ಹೊನ್ನಾಳಿ : ಶಿವ ಕೋ-ಆಪರೇಟಿವ್ ಸೊಸೈಟಿಗೆ ಬಸವಲಿಂಗಪ್ಪ ಅಧ್ಯಕ್ಷ

ಹೊನ್ನಾಳಿ : ಶಿವ ಕೋ-ಆಪರೇಟಿವ್ ಸೊಸೈಟಿಗೆ ಬಸವಲಿಂಗಪ್ಪ ಅಧ್ಯಕ್ಷ

ಹೊನ್ನಾಳಿ, ಜೂ.15- ಪಟ್ಟಣದ ಶಿವ ಕೋ-ಆಪರೇಟಿವ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ಕೂಲಂಬಿಯ ಬಸವಲಿಂಗಪ್ಪ ಹಾಗೂ ಉಪಾಧ್ಯಕ್ಷರಾಗಿ ದೊಡ್ಡೇರಿಯ ಶಕುಂತಲಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಜಿ.ಮಂಜುನಾಥ್ ಘೋಷಿಸಿದ್ದಾರೆ.

ನೂತನ ಅಧ್ಯಕ್ಷ ಬಸವಲಿಂಗಪ್ಪ ಹಾಗೂ ಉಪಾಧ್ಯಕ್ಷೆ ಶಕುಂತಲಾ ಮಾತನಾಡಿ, ನಮ್ಮ ಸೊಸೈಟಿಯಲ್ಲಿ ಒಟ್ಟು 195 ಕೋಟಿ ವಹಿವಾಟು ನಡೆಯುತ್ತಿದ್ದು ಶೇ 74 ರಷ್ಟು ವಸೂಲಾತಿ ಆಗಿದೆ. ಅಂದಾಜು 60 ಲಕ್ಷ ಲಾಭ ಗಳಿಸಿದೆ ಎಂದು ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಸಾಲದ ವಸೂಲಾತಿ ಹೆಚ್ಚಿಗೆ ಮಾಡಿ ಸಾಲಗಾರರ ಸಂಖ್ಯೆಯನ್ನು ಕಡಿಮೆ ಮಾಡಿ ಸೊಸೈಟಿಯು ಪ್ರಗತಿ ಕಾಣುವ ನಿಟ್ಟಿನಲ್ಲಿ ನಾವಿಬ್ಬರು ಶ್ರಮಿಸುತ್ತೇವೆ ಎಂದು ಹೇಳಿದರು.

ನೂತನ ನಿರ್ದೇಶಕರಾದ ನಾಗೇಂದ್ರಪ್ಪ, ಎಂ.ಸಿ.ನಾಗರಾಜಪ್ಪ, ಎಸ್.ಬಸವರಾಜಪ್ಪ, ಎಂ.ಜಿ.ಸಿದ್ದೇಶ್ವರಪ್ಪ, ಕೆ.ಶಂಕರಗೌಡ, ಆರ್.ಸಿ.ಶಿವಕುಮಾರ್, ಕೆ.ಎಸ್.ಶ್ರೀಕಾಂತ್, ಜೆ. ಶೈಲೇಶ್, ಪಿ.ಬಿ.ವಿಕಾಸ್‌, ಎಂ.ಆರ್. ಮಂಜುಳ, ಕಾರ್ಯದರ್ಶಿ ರುದ್ರೇಶ್, ಮಾಜಿ ಶಾಸಕ ಡಿ.ಜಿ.ಶಾಂತನಗೌಡ, ಕೂಲಂಬಿಯ ಸೋಮಶೇಖರ್, ಕುಂದೂರು ಶೇಖರಪ್ಪ, ಶಿವಣ್ಣ ಮತ್ತು ಇತರರು ಇದ್ದರು.