ಕೊರೊನಾ ಗೆಲ್ಲುವ ಜಾಣತನ

ಕೊರೊನಾ ಗೆಲ್ಲುವ ಜಾಣತನ

ಧರಿತ್ರಿಯ ಜನರ ಮನದಲಿ
ಆವರಿಸಿದೆ ಭಯವೀಗ
ಭೂಮಿಯ ಆಕ್ರಮಿಸಿದೆ
ಕೊರೊನಾ ಮಾರಕ ರೋಗ.!!

ಪಾಲಿಸಬೇಕು ಆರೋಗ್ಯ ಸೂತ್ರ ನಾವೀಗ
ವ್ಯಾಧಿ ಕ್ಷಮತೆ ಹೆಚ್ಚಿಸಿಕೊಂಡು
ಸಾಮಾಜಿಕ ಅಂತರ ಕಾಯ್ದುಕೊಂಡು
ಎಚ್ಚರದಿ ನಡೆಯಬೇಕೀಗ.!!

ನಮ್ಮ ಹಿರಿಯರ ಒಳ್ಳೆಯ
ಪದ್ಧತಿ ಪಾಲಿಸಿ
ಬಿಸಿ ಬಿಸಿ ಕಷಾಯಾದಿಗಳ
ತಯಾರಿಸಿ ಕುಡಿಯಬೇಕೀಗ.!!

ಸಂಯಮವ ಕಲಿತು
ಸಂಕಷ್ಟಕೆ ಸಿಲುಕಿದವರ ಸಲಹಿದಾಗ
ಆತ್ಮಸಂತೋಷ ದೊರೆವುದಾಗ
ಸಜ್ಜನರ ಸಂಗ ದೊರಕುವುದೇ
ಒಂದು ಸುಯೋಗ.!!

ಪ್ರಾರ್ಥನೆ ದೇವ ನಾಮಸ್ಮರಣೆ
ಯೋಗಾಭ್ಯಾಸ, ಸಂಗೀತ, ಗಾಯನಗಳ ಲಾಲಿಸುವ
ಪರಿಪಾಠಗಳೇ ಸದಾಚಾರಕ್ಕೆ ಪ್ರೇರಣೆ
ಬೆಳಗಲಿ ಮನದಲಿ ಸದ್ಭಾವನೆ.


ಅಪರ್ಣಾ ದೇವಿ
ದಾವಣಗೆರೆ.

Comments are closed.