ಎಸ್‌.ಎಸ್. ಕಪ್-2020 ವಿಜೇತರಿಗೆ ಬಹುಮಾನ ವಿತರಣೆ

ಎಸ್‌.ಎಸ್. ಕಪ್-2020 ವಿಜೇತರಿಗೆ ಬಹುಮಾನ ವಿತರಣೆ

ದಾವಣಗೆರೆ, ಜೂ.18- ಇಲೆವೆನ್ ಕ್ರಿಕೆಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಂಘದ ಜಂಟೆ ಆಶ್ರಯದಲ್ಲಿ   ಡಾ. ಶಾಮನೂರು ಶಿವಶಂಕರಪ್ಪ ಅವರ ಹುಟ್ಟು ಹಬ್ಬದ ಅಂಗವಾಗಿ ಮೊನ್ನೆ ನಡೆದ  ಎಸ್.ಎಸ್. ಕಪ್-2020,  6 ದಿನಗಳ ಕಾಲ ನಡೆದ  ಲೀಗ್ ಕಂ ನಾಕೌಟ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ  ಗೆದ್ದ ಕ್ರೀಡಾ ತಂಡಗಳಿಗೆ  ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ಬಹುಮಾನ ವಿತರಣೆ ಮಾಡಿದರು. 

ಜನಪ್ರಿಯ ದಾವಣಗೆರೆ ತಂಡ  ಪ್ರಥಮ ಬಹುಮಾನ 33,333 ನಗದು ಮತ್ತು ಟ್ರೋಫಿಯನ್ನು  ಸ್ನೇಹ ಜೀವಿ (ದಾವಣಗೆರೆ) ತಂಡ, ದ್ವಿತೀಯ ಬಹುಮಾನ 22,222 ನಗದು ಮತ್ತು  ಟ್ರೋಫಿಯನ್ನು ಅಫಿಷಿಯಲ್ ಕ್ರೀಡಾಕೂಟದಲ್ಲಿ ಮರ್ಚಂಟ್ ಕ್ಲಬ್ (ದಾವಣಗೆರೆ) ತಂಡ, ಪ್ರಥಮ ಮತ್ತು ಜಿಲ್ಲಾ ಪೊಲೀಸ್ ತಂಡ ದ್ವಿತೀಯ ಸ್ಥಾನವನ್ನು ಪಡೆದವು.

ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯಲ್ಲಿ 20 ತಂಡಗಳು ಭಾಗವಹಿಸಿದ್ದವು. ಬಹುಮಾನ ವಿತರಣಾ ಸಂದರ್ಭದಲ್ಲಿ ಶಿವಗಂಗಾ ಗ್ರೂಪ್‌ ಮಾಲೀಕರು, ಕ್ರೀಡಾ ಪ್ರೋತ್ಸಾಹಕರಾದ ಶಿವಗಂಗಾ ಶ್ರೀನಿವಾಸ್, ಎಚ್ ಮಹದೇವ್, ರಾಜು ರೆಡ್ಡಿ, ರಮೇಶ್ (ಕ್ಲಾಸಿಕ್), ಟ್ರಾಫಿಕ್ ಇನ್ಸ್‌ಪೆಕ್ಟರ್ ಕಿರಣ್, ಸರ್ಕಲ್ ಇನ್ಸ್‌ಪೆಕ್ಟರ್ ಶಂಕರ್, ಡಿಆರ್ ಡಿವೈಎಸ್ಪಿ ಪ್ರಕಾಶ್ ಪ್ರಸಾದ್ ರೆಡ್ಡಿ, ಸಂಘಟಕರಾದ  ಕುರುಡಿ ಗಿರೀಶ್, ಜಯಪ್ರಕಾಶ್ ಮತ್ತಿತರರಿದ್ದರು.

Leave a Reply

Your email address will not be published.