ಸರ್ವ ರೋಗವನ್ನು ಗುಣಪಡಿಸುವ ಶಕ್ತಿ ಯೋಗಕ್ಕಿದೆ

ಸರ್ವ ರೋಗವನ್ನು ಗುಣಪಡಿಸುವ ಶಕ್ತಿ ಯೋಗಕ್ಕಿದೆ

ಹರಪನಹಳ್ಳಿ, ಜೂ.21- ಸರ್ವ ರೋಗಗಳನ್ನು ಗುಣಪಡಿಸುವ ಶಕ್ತಿ ಯೋಗಕ್ಕಿದೆ ಎಂದು ಟಿಎಂಎಇ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಗಂಗಪ್ಪ ಹೇಳಿದರು.

ಪಟ್ಟಣದ ಎಸ್.ಸಿ.ಎಸ್. ಫಾರ್ಮಸಿ ಕಾಲೇಜು ಆವರಣದಲ್ಲಿ ಭಾನುವಾರ ಸಮಾನ ಮನಸ್ಕರು ಇಂದು ಏರ್ಪಡಿಸಿದ್ದ ವಿಶ್ವ ಯೋಗ ದಿನಾಚರಣೆಯಲ್ಲಿ ಯೋಗಾ ಭ್ಯಾಸಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ಜನ ಸಾಕಷ್ಟು ಕೆಲಸ ಮಾಡು ತ್ತಿದ್ದರು. ಆದರೆ, ಇಂದು ಕೆಲಸ ಕಡಿಮೆಯಾಗಿ ಮಿಷನ್‌ ಗಳನ್ನು ಅಳವಡಿಸಿಕೊಂಡು ನಾನಾ ರೋಗಗಳಿಗೆ ತುತ್ತಾಗುತ್ತಿದ್ದು, ಪ್ರತಿಯೊಬ್ಬರಿಗೂ ಯೋಗ ಅವಶ್ಯವಾ ಗಿದೆ. ಯೋಗ ಕೇವಲ ದಿನಾಚರಣೆಗೆ ಸೀಮಿ ತವಾಗ ಬಾರದು, ನಿತ್ಯವೂ ಅಭ್ಯಾಸ ಮಾಡಬೇಕು. ಸದೃಢ ದೇಹ ದಲ್ಲಿ ಸದೃಢ ಮನಸ್ಸಿನ ನಿರ್ಮಾಣಕ್ಕೆ ಯೋಗಾಸನಗಳು ಸಹಕಾರಿ ಆಗುತ್ತವೆ ಎಂದು ತಿಳಿಸಿದರು.  ಯೋಗ ಶಿಕ್ಷಕ ಲೋಕೇಶ್ ಯೋಗವನ್ನು ಹೇಳಿಕೊಟ್ಟರು. ನಿವೃತ್ತ ಪ್ರಾಧ್ಯಾಪಕ ಎಂ.ತಿಮ್ಮಪ್ಪ, ಹೇಮಣ್ಣ ಮೋರಿಗೇರಿ, ಶಿಕ್ಷಕಿ ಶಿವಮ್ಮ, ಪಿ.ಟಿ.ನಾಗರಾಜ್, ವಿಶ್ವನಾಥ್,  ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published.