ಕೊರೊನಾ ಜೊತೆ ಬಾಳಬೇಕಾದ ಅನಿವಾರ್ಯತೆ, ಎಚ್ಚರ ವಹಿಸಿರಿ

ಕೊರೊನಾ ಜೊತೆ ಬಾಳಬೇಕಾದ ಅನಿವಾರ್ಯತೆ, ಎಚ್ಚರ ವಹಿಸಿರಿ

ದಾವಣಗೆರೆ, ಮೇ 20- ಕೊರೊನಾ ಮುಕ್ತ ಪ್ರದೇಶ ನಿರ್ಮಾಣಕ್ಕೆ ಸ್ವಚ್ಛತೆಗೆ ಆದ್ಯತೆಯಿರಲಿ. ಸಾಮಾಜಿಕ ಅಂತರದ ಅವಶ್ಯಕತೆ ಅರಿಯಿರಿ ಎಂದು ಚಿತ್ರದುರ್ಗ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು. 

ದಾವಣಗೆರೆ ನಗರದ ಮುದ್ದಾಭೋವಿ ಕಾಲೋನಿ, ವೆಂಕಭೋವಿ ಕಾಲೋನಿ, ಬೂದಾಳ್ ರಸ್ತೆ, ಚಿಕ್ಕಮ್ಮಣ್ಣಿ ದೇವರಾಜ ಅರಸ್ ಬಡಾವಣೆಯ ಬಡಜನರಿಗೆ 1,000 ದವಸ, ಧಾನ್ಯಗಳ ಕಿಟ್ ಗಳನ್ನು ವಿತರಿಸಿದರು.

ಆಹಾರ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು, ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಮುಖದ ಮಾಸ್ಕ್‍ಗಳು, ಕೈ ಗವಸು ಮತ್ತು ಸ್ಯಾನಿಟೈಸರ್‍ಗ ಳನ್ನು ಕಡ್ಡಾಯವಾಗಿ ಬಳಸಬೇಕು. ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಮ್ಮ ಪರಿಸರ ಸ್ವಚ್ಛತೆಯಿಂದ ಕೂಡಿದ್ದರೆ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ. ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡಬೇಕು.

ಕೊರೊನಾ ಜೊತೆಯಲ್ಲಿ ಬಾಳಬೇಕಾದ ಅನಿವಾರ್ಯ ತೆಯ ಸಂದಿಗ್ಧ ಕಾಲಘಟ್ಟದಲ್ಲಿದ್ದೇವೆ. ಜಾಗೃತಿಯಿಂದ ಎಚ್ಚರ ವಹಿಸಿ ಕೆಲಸ ಮಾಡಬೇಕು. ಕೊರೊನಾ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ. 

ಈ ಕುರಿತು ಜಾಗೃತ ರಾಗಬೇಕು. ಕೊರೊನಾ ಸಾಂಕ್ರಾಮಿಕ ರೋಗ ಆಗಿದ್ದು ಹರಡದಂತೆ ಅಗತ್ಯ ಕ್ರಮ ವಹಿಸಿ ರೋಗ ತಡೆಯವ ನಿಟ್ಟಿನಲ್ಲಿ ನಮ್ಮ ಕರ್ತವ್ಯ ನಡೆಸಬೇಕೆಂದು ತಿಳಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಭೋವಿ ಸಂಘದ ಕಾರ್ಯಾಧ್ಯಕ್ಷ ಜಯಣ್ಣ, ಕಾರ್ಯದರ್ಶಿ ಸಿದ್ದರಾಮಪ್ಪ, ವಕೀಲ ಗೋಪಾಲ, ಯುವ ಮುಖಂಡ ಶಶಿ, ನಲ್ಲಿ ಮಂಜುನಾಥ್, ಮಹಿಳಾ ಘಟಕದ ಶ್ರೀಮತಿ ಉಮಾ ಕುಮಾರ  ಉಪಸ್ಥಿತರಿದ್ದರು.

Leave a Reply

Your email address will not be published.