ಕೊರೊನಾ ಹರಡುವ ವಿಧಾನ ಹಾಗೂ ತಡೆಗಟ್ಟುವಿಕೆ

ಕೊರೊನಾ ಹರಡುವ ವಿಧಾನ ಹಾಗೂ ತಡೆಗಟ್ಟುವಿಕೆ

ಕೊರೊನಾ ವೈರಸ್‌ಗಳು ಆರ್ಎನ್ಎ ಅಂಶವುಳ್ಳ ಕೊರೊನಾ ವೈರಿಡೇ ಗುಂಪಿಗೆ ಸೇರಿವೆ. ಕೊರೊನಾ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಕಿರೀಟವೆಂದು ಅರ್ಥ. ಈ ವೈರಸ್‌ಗಳು ಕಿರೀಟದ ಆಕಾರವನ್ನು ಹೋಲುತ್ತವೆ.

ಕೊರೊನಾ ವೈರಸ್‌ಗಳು ಪ್ರಾಣಿಗಳಲ್ಲಿ ಮತ್ತು ಮಾನವರಲ್ಲಿ ಕೆಲವು ರೋಗಗಳನ್ನುಂಟು ಮಾಡುತ್ತವೆ. ನೆಗಡಿಯಂತಹ ಸಾಮಾನ್ಯ ರೋಗದಿಂದ ಹಿಡಿದು ಸಾರ್ಸ್, ಮೆರ್ಸ್‌ನಂತಹ ಮಾರಕ ತೀಕ್ಷ್ಣ ರೋಗಗಳನ್ನುಂಟು ಮಾಡುತ್ತವೆ.

ಕೋವಿಡ್-19 ಕಾಯಿಲೆ ಹೊಸತಳಿಯ ವೈರಾಣುಗಳಿಂದ ಉಂಟಾಗುತ್ತದೆ. ನೆಗಡಿಯಂತೆ ಆರಂಭವಾಗಿ ನ್ಯೂಮೋನಿಯಾ ಸ್ಥಿತಿಗೆ ಮುಂದುವರೆದು ಮಾರಣಾಂತಿಕವಾಗುತ್ತದೆ.

ಹರಡುವ ವಿಧಾನ ಹಾಗೂ ತಡೆಗಟ್ಟುವಿಕೆ : ನೇರವಾಗಿ ಸೋಂಕಿತ ರೋಗಿಯ ಉಸಿರಾಟದ ಅಂಗಗಳಲ್ಲಿ ಹೆಚ್ಚಾಗಿರುವ ವೈರಾಣು ಗಳು ಸೀನಿದಾಗ, ಕೆಮ್ಮಿದಾಗ, ಉಗುಳಿದಾಗ ಉಂಟಾ ಗುವ ತುಂತುರು ಹನಿಗಳಿಂದ 3 ರಿಂದ 6 ಅಡಿಗಳ ಸಮೀಪದಲ್ಲಿನ ವ್ಯಕ್ತಿಗಳಿಗೆ ನೇರವಾಗಿ ಹರಡಬ ಹುದು. ವ್ಯಕ್ತಿಗಳ ನಡುವಿನ ಅಂತರ 6 ಅಡಿಗೂ ಹೆಚ್ಚಾಗಿದ್ದರೆ ವೈರಾಣು ತಟ್ಟುವುದಿಲ್ಲ. ರೋಗಿಯ ತುಂತುರು ಹನಿಗಳು ಇತರರ ಮುಖದ ಮೇಲೆ (ಬಾಯಿ, ಮೂಗು) ಮೇಲೆ ಬೀಳದಂತೆ ಮುಖಕ್ಕೆ ಮುಸ್ಕ್‌ ಹಾಕಿಕೊಳ್ಳುವುದರಿಂದ ರೋಗಿಯಿಂದ ಇತರರಿಗೆ, ಪರಿಸರಕ್ಕೆ ಹರಡುವುದನ್ನು ತಡೆಗಟ್ಟ ಬಹುದು. ಆರೋಗ್ಯವಂತ ವ್ಯಕ್ತಿಗಳು ಮುಸುಕು ಧರಿಸುವುದರಿಂದ ಅವರಿಗೆ ರಕ್ಷಣೆಯಾಗುತ್ತದೆ.

ಈ ರೀತಿ ಕೈಗಳ ಮೂಲಕ ವೈರಾಣುಗಳು ತಲುಪದಂತೆ ಕೈಗಳನ್ನು ಸ್ಯಾನಿ ಟೈಸರ್ ದ್ರಾವಣದಿಂದ ಸವರಿಕೊಳ್ಳುವುದ ರಿಂದ, ಸೋಪು ನೀರಿ ನಿಂದ ತೊಳೆ ದುಕೊಳ್ಳುವು ದರಿಂದ ಶುಚಿಗೊಳಿ ಸಬೇಕು.ಸೋಂಕಿತ ಅಥವಾ ಶಂಕಿತ ವ್ಯಕ್ತಿಗಳು ಇರುವ ಸುತ್ತಲಿನ ವಸ್ತುಗಳನ್ನು, ನೆಲ, ಗೋಡೆಯನ್ನು ಕ್ರಿಮಿನಾಶಕ ದ್ರವಗಳಿಂದ ಸ್ವಚ್ಛಗೊಳಿ ಸಬೇಕು. ಪರಿಸರ ಸ್ವಚ್ಛತೆ ಹಾಗೂ ವೈಯಕ್ತಿಕ ಸ್ವಚ್ಛತೆ ಮೂಲಕ ಸೋಂಕನ್ನು ತಡೆಗಟ್ಟಬಹುದು.

ಕೋವಿಡ್-19  ಕಾಯಿಲೆಯ ವರ್ತನೆ : ಕೊರೊನಾ ವೈರಾಣುಗಳು ಆರೋಗ್ಯವಂತ ವ್ಯಕ್ತಿ ಯನ್ನು ಪ್ರವೇಶಿಸಿದ ಕೂಡಲೇ ಕಾಯಿಲೆ ಕಾಣಿಸಿ ಕೊಳ್ಳುವುದಿಲ್ಲ. ಸಾಮಾನ್ಯವಾಗಿ 7-14 ದಿನಗಳ ನಂತರ ರೋಗ ಲಕ್ಷಣಗಳು ಕಾಣಲಾರಂಭಿಸುತ್ತವೆ. ಜ್ವರ, ನೆಗಡಿಯಂತೆ ಆರಂಭವಾಗಿ ನ್ಯೂಮೋನಿಯಾ ದಂತಹ ತೀಕ್ಷ್ಣ ರೋಗವಾಗಿ ಬೆಳೆಯಬಹುದು.

ಸೋಂಕಿತರಲ್ಲಿ ಶೇ. 80 ರಷ್ಟು ಲಕ್ಷಣಗಳಿಲ್ಲದೆ ಸ್ವಗುಣಮುಖರಾಗುತ್ತಾರೆ. ಶೇ. 15 ಮಧ್ಯಮ ಮಟ್ಟದಲ್ಲಿ ನರಳಿ ಗುಣವಾಗುತ್ತಾರೆ. ಶೇ. 5 ತೀವ್ರತರ ರೋಗವಾಗಿ ಕೃತಕ ಉಸಿರಾಟದ ನೆರವು ಬೇಕಾಗಬಹುದು. ಶೇ. 2ರಷ್ಟು ಸಾವಿನ ಸಂಭವವಿರುತ್ತದೆ. ಶೇ. 80 ರಷ್ಟು ಸಾವುಗಳು ಹಿರಿಯ ನಾಗರಿಕರಲ್ಲಿ ಇತರೆ ರೋಗಗಳು (ಉಸಿರಾಟ, ಹೃದಯ, ಸಕ್ಕರೆ, ಮೂತ್ರಪಿಂಡ ರೋಗ) ಇರುವವರಲ್ಲಿ ಸಂಭವಿಸುತ್ತವೆ.

ಕೋವಿಡ್-19 ಕಾಯಿಲೆಗೆ ಚಿಕಿತ್ಸೆ : ಕೋವಿಡ್ ತಡೆಯಲು ಲಸಿಕೆ ಆಗಲಿ ಗುಣಪಡಿಸಲು ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ. ಸಂಶೋಧನೆಗಳು ಜಗತ್ತಿನಾದ್ಯಂತ ನಡೆಯುತ್ತಿವೆ. ರೋಗ ನಿರೋಧಕ ಶಕ್ತಿಯು ರೋಗ ಬಾರದಂತೆ/ರೋಗ ಬಂದರೂ ಮರಣ ಹೊಂದದೆ ಚೇತರಿಸಿಕೊಳ್ಳುವಲ್ಲಿ ಹೆಚ್ಚು ಮುಖ್ಯವಾಗಿರುತ್ತದೆ. ಆದ್ದರಿಂದ ಎಲ್ಲರೂ ಸ್ವಚ್ಛತೆ, ಸಮತೋಲನ ಆಹಾರ, ವಿಹಾರ, ವ್ಯಾಯಾಮ, ಯೋಗ, ಧ್ಯಾನ, ಕಷಾಯಗಳ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು.

ಸಾರ್ವಜನಿಕವಾಗಿ ಕೊರೊನಾ ನಿಯಂತ್ರಿಸಲು ಸೂಚಿಸಿರುವ ವಿಧಾನಗಳಾದ ಕೈ ತೊಳೆದು ಕೊಳ್ಳುವುದು, ಸಾಮಾಜಿಕ ಅಂತರ ಪಾಲಿಸುವುದು, (3-6 ಅಡಿ, 1-2 ಮೀಟರ್ ಅಂತರ) ಮುಖಗವಸು ಹಾಕಿಕೊಳ್ಳುವುದು, ಗಂಟಲು ದ್ರವದ ಪರೀಕ್ಷೆ, ಸೋಂಕಿತರನ್ನು ಪ್ರತ್ಯೇಕಿಸುವುದು ಮತ್ತು ಚಿಕಿತ್ಸೆ ನೀಡುವುದು, ಶಂಕಿತರನ್ನು ಸೋಂಕಿತರ ಸಂಪರ್ಕದಲ್ಲಿದ್ದವರನ್ನು 14 ದಿನ ನಿರೀಕ್ಷಣೆಗಾಗಿ ಪ್ರತ್ಯೇಕಿಸುವುದು, ಆರೋಗ್ಯವಂತರು, ಸೋಂಕಿನ ಸಂಪರ್ಕ ಹೊಂದದಂತೆ ಮನೆಯಲ್ಲಿಯೇ ಇರುವುದು ಜನದಟ್ಟಣೆಯಾಗುವ ಸ್ಥಳ, ಸಂದರ್ಭ, ಸಂಸ್ಥೆಗಳನ್ನು ಮುಚ್ಚುವುದು. ಮನೆಯಿಂದ ಹೊರಗೆ ಹೋಗದಂತೆ ಇತರರು ಆ ಪ್ರದೇಶಗಳಿಗೆ ಬರದಂತೆ ಬಿಗಿಯಾದ ಕಾನೂನು ಜಾರಿಗೊಳಿಸುವುದು.

ರೋಗಿಗಳ ರಕ್ಷಾ ಕವಚವಾಗಿರುವ ಆರೋಗ್ಯ ಕಾರ್ಯಕರ್ತರು, ವೈದ್ಯರು, ಶುಶ್ರೂಷಕರು, ಆಶಾ, ಕ್ಲಿನಿಕಲ್‌ ಲ್ಯಾಬ್‌ ಟೆಕ್ನೀಷಿಯನ್ಸ್, ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ಹಾಗೂ ಯಾರೂ ಸೋಂಕಿತ ರೋಗಿಗಳ ಸಂಪರ್ಕಕ್ಕೆ ಬರುವ ಸಂಭವವಿದೆಯೋ ಅವರೆಲ್ಲ ರಿಗೂ ನಿರ್ದಿಷ್ಟಪಡಿಸಿದ ವೈಯಕ್ತಿಕ ರಕ್ಷಣಾ ಉಪಕ ರಣಗಳು ಅವಶ್ಯವಿದ್ದಷ್ಟೂ ಲಭ್ಯವಿರಬೇಕು. ಅವುಗಳನ್ನು ಸಿಬ್ಬಂದಿಗಳು ಸೂಕ್ತವಾಗಿ ಉಪಯೋಗಿಸಿ ತಮ್ಮನ್ನು ರಕ್ಷಿಸಿಕೊಂಡು ಇತರರನ್ನು ರಕ್ಷಿಸಬೇಕು. ನಮಗಾಗಿ ಹಗಲಿರುಳು ಹೋರಾಡುತ್ತಿರುವ ಕೋವಿಡ್-19 ಯೋಧರಿಗೆ ಎಲ್ಲಾ ಸಾರ್ವಜನಿಕರೂ ಸಹಕರಿಸಬೇಕು.


ಡಾ. ಎ. ನಾಗರಾಜಾಚಾರಿ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು,
ಜೆಜೆಎಂ ಮೆಡಿಕಲ್ ಕಾಲೇಜ್, ದಾವಣಗೆರೆ.

Leave a Reply

Your email address will not be published.