವರಾಜ್, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಅನಿತಾ ಮಾಲತೇಶರಾವ್ ಜಾಧವ್, ಇಬ್ರಾಹಿಂ ಖಲೀಲ್ ಮಾತನಾಡಿ, ಪದಗ್ರಹಣ ಸಮಾರಂಭವನ್ನು ಯಶಸ್ವಿಗೊಳಿಸುವುದಾಗಿ ನಟರಾಜ್ ಅವರಿಗೆ ಭರವಸೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಜಿ.ಸಿ. ನಿಂಗಪ್ಪ, ಸಾಮಾಜಿಕ ಜಾಲತಾಣದ ಕೆ.ಎಲ್.ಹರೀಶ್ ಬಸಾಪುರ, ಗೋವಿಂದ ಹಾಲೇಕಲ್, ರಘು ದೊಡ್ಮನಿ, ಮೊಹಮ್ಮದ್ ಜಾಫರ್, ಬಾತಿ ಶಿವಕುಮಾರ್, ಎಸ್.ಕೆ.ಮಾಲತೇಶ್, ಪರಶುರಾಮ್, ಬಾಬು ಜಾನ್, ಶಾಹೀದ್, ಯುವ ಕಾಂಗ್ರೆಸ್ ಉಪಾ ಧ್ಯಕ್ಷ ಎಲ್.ಎಂ.ಎಚ್. ಸಾಗರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಜಿಲ್ಲಾಧ್ಯಕ್ಷ ರಾಘವೇಂದ್ರ ಗೌಡ, ಎನ್.ಎಸ್. ಯು ಐ ಜಿಲ್ಲಾಧ್ಯಕ್ಷ ಅಲಿ ರೆಹಮತ್, ಅಲ್ಲಾ ವಲಿ ಗಾಜಿಖಾನ್, ಎಸ್.ಎಂ. ರುದ್ರೇಶ್, ಎಸ್ಸಿ ಘಟ ಕದ ಬಿ.ಎನ್. ರಂಗನಾಥ ಸ್ವಾಮಿ, ನಿಖಿಲ್, ರಾಕೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.