ದೇವದಾಸಿ ಪದ್ಧತಿ ತೊಲಗಿಸಲು ಸರ್ಕಾರದಿಂದ ವಿವಿಧ ಸೌಲಭ್ಯ

ದೇವದಾಸಿ ಪದ್ಧತಿ ತೊಲಗಿಸಲು ಸರ್ಕಾರದಿಂದ ವಿವಿಧ ಸೌಲಭ್ಯ

ಹರಪನಹಳ್ಳಿ ಶಾಸಕ ಜಿ.ಕರುಣಾಕರ ರೆಡ್ಡಿ

ಹರಪನಹಳ್ಳಿ, ಮೇ 21- ದೇವದಾಸಿ ಎಂಬ ಅನಿಷ್ಟ ಪದ್ಧತಿ ತೊಲಗಬೇಕು, ಅದಕ್ಕಾಗಿ ಸರ್ಕಾರ ವಿವಿಧ ಸೌಲಭ್ಯಗಳನ್ನು ನೀಡಿದೆ. ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಅವರು ಕರೆ ನೀಡಿದರು.

ತಾಲ್ಲೂಕಿನ ಮಾಜಿ ದೇವದಾಸಿಯರಿಗೆ ಪಟ್ಟಣದ ತಾಲ್ಲೂಕು ಪಂಚಾಯ್ತಿಯ ಸಾಮರ್ಥ್ಯ ಸೌಧದಲ್ಲಿ ಅಜೀಮ್ ಪ್ರೇಮ್ ಜಿ ಹಾಗೂ ಸೀಡ್ಸ್ ಸಂಸ್ಥೆಗಳ ಸಂಯುಕ್ತಾಶ್ರಯ ದಲ್ಲಿ  ನೀಡಿದ್ದ ಆಹಾರದ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಸಮಾನತೆ ತರಲು ಸರ್ಕಾರ ಶ್ರಮಿಸುತ್ತಿದ್ದು, ಮುಖ್ಯವಾಗಿ ಸಮಾಜದಲ್ಲಿ ಬೇರೂರಿದ್ದ ದೇವದಾಸಿ ಪದ್ದತಿ, ಮೂಢನಂಬಿಕೆ ಸೇರಿದಂತೆ  ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಿ ಅಂತವರ ಹಾಗೂ ಅವರ ಮಕ್ಕಳಿಗೆ ಶಿಕ್ಷಣ, ಮಾಸಿಕ ಸಾವಿರ ರೂ. ಸೇರಿದಂತೆ ಅವರಿಗೆ ಬ್ಯಾಂಕ್‍ಗಳಲ್ಲಿ ಸಾಲ ಸೌಲಭ್ಯ ಒದಗಿಸಿ ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ಸರ್ಕಾರ ಶ್ರಮಿಸುತ್ತಿದೆ ಎಂದರು. 

ಸಾಮಾಜಿಕ ವಿದ್ಯಾ ಮತ್ತು ಆರ್ಥಿಕ ಅಭಿವೃದ್ಧಿ ಸಂಸ್ಥೆ (ಸೀಡ್ಸ್) ಯ ಸಂಜೀವಯ್ಯ ಮಾತನಾಡಿ, ತಾಲ್ಲೂಕಿನ 48 ಹಳ್ಳಿಗಳ 656 ಮಾಜಿ ದೇವದಾಸಿ ಫಲಾನುಭವಿಗಳಿಗೆ  ಆಹಾರ ಕಿಟ್ ವಿತರಣೆ ಮಾಡುತ್ತೇವೆ ಎಂದರು.

ಡಿವೈಎಸ್ಪಿ ಮಲ್ಲೇಶ್‌ ದೊಡ್ಮನಿ, ತಹಶೀಲ್ದಾರ್ ಡಾ.ನಾಗವೇಣಿ, ಸಿಪಿಐ ಕೆ.ಕುಮಾರ್ ಪಿಎಸ್‍ಐ ಕೆ.ಪ್ರಕಾಶ್, ಇ.ಓ. ಅನಂತರಾಜ್, ರಾಜ್ಯ ದೇವದಾಸಿ ವಿಮೋಚನಾ ಸಂಘದ ಅಧ್ಯಕ್ಷೆ ಟಿ.ವಿ.ರೇಣುಕಮ್ಮ, ಜಿಲ್ಲಾ ದೇವದಾಸಿ ಪುನರ್‌ವಸತಿ ಯೋಜನೆಯ ಅಧಿಕಾರಿ ಪ್ರಜ್ಞಾ ಪಾಟೀಲ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮಂಜಾನಾಯ್ಕ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಉಪಾಧ್ಯಕ್ಷ ನಿಟ್ಟೂರು ಸಣ್ಣಹಾಲಪ್ಪ,  ಬಿಜೆಪಿ ಎಸ್.ಟಿ. ಘಟಕದ ತಾಲ್ಲೂಕು ಅಧ್ಯಕ್ಷ ಆರ್.ಲೋಕೇಶ್, ಬಾಗಳಿ ಕೊಟ್ರೇಶಪ್ಪ, ಮುಖಂಡರಾದ ಎಂ.ಪಿ.ನಾಯ್ಕ್, ಆರ್. ಕರೇಗೌಡ, ಯಡಿಹಳ್ಳಿ ಶೇಖರಪ್ಪ, ರಾಘವೇಂದ್ರಶೆಟ್ಟಿ, ಯು.ಪಿ. ನಾಗರಾಜ್, ತಿಮ್ಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು. 

Leave a Reply

Your email address will not be published.