ರಾಮಕೃಷ್ಣ ಆಶ್ರಮದಿಂದ ಛಲವಾದಿ ಸಮಾಜದವರಿಗೆ ಫುಡ್‌ ಕಿಟ್‌ ವಿತರಣೆ

ರಾಮಕೃಷ್ಣ ಆಶ್ರಮದಿಂದ ಛಲವಾದಿ ಸಮಾಜದವರಿಗೆ ಫುಡ್‌ ಕಿಟ್‌ ವಿತರಣೆ

ಮಲೇಬೆನ್ನೂರು, ಮೇ 20- ಜಿಗಳಿ, ನಂದಿತಾವರೆ, ಹಾಲಿವಾಣ, ಕುಣೆಬೆಳಕೆರೆ ಮತ್ತು ಹರಿಹರ ನಗರದಲ್ಲಿರುವ ಛಲವಾದಿ ಸಮಾಜದ 162 ಬಡ ಕುಟುಂಬಗಳಿಗೆ ಹರಿಹರ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಸ್ವಾಮಿ ಶಾರದೇಶಾನಂದ ಮಹಾರಾಜ್‌ ಜೀ ಅವರು ಫುಡ್‌ ಕಿಟ್‌ಗಳನ್ನು ವಿತರಿಸಿದರು. ಈ ಪುಡ್‌ ಕಿಟ್‌ಗಳ ವಿತರಣೆಗಾಗಿ ವಾಣಿ ನರಹರಿ 25 ಸಾವಿರ ರೂ., ಮಮತಾ ರವೀಂದ್ರ 15 ಸಾವಿರ ರೂ., ರಾಘವೇಂದ್ರ ಕೊಂಡಜ್ಜಿ 2 ಸಾವಿರ ರೂ., ಮಲ್ಲಿಕಾರ್ಜುನ್‌ ಅಂಗಡಿ 2 ಸಾವಿರ ರೂ., ಎಂ.ಗಗನ್‌ ಕಾಕೋಳ್‌ 1 ಸಾವಿರ ರೂ. ಮತ್ತು ಗೌರಿಶಂಕರ್‌ ಪ್ರಾವಿಜನ್‌ ಸ್ಟೋರ್‌ ಇವರು 7 ಫುಡ್‌ ಕಿಟ್‌ ನೀಡಿದ್ದಾರೆಂದು ಸ್ವಾಮೀಜಿ ತಿಳಿಸಿದರು.

ತಹಶೀಲ್ದಾರ್‌ ರಾಮಚಂದ್ರಪ್ಪ, ಛಲವಾದಿ ಸಮಾಜದ ಹೆಚ್‌. ಶಿವಪ್ಪ, ಪ್ರಕಾಶ್‌ ಮತ್ತಿತರರು ಈ ವೇಳೆ ಹಾಜರಿದ್ದರು.