ಮೃಗಶಿರಾ ನಕ್ಷತ್ರ ಮಿಥುನ ರಾಶಿಯಲ್ಲಿ ರಾಹುಗ್ರಸ್ತ ಕಂಕಣಾಕೃತಿ ಸೂರ್ಯಗ್ರಹಣ

ಮೃಗಶಿರಾ ನಕ್ಷತ್ರ ಮಿಥುನ ರಾಶಿಯಲ್ಲಿ  ರಾಹುಗ್ರಸ್ತ ಕಂಕಣಾಕೃತಿ ಸೂರ್ಯಗ್ರಹಣ

ಶ್ರೀ ಶಾಲಿವಾಹನ ಶಕೆ 1942 ನೇ ಶಾರ್ವರಿ ನಾಮ ಸಂವತ್ಸರ ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷ ಅಮಾವಾಸ್ಯೆ ದಿನಾಂಕ : 21.6.2020ನೇ ಭಾನುವಾರ. ಈ ದಿನದಂದು ಬೆಳಿಗ್ಗೆ ಮೃಗಶಿರಾ ನಕ್ಷತ್ರ ಮಿಥುನ ರಾಶಿಯಲ್ಲಿ ರಾಹುಗ್ರಸ್ತ ಕಂಕಣಾಕೃತಿ ಸೂರ್ಯಗ್ರಹಣವಾಗಲಿದೆ.

ಈ ಸೂರ್ಯಗ್ರಹಣವು ಹಗಲಿನ ಎರಡನೆ ಯಾಮದಲ್ಲಿ ಆಗುವುದರಿಂದ ಗ್ರಹಣಕ್ಕಿಂತ ನಾಲ್ಕು ಯಾಮ ಅಂದರೆ ದಿ. 20.06.2020ನೇ ಶನಿವಾರ ರಾತ್ರಿ 10.04 ನಿಮಿಷದಿಂದಲೇ ವೇದ ಪ್ರಾರಂಭವಾಗಲಿದೆ. ಅಷ್ಟರೊಳಗೆ ಆಹಾರ ಸ್ವೀಕರಿಸಬಹುದು. ಧರ್ಮ ಸಿಂಧುವಿನ ಪ್ರಥಮ ಪರಿಚ್ಛೇದಲ್ಲಿ 

`ಬಾಲಾತುರ ವಿಷಯೇತು, ಸಾರ್ಧಪ್ರಹರಾತ್ಮಕೋ
ಮುಹೂರ್ತ ತ್ರಯಾತ್ಮಕೋ ವಾ ವೇಧಃ’

ಎಂದು ಹೇಳಿರುವುದರಿಂದ ಚಿಕ್ಕ ಬಾಲಕರು, ವೃದ್ಧರು ರೋಗಗ್ರಸ್ತರು, ಬೆಳಿಗ್ಗೆ 6.30 ರವರೆಗೆ  ಲಘು ಆಹಾರ ಸ್ವೀಕರಿಸಬಹುದು.

ಅಶುಭ ಫಲವಿರುವವರು ಹಾಗೂ ಗರ್ಭಿಣಿ ಸ್ತ್ರೀಯರು ಗ್ರಹಣವನ್ನು ನೋಡಬಾರದು.

ಗ್ರಹಣ ಕಾಲದಲ್ಲಿ ಮಾಡಬೇಕಾದ ಕಾರ್ಯಗಳು :
ಅಶುಭ ಫಲವಿರುವವರು ತಾಮ್ರ ಅಥವಾ ಬೆಳ್ಳಿ ತಗಡಿನಲ್ಲಿ ಸೂರ್ಯಬಿಂಬವನ್ನು ಬರೆದು, ಅದನ್ನು ಹಣೆಗೆ ಕಟ್ಟಿಕೊಂಡು ಸ್ನಾನ ಮಾಡಬೇಕು, ಸ್ನಾನ ಕಾಲದಲ್ಲಿ ಕೆಳಕಂಡಂತೆ ಹೇಳಿ

“ಇಂದ್ರೋ ನಲೋ ದಂಡಧರಶ್ಚ ಋಕ್ಷಃ
ಪಾಶಾಯುಧೋ ವಾಯುಧನೇಶರುದ್ರಾಃ|
ಮಜ್ಜನ್ಮಋಗ್ಭೋ ಮಮರಾಶಿಸಂಸ್ಥಾಃಕುರ್ವಂತು ಸೂರ್ಯಗ್ರಹ ದೋಷ ಶಾಂತಿಮ್||
ಸ್ನಾನ ಮಾಡಬೇಕು.

ಸಂಕಲ್ಪ: ಮಮ (ಹೆಸರು ಹೇಳಿಕೊಳ್ಳಬೇಕು) ಜನ್ಮ ನಕ್ಷತ್ರ – ಜನ್ಮ ರಾಶಿ (ನಕ್ಷತ್ರರಾಶಿ ಹೇಳಿಕೊಳ್ಳಬೇಕು) ಸ್ಥಿತಿ, ಸೂರ್ಯ ಗ್ರಹಣ ಸೂಚಿತ, ಸಕಲಾನಿಷ್ಟಶಾಂತಿ ಪೂರ್ವಕಂ, ಏಕಾದಶ ಸ್ಥಾನ ಸ್ಥಿತಿ ಗ್ರಹಣ ಸೂಚಿತ ಶುಭ ಫಲಪ್ರಾಪ್ತ್ಯರ್ಥಂ ರವಿ ಬಿಂಬ ದಾನಂ ಅಹಂ ಕರಿಷ್ಯೆ ಎಂದು ಸಂಕಲ್ಪ ಮಾಡಬೇಕು.

“ತಮೋಮಯ ಮಹಾಭೀಮ ಸೋಮಸೂರ್ಯವಿಮರ್ಧನಂ
ಹೇಮ-ತಾರಪ್ರದಾನೇನ ಮಮಶಾಂತಿ ಪ್ರದೋ ಭವ||
ವಿಧುಂತುದ ಸಮಸ್ತುಭ್ಯಂ ಸಿಂಹಿಕಾನಂದುನಾಚ್ಯುತ|
ದಾನೇನಾನೇನ ನಾಗಸ್ಯ ರಕ್ಷಮಾಂ ವೇಧಜಾದ್ಭಯಾತ್||
ಇದಂ ರಾಜತಬಿಂಬಿಂ, ಯಥಾಶಕ್ತಿ, ತಿಲಪಾತ್ರದಕ್ಷಿಣಾಸಹಿತಂ
ಗ್ರಹಣಸೂಚಿತಾರಿಷ್ಟ,  ವಿನಾಶಾರ್ಥಂ-ಸಂಪ್ರದನೇ. 
ಎಂದು ಹೇಳಿ ಗೋಧಿ ಮತ್ತು ಎಳ್ಳು ದಾನ ಮಾಡಬೇಕು.

ಗ್ರಹಣಕಾಲದಲ್ಲಿ ಪಠಿಸಬೇಕಾದ ಮಂತ್ರ :
ಯೋಸೌ ನಿಧಿಪತಿರ್ದೇವಃ ಖಡ್ಗಶೂಲಗದಾಧರಃ|
ಸೂರ್ಯೋಪರಾಗಕಲುಷಂ ಧನದೋsತ್ರ ವ್ಯಪೋಹತು||
ಯೋsಸಾವಿಂದುಧರೋ ದೇವಃ ಫಿನಾಕೀ ವೃಷವಾಹನಃ|
ಸೂರ್ಯೋಪರಾಗಪಾಪಾನಿ ವಿನಾಶಯತು ಶಂಕರಃ|
ತ್ರೈಲೋಕ್ಯೇಯೌನಿ ಭೂತಾನಿ ಸ್ಥಾವರಾಣಿ ಚರಾಣಿಚ|
ಬ್ರಹ್ಮಾವಿಷ್ಣ್ವರ್ಕ ರುದ್ರಾಶ್ಚ ದಹಂತು ಮಮ ಪಾತಕಮ್||  ಎಂದು ಪಾರಾಯಣ ಮಾಡಬೇಕು.

ಗ್ರಹಣಕಾಲದಲ್ಲಿ ಮಾಡಬೇಕಾದ ಕರ್ತವ್ಯಗಳು :
ಗ್ರಹಣ ಕಾಲದಲ್ಲಿ ಸ್ನಾನ ಮಾಡಿ ದೇವರ ಪೂಜೆ, ಸಮಸ್ತ ಪಿತೃಗಳಿಗೆ ತಿಲತರ್ಪಣ, ಇಷ್ಟದೇವತಾ ಸ್ತೋತ್ರಗಳು, ಗುರುಗಳಿಂದ ಉಪನಿಷ್ಟವಾದ ಮಂತ್ರಗಳ ಜಪ, ವಿಷ್ಣು ಸಹಸ್ರನಾಮ ಪಾರಾಯಣ ಮೊದಲಾದವುಗಳನ್ನು ಮಾಡಬೇಕು. ಗ್ರಹಣಬಿಟ್ಟ ನಂತರ, ಪುನಃ ಸ್ನಾನ ಮಾಡಿ ದೇವಸ್ಥಾನಗಳಿಗೆ ಹೋಗಿ ದಾನ ಮಾಡಬೇಕು. ಗ್ರಹಣ ಕಾಲದಲ್ಲಿ ಅಭ್ಯಂಗ-ಮಲಮೂತ್ರಗಳ ವಿಸರ್ಜನೆ-ನಿದ್ರೆ, ಹರಟೆ, ಮೊದಲಾದವುಗಳನ್ನು ಮಾಡದೆ, ಸಾಧ್ಯವಾದಷ್ಟು ಪುಣ್ಯ ಸಂಪಾದನೆಗೆ ಪ್ರಯತ್ನಿಸಬೇಕು.


ಜಯತೀರ್ಥಾಚಾರ್ ವಡೇರ್‌
9448666678

Leave a Reply

Your email address will not be published.