ಸಾಮಾಜಿಕ ಅಂತರದಿಂದ ಮಾತ್ರ ವೈರಸ್ ತಡೆ ಸಾಧ್ಯ

ಸಾಮಾಜಿಕ ಅಂತರದಿಂದ ಮಾತ್ರ ವೈರಸ್ ತಡೆ ಸಾಧ್ಯ

ಹರಿಹರದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬೀಳಗಿ

ಹರಿಹರ, ಮೇ 21- ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಹೋಗುವಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದರೆ ಮಾತ್ರ ಕೊರೊನಾ ವೈರಸ್ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ನಗರಸಭೆ ಸದಸ್ಯ ಮುಜಾಮಿಲ್ ಬಿಲ್ಲು ಅವರು ನಗರದ ಗಾಂಧಿನಗರದಲ್ಲಿ ಮೊನ್ನೆ ಏರ್ಪ ಡಿಸಿದ್ದ ಆಹಾರದ ಕಿಟ್ ವಿತರಣಾ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದಾವಣಗೆರೆ ನಗರದ ಬಾಷಾ ನಗರದ ಮತ್ತು ಜಾಲಿ ನಗರದಲ್ಲಿ ಸಾರ್ವಜನಿಕರು ಅಂತರ ಕಾಯ್ದುಕೊಳ್ಳಲು ವಿಫಲವಾದ ಕಾರಣ ಇಂದು ದಾವಣಗೆರೆಯಲ್ಲಿ ಅತಿ ಹೆಚ್ಚಿನ ಪ್ರಮಾ ಣದಲ್ಲಿ ಕೊರೊನಾ ರೋಗದ ಲಕ್ಷಣಗಳು ಕಂಡುಬರುವುದಕ್ಕೆ ದಾರಿಯಾಗಿದೆ. 

ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿಗಳನ್ನು ಎಷ್ಟು ಸರಿಯಾಗಿ ಪಾಲನೆಯನ್ನು ಮಾಡುತ್ತಾರೆಯೋ  ಅಷ್ಟರ ಮಟ್ಟಿಗೆ ಈ ರೋಗದಿಂದ ದೂರ ಇರುವುದಕ್ಕೆ ಸಾಧ್ಯವಾಗುತ್ತದೆ.

ಕೊರೊನಾ ವೈರಸ್ ಸೇವೆಯಲ್ಲಿ ಜಿಲ್ಲಾಡಳಿತದ ಕಾರ್ಯ ವೈಖರಿ ಶ್ಲ್ಯಾಘನೀಯ. – ಹೆಚ್.ಎಸ್.ಶಿವಶಂಕರ್, ಮಾಜಿ ಶಾಸಕ

ಸಾರ್ವಜನಿಕರು ಮನೆಯಿಂದ ಹೊರಗಡೆ ಹೋಗುವಾಗ ಮಾಸ್ಕ್ ಧರಿಸಬೇಕು, ಸಾರ್ವಜ ನಿಕರಿಂದ  ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಆರೋಗ್ಯದಲ್ಲಿ ವ್ಯತ್ಯಾಸಗಳು ಕಂಡು ಬಂದರೆ ಹತ್ತಿರದ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳುವುದಕ್ಕೆ ಮುಂದಾಗಬೇಕು. ಈ ರೀತಿಯಲ್ಲಿ ಪ್ರತಿನಿತ್ಯ ಮಾಡುವುದಕ್ಕೆ ಮುಂದಾ ದರೆ ಈ ಕೊರೊನಾ ವೈರಸ್ ರೋಗವನ್ನು ತಡೆಗಟ್ಟಲು ಸಾಧ್ಯ ಎಂದು ಹೇಳಿದರು.

ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್ ಮಾತನಾಡಿ, ಯಾರು ಹೆಚ್ಚು ಅನುಕೂಲವಾ ಗಿರುತ್ತಾರೆ. ಅಂತಹವರು ನೆರವು ನೀಡುವುದಕ್ಕೆ ಮುಂದಾಗಬೇಕು. ಅದರಿಂದ ಬಡವರಿಗೆ ಆತ್ಮಸ್ಥೈರ್ಯ ತುಂಬಿದಂತಾಗುತ್ತದೆ. ನಗರದಲ್ಲಿ ಬಹುತೇಕ ಜನರು ಬಡವರಿದ್ದಾರೆ. ಅವರಿಗೆ ಸರ್ಕಾರದ ನೆರವು ಬಹಳ ಅವಶ್ಯಕತೆ ಇರುತ್ತದೆ. ಆದ್ದರಿಂದ, ಯಾರು ಅತಿಯಾಗಿ ಬಡವರು ಇರು ತ್ತಾರೋ ಅಂತಹ ಕುಟುಂಬಗಳನ್ನು ಗುರುತಿಸಿ ಅವರಿಗೆ ಸಹಾಯ ಮಾಡಲು ಮುಂದಾಗಬೇಕು.

ಕೊರೊನಾ ರೋಗದ ಸಮಸ್ಯೆ ಬಂದಾಗಿನಿಂದ ಇಲ್ಲಿಯವರೆಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ, ತಾಲ್ಲೂಕು ಆಡಳಿತ, ನಗರಸಭೆ ಸೇರಿದಂತೆ ಇತರೆ ಇಲಾಖೆಯವರ ಕಾರ್ಯವೈಖರಿ ನಿಜಕ್ಕೂ ಜನ ಮೆಚ್ಚುಗೆ ಪಡೆದಿದೆ. ಇದೇ ರೀತಿಯಲ್ಲಿ ಮುಂದೆಯೂ ಸಹ ಹೆಚ್ಚಿನ ಪ್ರಮಾಣದಲ್ಲಿ ತಮಗೆ ವಹಿಸಿರುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ ಕೊರೊನಾ ವೈರಸ್ ರೋಗವನ್ನು ತಡೆಗಟ್ಟಲು ಮುಂದಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ, ನಗರಸಭೆ ಪೌರಾಯುಕ್ತರಾದ ಎಸ್. ಲಕ್ಷ್ಮೀ, ನಗರಸಭೆ ಸದಸ್ಯರಾದ ಮುಜಾಮಿಲ್ ಬಿಲ್ಲು,
ಪಿ.ಎನ್‌. ವಿರೂಪಾಕ್ಷ, ನಗರಸಭೆ ಎಇಇ ದಳವಾಯಿ, ಜೆಡಿಎಸ್ ಪಕ್ಷದ ಮುಖಂಡರಾದ ಹಬೀಬ್ಉಲ್ಲಾ, ಜಿ.ನಂಜಪ್ಪ, ಅಂಗಡಿ ಮಂಜುನಾಥ, ರಾಜು ಕತ್ತಲಗೇರಿ ಹಾಗೂ ಮತ್ತಿತರರಿದ್ದರು.

Leave a Reply

Your email address will not be published.