ಕೊಕ್ಕನೂರಿನಲ್ಲಿ ಕೆರೆ ಹೂಳೆತ್ತುವ ಕಾಮಗಾರಿಗೆ ಶಾಸಕ ರಾಮಪ್ಪ ಚಾಲನೆ

ಕೊಕ್ಕನೂರಿನಲ್ಲಿ ಕೆರೆ ಹೂಳೆತ್ತುವ ಕಾಮಗಾರಿಗೆ ಶಾಸಕ ರಾಮಪ್ಪ ಚಾಲನೆ

ಮಲೇಬೆನ್ನೂರು, ಮೇ 20- ಕೊಕ್ಕನೂರು ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಗೆ ಶಾಸಕ ಎಸ್. ರಾಮಪ್ಪ ಗುದ್ದಲಿ ಪೂಜೆ ನೆರವೇರಿಸಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಹಳ್ಳಿಹಾಳ್‌ ಪಾರ್ವತಮ್ಮ ಯು.ಎನ್. ಶಿವನಗೌಡ, ಉಪಾಧ್ಯಕ್ಷ ಜಿ.ಟಿ. ಕಟ್ಟೆ ತಿಪ್ಪೇಶಪ್ಪ, ಸದಸ್ಯರಾದ ಸಜ್ಜೇರ ಮಾರುತಿ, ಹೊಸೂರು ಹನುಮಂತಪ್ಪ, ಎ.ಕೆ. ಬಸವರಾಜಪ್ಪ, ಮೂಗಿನಗೊಂದಿ ಸರೋಜಮ್ಮ ಬಸವರಾಜಪ್ಪ, ಹಳ್ಳಿಹಾಳ್ ತಿಮ್ಮನಗೌಡ, ಜಿ.ಪಂ. ಮಾಜಿ ಅಧ್ಯಕ್ಷ ಜಿ. ದ್ಯಾಮಣ್ಣ, ಎಸ್. ಗೋವಿಂದಪ್ಪ, ಡಿ. ಸೋಮಶೇಖರಪ್ಪ, ತಾ.ಪಂ. ಇಓ ಲಕ್ಷ್ಮೀಪತಿ, ಪಿಡಿಓ ಸಾರಥಿ ನಾಗರಾಜ್, ಕಾರ್ಯದರ್ಶಿ ಹೊನ್ನಪ್ಪ ಇನ್ನಿತರರಿದ್ದರು. ನಂತರ ಶಾಸಕರು ಮೂಗಿನಗೊಂದಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಭೋವಿ ನಾಗಪ್ಪ ಅವರ ಜಮೀನಿನಲ್ಲಿ ಬದು ನಿರ್ಮಾಣ ಕಾಮಗಾರಿಗೂ ಚಾಲನೆ ನೀಡಿದರು.

Leave a Reply

Your email address will not be published.