ಎಸ್ಸೆಸ್‌ಗೆ 90ರ ಸಂಭ್ರಮ

ಎಸ್ಸೆಸ್‌ಗೆ  90ರ ಸಂಭ್ರಮ

ಕೋರುವೆನು ನಾ ನಿಮಗೆ ತೊಂಭತ್ತರ ಶುಭಾಶಯ |
ನೀಡಲಿ ಭಗವಂತ ಆಯುರಾರೋಗ್ಯ ಇದು ನಮ್ಮ ಆಶಯ
ನಂಬಲಾಗದು ನಿಮ್ಮ ತೊಂಭತ್ತರ ಈ ಹರೆಯ |
ಯುವಕರನು ನಾಚಿಸುವ ಹುಮ್ಮಸ್ಸಿನ ಈ ಪ್ರಾಯ
ಧನ್ಯರಾದರು ನಿಮ್ಮನು ಹೆತ್ತವರು ಈ ಜಗದಲಿ |
ಪುಣ್ಯವತಿ ನಿಮ್ಮ ಕೈಹಿಡಿದವಳು ಬಾಳೆಂಬ ನೌಕೆಯಲಿ
ಏಳು ಚೆಲುವರು ಉದಯಿಸಿದರು ನಿಮ್ಮ ಬಾಳಿನಂಬರದಲಿ |
ಮುನ್ನಡೆಯುತಿಹರು ನಿಮ್ಮ ಬಾಳ ಬೆಳಕಿನಲಿ
ಯುವಕರಿಗೆ ನೀವಾದಿರಿ ಆದರ್ಶಪ್ರಾಯ |
ಹಿತವಾಗುವುದು ಎಲ್ಲರಿಗೂ ನಿಮ್ಮ ಅಭಿಪ್ರಾಯ
ನಿಮಗಿರುವುದು ಅಸಂಖ್ಯಾತ ಸ್ನೇಹಿತರ ಬಳಗ |
ನೆಲೆಸಿದಿರಿ ಅವರೆದೆಯಲಿ ಎಂತಹ ಅನುಬಂಧ |
ಬಂಧು ಬಳಗವು ಆದರಿಸುವ ನಿಮ್ಮ ವ್ಯಕ್ತಿತ್ವ
ಏನಾದರೂ ಸರಿ ಸಾಧಿಸದಿರೆನೆಂಬುದೇ ನಿಮ್ಮ ತತ್ವ |
ಶಾಮನೂರು ಮನೆತನಕ್ಕೆ ಹಾಕಿದಿರಿ ನೀವು ಭದ್ರಬುನಾದಿ
ತೊಡಕಿಲ್ಲದೆ ದೊರೆಯಲಿ ಸುಗಮದ ಹಾದಿ |
ಸರಳ ಸಜ್ಜನಿಕೆಯ ಸಾಕಾರರೂಪದಿ
ಬದುಕಿನೇರಿಳಿತವನು ಎದುರಿಸಿದ ಧೀರರು
ನಿರಾಡಂಬರ ಬದುಕು ನಿರಹಂಕಾರ ವ್ಯಕ್ತಿತ್ವ
ಸಮಾಜ, ದೇಶದ ಸೇವೆಗೆ ಕಂಕಣ ಬದ್ಧ |
ಜನಸೇವೆಯೇ ಶಿವನ ಸೇವೆಯು ಎಂದು
ಪರಿಶ್ರಮದಿ ದುಡಿದಿಹರು ದೇವರೊಲುಮೆ ಇವರಿಗಿಹುದು
ಸಾಧನೆ ಸಿದ್ಧಿಯನು ಬದುಕಿನಲಿ ಸಾಧಿಸುತ
ಜನಪ್ರಿಯತೆ ಗಳಿಸಿ ಮುನ್ನಡೆಯುತಿಹರು |
ಹಳ್ಳಿಯಿಂದ ದಿಲ್ಲಿ ಅನೇಕ ದೇಶಗಳ ಸುತ್ತಿ
ಜಾಣ್ಮೆಯ ಶಿಸ್ತಿನಲಿ ಕೋಶವನು ಓದಿ
ಮನೆಗೆದ್ದು ಮಾರುಗೆದ್ದಿಹ ಧೀರರು
ಸ್ನೇಹ, ಪ್ರೀತಿ, ಮಮತೆಗಳ ಹೃದಯ ಸಿರಿವಂತರು |
“ಬಾಳಿನ ಕೊನೆಯವರೆಗೂ ಸಮಾಜ ಸೇವೆ ಮಾಡು
ಗುರಿಯನ್ನು ತಲುಪಲು ನಿನ್ನನೇ ನೀ ನೀಡು”
ಈ ಘೋಷಣೆಯು ಒಪ್ಪುವುದು ನಿಮ್ಮ ಜೀವನಕೆ
ಕರೆಯುವೆವು ನಿಮ್ಮನ್ನು ನಮ್ಮ ಮಾರ್ಗದರ್ಶನಕೆ |
ನೂರಾರು ವರುಷ ಬಾಳಿ ಬದುಕಿರಿ
ಸುಖದಿ ತೊಂಭತ್ತರ ಹುಟ್ಟು ಹಬ್ಬದ
ಸಂಭ್ರಮದಲಿ ವಂದಿಸುವೆ ನಿಮಗೆ
ಮನತುಂಬಿ ಶುಭ ಕೋರುವೆ
ಇದೋ ನಿಮಗೆ ಅರ್ಪಿತ  ಈ ನನ್ನ ಕವನ ಪುಷ್ಪ |


ಜೆಂಬಿಗಿ ಮೃತ್ಯುಂಜಯ
ದಾವಣಗೆರೆ.