ಹೊನ್ನಾಳಿ : ಹಿರಿಯ ನಾಗರಿಕರ ಸಹಕಾರ ಸಂಘಕ್ಕೆ ವೀರಪ್ಪ ಅಧ್ಯಕ್ಷ

ಹೊನ್ನಾಳಿ : ಹಿರಿಯ ನಾಗರಿಕರ ಸಹಕಾರ ಸಂಘಕ್ಕೆ ವೀರಪ್ಪ ಅಧ್ಯಕ್ಷ

ಹೊನ್ನಾಳಿ, ಜೂ.6- ಹೊನ್ನಾಳಿ ತಾಲ್ಲೂಕು ಹಿರಿಯ ನಾಗರಿಕರ ಸಹಕಾರ ಸಂಘದ ಅಧ್ಯಕ್ಷ ರಾಗಿ ಪಿ.ವೀರಪ್ಪ ಬೆನಕನಹಳ್ಳಿ, ಉಪಾಧ್ಯಕ್ಷರಾಗಿ ಎಚ್.ಪಿ.ಗುರುಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಎಚ್.ಎಸ್.ಸತೀಶ್ ತಿಳಿಸಿದರು. 

ಹಾಲಿ ಅಧ್ಯಕ್ಷ-ಉಪಾಧ್ಯಕ್ಷರಾಗಿದ್ದ ವರು ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಗಳಿಗೆ ಶನಿವಾರ ಚುನಾವಣೆ ನಿಗದಿ ಯಾಗಿತ್ತು. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಪಿ. ವೀರಪ್ಪ ಬೆನಕನಹಳ್ಳಿ, ಎಚ್.ಪಿ.ಗುರುಮೂರ್ತಿ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅಧ್ಯಕ್ಷರಾಗಿ ಪಿ.ವೀರಪ್ಪ ಬೆನಕನಹಳ್ಳಿ, ಉಪಾಧ್ಯಕ್ಷರಾಗಿ ಎಚ್.ಪಿ.ಗುರುಮೂರ್ತಿ ಅವಿರೋಧವಾಗಿ ಆಯ್ಕೆಯಾದರು.

ಚುನಾವಣೆ ಪ್ರಕ್ರಿಯೆಯಲ್ಲಿ ಸಂಘದ ನಿರ್ದೇಶಕರಾದ ಎಂ.ಬಾಬು, ಎಚ್.ನಾಗರಾಜಪ್ಪ, ಎಚ್.ಎನ್.ಚಂದ್ರಪ್ಪ, ಅಂಬ್ಲಿ ನರಸಪ್ಪ, ಎಚ್.ಎಂ.ಚಂದ್ರಕುಮಾರ, ಎಚ್.ಬಿ.ಚಂದ್ರಪ್ಪ ಬಿದರಗಡ್ಡೆ, ದೊಡ್ಡ ಹಾಲೇಶಪ್ಪ, ಗೌರಮ್ಮ, ಸುಶೀಲಮ್ಮ, ಸಂಘದ ಕಾರ್ಯದರ್ಶಿ ಸಿದ್ದಬಸಪ್ಪ ಇದ್ದರು.