ವಾರಿಯರ್ಸ್‌ಗೆ ಚ್ಯವನ್‌ ಪ್ರಾಶ್‌ ಕೊಡುಗೆ

ವಾರಿಯರ್ಸ್‌ಗೆ ಚ್ಯವನ್‌ ಪ್ರಾಶ್‌ ಕೊಡುಗೆ

ದಾವಣಗೆರೆ, ಮೇ 20- ಕೋವಿಡ್‌ ವಾರಿಯರ್ಸ್‌ಗೆ ಆಯುರ್ವೇದಿಕ್‌ ರೋಗ ನಿರೋಧಕ ಲೇಹ (ಚ್ಯವನ್‌ ಪ್ರಾಶ್) ವನ್ನು ಅಶ್ವಿನಿ ಮೆಡಿಕಲ್‌ ಕಾಲೇಜ್‌ ಮತ್ತು ಪಿ.ಜಿ. ಸೆಂಟರ್‌ ವತಿಯಿಂದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರುಗಳಿಗೆ ನೀಡಲಾಯಿತು.  ಔಷಧಿ ಮತ್ತು ಮಲ್ಮಿನ ಜುಗ್ಗತ್‌ ಫಾರ್ಮಾ ಹೆಲ್ತ್‌ ಡ್ರಿಂಕ್‌ಗಳು  ಕೊರೊನಾ ಸಮಯದಲ್ಲಿ ರೋಗಬಾರದಂತೆ ತಡೆಗಟ್ಟಲು ಅತ್ಯಂತ ಪ್ರಭಾವಿ ಲೇಹವಾಗಿದೆ ಎಂದು ಅಶ್ವಿನಿ ಮೆಡಿಕಲ್‌ ಕಾಲೇಜ್‌ ಮತ್ತು ಪಿ.ಜಿ. ಸೆಂಟರ್‌ ಪ್ರಾಂಶುಪಾಲ ಡಾ. ಮೃತ್ಯುಂಜಯ ಎನ್‌. ಹಿರೇಮಠ್‌ ಅವರು ತಿಳಿಸಿದ್ದಾರೆ. 

ಅಲ್ಲದೇ, ಮುಂದಿನ ಆರೋಗ್ಯ ಪೇಯವೂ ಕಿತ್ತಳೆ ಹಣ್ಣಿನ ರಸ, ಮಾವಿನ ಹಣ್ಣಿನ ರಸ, ಅರಿಶಿಣ, ಬ್ರಾಹ್ಮಿ ಮುಂ ತಾದ ಔಷಧೀಯ ಗಿಡ ಮೂಲಿಕೆಗಳ ಸತ್ವವನ್ನು ಹೊಂದಿ ರುತ್ತದೆ. ಈ ಔಷಧೀಯ ಇಮ್ಯೂನಿಟಿ ಬೂಸರ್‌ಗಳನ್ನು ಕೊರೊನಾ ರೋಗದ ವಿರುದ್ಧ ಹೋರಾಡುತ್ತಿರುವ ಕೋವಿಡ್‌ ವಾರಿಯರ್ಸ್‌ಗೆ ಕಿಟ್‌ಗಳನ್ನು ಕೊಡಲು ಉದ್ದೇಶಿಸಿರುತ್ತೇವೆ ಎಂದು ಅವರು ಜಿಲ್ಲಾಧಿ ಕಾರಿಗಳಿಗೆ ವಿವರಿಸಿದರು. ಈ ಸಂದರ್ಭದಲ್ಲಿ  ಡಾ. ಶಂಕರಗೌಡ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.