ಹರಪನಹಳ್ಳಿ : ದೀಕ್ಷಾ ಮಹೋತ್ಸವದ ಅಂಗವಾಗಿ ಆಹಾರ ಧಾನ್ಯ ವಿತರಣೆ

ಹರಪನಹಳ್ಳಿ : ದೀಕ್ಷಾ ಮಹೋತ್ಸವದ ಅಂಗವಾಗಿ ಆಹಾರ ಧಾನ್ಯ ವಿತರಣೆ

ಹರಪನಹಳ್ಳಿ, ಮೇ 17- ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯರ  50ನೇ ದೀಕ್ಷಾ ಮಹೋತ್ಸವದ ಅಂಗವಾಗಿ ಪೌರ ಕಾರ್ಮಿಕರಿಗೆ, ರೋಗಿಗಳಿಗೆ, ನಿರಾಶ್ರಿತರಿಗೆ ಮತ್ತು ಆರಕ್ಷಕ ಸಿಬ್ಬಂದಿಗಳಿಗೆ ಸ್ಥಳೀಯ ಜೈನ್ ಅಸೋಸಿಯೇಷನ್ ವತಿಯಿಂದ ಊಟದ ವಿತರಣೆ  ಮಾಡಲಾಯಿತು.

ಈ ಸಂದರ್ಭದಲ್ಲಿ ದಿಗಂಬರ ಜೈನ್ ಸಮಾಜದ ಅಧ್ಯಕ್ಷ ಹೆಚ್. ಪದ್ಮನಾಭ್, ಹೂವಿನ ಹಡಗಲಿ ಪುರಸಭೆ ಮಾಜಿ ಸದಸ್ಯ ಸಂತೋಷ್ ಜೈನ್, ಎನ್.ಕೆ. ಅಜಯ ಕುಮಾರ್, ಆರ್. ಪದ್ಮರಾಜ ಜೈನ್, ಶ್ರೇಯಸ್ ಜೆ.ಕೆ., ಬಿ. ಶೀತಲ್‌ಕುಮಾರ್‌, ಬಿ. ನವೀನ್ ಕುಮಾರ್, ಅಭಿನಂದನ್, ಬಾಹುಬಲಿ ಪಾಟೀಲ್, ಪದ್ಮರಾಜ ಜೈನ್, ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಇನ್ನಿತರರಿದ್ದರು.