ಶಾಲಾ ಶಿಕ್ಷಕರ ಸಂಘದಿಂದ ಹುತಾತ್ಮರಿಗೆ ನಮನ

ರಾಣೇಬೆನ್ನೂರು, ಜೂ.27- ಸ್ಥಳೀಯ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಗಲ್ವಾನ್ ಕಣಿವೆ ಸಂಘರ್ಷದಲ್ಲಿ ಹುತಾತ್ಮರಾದ 20 ಭಾರತೀಯ ಯೋಧರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಬಿ.ಪಿ. ಶಿಡೇನೂರ, ಪದಾಧಿಕಾರಿಗಳಾದ ಎಂ.ಸಿ. ಬಲ್ಲೂರ, ಎಸ್.ಡಿ. ಕರಿಯಣ್ಣನವರ, ಎಂ.ಎ. ದಾರುಗಾರ, ಗೀತಾ ಅಜ್ಯೋಡಿಮಠ, ಶಾರದಾ ಚಲವಾದಿ, ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಚಿ ಆರ್.ಡಿ. ಹೊಂಬರಡಿ, ಪದಾಧಿಕಾರಿಗಳಾದ ಎ.ಎ. ಮುಲ್ಲಾ, ಎಸ್.ಜಿ. ಮಾಕಾಳ, ಎಂ.ಎನ್. ರೆಡ್ಡಿ, ಎನ್.ಎಂ. ಚೌಡಣ್ಣನವರ ಇನ್ನಿತರರಿದ್ದರು.