ದುರಸ್ತಿ ಕಾಣದ ಶುದ್ಧ ನೀರು ಘಟಕ

ದುರಸ್ತಿ ಕಾಣದ ಶುದ್ಧ ನೀರು ಘಟಕ

ಮಲೇಬೆನ್ನೂರು, ಜೂ.26- ಪಟ್ಟಣದ ನೀರಾವರಿ ಇಲಾಖೆ ಕಛೇರಿ ಮುಂಭಾಗದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕವು ಕಳೆದ ಒಂದೂವರೆ ತಿಂಗಳಿನಿಂದ ದುರಸ್ತಿಯಾಗದೇ ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

ಜಿ.ಪಂ. ಮಾಜಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ, ಎಪಿಎಂಸಿ ಸದಸ್ಯ ಜಿ. ಮಂಜುನಾಥ ಪಟೇಲ್‌, ಪುರಸಭೆ ಎ. ಆರೀಫ್‌ ಅಲಿ, ಆದಾಪುರ ವಿಜಯಕುಮಾರ್‌ ಅವರು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್‌ ಅವರೊಂದಿಗೆ ಘಟಕಕ್ಕೆ ಭೇಟಿ ನೀಡಿ, ದುರಸ್ತಿ ಮಾಡಿಸುವಂತೆ ಒತ್ತಾಯಿಸಿದರು.

ಈ ಬಗ್ಗೆ ಜಿ.ಪಂ. ಅಧ್ಯಕ್ಷೆ ದೀಪಾ ಜಗದೀಶ್‌ ಅವರ ಗಮನಕ್ಕೂ ತರಲಾಗಿದೆ. ಅವರು ಈ ಬಗ್ಗೆ ತಿಳಿದುಕೊಂಡು ದುರಸ್ತಿ ಮಾಡಿಸಿಕೊಡುವ ಭರವಸೆ ನೀಡಿದ್ದಾರೆ ಎಂದು ಬೆಣ್ಣೆಹಳ್ಳಿ ಹಾಲೇಶಪ್ಪ ತಿಳಿಸಿದರು.

ಕೊಮಾರನಹಳ್ಳಿ ಗ್ರಾಮದ ಹೊಸೂರಿನ ಸ.ಹಿ.ಪ್ರಾ. ಶಾಲೆ ಆವರಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕವೂ ಕೆಟ್ಟಿದ್ದು, ದುರಸ್ತಿ ಮಾಡಿಸುವಂತೆ ಸಂಬಂಧಪಟ್ಟವರಿಗೆ ತಿಳಿಸಿದ್ದರೂ ಗಮನ ಹರಿಸಿಲ್ಲ ಎಂದು  ಮಂಜುನಾಥ್‌ ಪಟೇಲ್‌ ದೂರಿದ್ದಾರೆ.

Leave a Reply

Your email address will not be published.