ಬ್ಯೂಟಿಪಾರ್ಲರ್ ಅಸೋಸಿಯೇಷನ್ ಸದಸ್ಯರಿಗೆ ಡಾ. ಪ್ರಭಾ ಕಿಟ್ ವಿತರಣೆ

ಬ್ಯೂಟಿಪಾರ್ಲರ್ ಅಸೋಸಿಯೇಷನ್ ಸದಸ್ಯರಿಗೆ ಡಾ. ಪ್ರಭಾ ಕಿಟ್ ವಿತರಣೆ

ದಾವಣಗೆರೆ, ಮೇ 21- ಜಿಲ್ಲಾ ಬ್ಯೂಟಿ ಪಾರ್ಲರ್ ಅಸೋಸಿಯೇಷನ್ ಸದಸ್ಯರುಗಳ ಮನವಿ ಮೇರೆಗೆ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಆಹಾರದ ಕಿಟ್‌ಗಳನ್ನು ನೀಡಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಬ್ಯೂಟಿ ಪಾರ್ಲರ್ ಸಿಬ್ಬಂದಿ ವರ್ಗಗಳಿಗೆ ಜೀವನ ನಿರ್ವಹಣೆ ಕಷ್ಟಕರವಾಗಿರುವುದಾಗಿ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ  ಎಸ್ಸೆಸ್, ಆಹಾರದ ಕಿಟ್‌ಗಳನ್ನು ನೀಡಿ ಸಹಾಯ ಮಾಡಿದ್ದಾರೆ. ಡಾ. ಪ್ರಭಾ ಮಲ್ಲಿಕಾರ್ಜುನ್, ದಿನೇಶ್ ಶೆಟ್ಟಿ, ಗಣೇಶ್ ಹುಲ್ಲುಮನೆ, ದೇವರಮನೆ ಶಿವಕುಮಾರ್, ನಾಗರಾಜ್ ಇನ್ನಿತರರು ಕಿಟ್‌ಗಳನ್ನು ವಿತರಿಸಿದರು. ಅಸೋಸಿಯೇಷನ್‌ ಸದಸ್ಯರಾದ ಕವಿತಾ ಚಂದ್ರಶೇಖರ್, ಎಸ್.ಕೆ. ಆಶಾ, ಗೀತಾ ರೆಡ್ಡಿ, ಪದ್ಮಾವತಿ, ಸೋನಿ, ಸೌಮ್ಯ, ಗಿರಿಜಾ, ಪದ್ಮ, ವನಜಾಕ್ಷಿ, ಇನ್ನಿತರರು ಹಾಜರಿದ್ದರು. 

Leave a Reply

Your email address will not be published.