ಲಕ್ಷ್ಮಿ ವೆಂಕಟೇಶ್ವರ ಕಾಣಿಕೆ ಹುಂಡಿಯಲ್ಲಿ 7.27 ಲಕ್ಷ ರೂ.

ಲಕ್ಷ್ಮಿ ವೆಂಕಟೇಶ್ವರ ಕಾಣಿಕೆ ಹುಂಡಿಯಲ್ಲಿ 7.27 ಲಕ್ಷ ರೂ.

ಹರಪನಹಳ್ಳಿ, ಜೂ.27- ಪಟ್ಟಣದ ದೇವರ ತಿಮ್ಮಲಾಪುರದ ಐತಿಹಾಸಿಕ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ  7,26,811 ರೂ ಪಾಯಿಗಳು ಸಂಗ್ರಹವಾಗಿದೆ ಎಂದು ತಹಶೀಲ್ದಾರ್ ಡಾ. ನಾಗವೇಣಿ ತಿಳಿಸಿದ್ದಾರೆ. ಈ ದೇವಸ್ಥಾನ ತಾಲ್ಲೂಕಿನ ಮುಜರಾಯಿ ಇಲಾಖೆಯ ಸಿ ದರ್ಜೆ ಶ್ರೇಣಿ ಹೊಂದಿದ್ದು, ಹೊರರಾಜ್ಯ ಹಾಗೂ ಇತರೆ ಜಿಲ್ಲೆಗಳಿಂದ ಅಪಾರ ಭಕ್ತರು ಆಗಮಿಸುತ್ತಾರೆ. ಪ್ರತಿ ಶನಿವಾರ ವಿಶೇಷ ಪೂಜೆ ಹಾಗೂ ಅನ್ನ ದಾಸೋಹ ಕಾರ್ಯ ನಡೆಯಲಿದೆ.

ಈ ಸಂದರ್ಭದಲ್ಲಿ ಮುಜರಾಯಿ ಇಲಾಖೆಯ ರಮೇಶ್, ಗಂಗಾಧರ ತಳವಾರ್, ಚನ್ನಬಸವಯ್ಯ ಸೋಗಿ, ಆರಕ್ಷಕ ಸಿಬ್ಬಂದಿ ಪ್ರಕಾಶ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ರಾಜೇಶ್ ದೇಸಾಯಿ, ಕಂದಾಯ ಇಲಾಖೆಯ ಅರವಿಂದ್, ಡಾ. ಹರ್ಷ ಕಟ್ಟಿ, ಬ್ರಾಹ್ಮಣ ಸಮಾಜದ ಮುಖಂಡ ಶ್ಯಾನ ಭೋಗರ ಸುಶೀಲೇಂದ್ರ ರಾವ್, ದಂಡಿನ ಹರೀಶ, ದೇವಸ್ಥಾನದ ಅರ್ಚಕ ಶ್ರೀನಿವಾಸ ಪೂಜಾರ್, ಗ್ರಾಮಸ್ಥರಾದ ಆನೆಗುಂದಿ ನಾಗರಾಜ, ಪರಸಪ್ಪ, ನೀರಗಂಟಿ ನಾಗಪ್ಪ ಹಾಗು ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published.