ಜಗಳೂರು : ಬದು ನಿರ್ಮಾಣ ಕಾಮಗಾರಿಗೆ ಚಾಲನೆ

ಜಗಳೂರು : ಬದು ನಿರ್ಮಾಣ ಕಾಮಗಾರಿಗೆ ಚಾಲನೆ

ಕೂಲಿಕಾರ್ಮಿಕರಿಗೆ ಮತ್ತು ರೈತರಿಗೆ ನರೇಗಾ ಯೋಜನೆ ವರದಾನ : ಶಾಸಕ ಎಸ್.ವಿ.ರಾಮಚಂದ್ರ

ಜಗಳೂರು, ಮೇ 19- ಕೂಲಿಕಾರ್ಮಿಕರಿಗೆ ಮತ್ತು ರೈತರಿಗೆ ನರೇಗಾ ಯೋಜನೆ ವರದಾನ ವಾಗಿದೆ ಶಾಸಕ ಎಸ್.ವಿ ರಾಮಚಂದ್ರ ತಿಳಿಸಿದರು.

ತಾಲ್ಲೂಕಿನ ಬಿಳಿಚೋಡು ಗ್ರಾಮದಲ್ಲಿ ಇಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕಂದಕ, ಬದು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಬರಪೀಡಿತ ಜಗಳೂರು ವಿಧಾನಸಭಾ ಕ್ಷೇತ್ರ ದಲ್ಲಿ ನರೇಗಾ ಯೋಜನೆ   ಕೂಲಿಕಾರ್ಮಿಕರಿಗೆ ಮತ್ತು ರೈತರಿಗೆ ವರದಾನವಾಗಿದೆ. ಕೂಲಿಕಾರ್ಮಿ ಕರಿಗೆ ಜೀವನ ನಿರ್ವಹಣೆಗೆ ನೆರವಾದರೆ, ಕಂದಕ ಬದು ನಿರ್ಮಾಣದಿಂದ ಅಂತರ್‍ಜಲ ಹೆಚ್ಚಳವಾಗಿ ರೈತರಿಗೆ ಅನುಕೂಲವಾಗಲಿದೆ ಎಂದರು.

ಕೊರೊನಾದಿಂದ ಗ್ರಾಮೀಣ ಭಾಗದ ಜನ ರಿಗೆ ತುಂಬಾ ತೊಂದರೆಯಾಗಿದ್ದು, ಕೂಲಿ ಕೆಲಸ ನೀಡಿ ಕೂಲಿಕಾರರ ಹಸಿವು ನೀಗಿಸಲು ಕೇಂದ್ರ  ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ನೆರವಾಗಿದೆ  ಎಂದರು.

ಈಗಾಗಲೇ 70 ಕಡೆ  3030 ಕೂಲಿಕಾರರು ಕೆಲಸ ಮಾಡುತ್ತಿದ್ದು, ಕೃಷಿ ಹೊಂಡ ಮತ್ತು ಕಂದಕ ಬದು ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರೈತಾಪಿ ವರ್ಗ, ಪದವೀಧರರು ಎಲ್ಲಾ ಕಡೆಯೂ ಉತ್ಸಾಹದಿಂದ ಕೆಲಸಕ್ಕೆ ಬರುತ್ತಿದ್ದಾರೆ. ಎಷ್ಟೆ  ಜನರು ಬಂದರೂ ಕೆಲಸ ಕೊಡಲು ಸಿದ್ದರಿದ್ದೇವೆ ಎಂದರು.

ಇದೇ ತಿಂಗಳಲ್ಲಿ ಬದು ನಿರ್ಮಾಣ ಅಭಿ ಯಾನ ಆರಂಭಿಸಲಾಗುವುದು. ಕೇವಲ ಗ್ರಾಮ ಪಂಚಾಯಿತಿ ವ್ಯಾಪ್ತಿ ಅಲ್ಲದೇ,  ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ, ರೇಷ್ಮೆ ಇಲಾಖೆಗಳ ವ್ಯಾಪ್ತಿ ಯಲ್ಲಿ ಯೋಜನೆಯ ಅಡಿ ಕಾಮಗಾರಿ ಮಾಡಲು ಅವಕಾಶವಿದೆ. ಇದರ  ಸದ್ಬ ಳಕೆ ಮಾಡಿಕೊಳ್ಳಬೇಕು ಎಂದು ಶಾಸಕರು ತಿಳಿಸಿದರು.

ಜಿ.ಪಂ ಸಿಇಒ ಪದ್ಮ ಬಸವಂತಪ್ಪ ಮಾತ ನಾಡಿ, ಒಂದು ಎಕರೆ ಕಂದಕ ಬದು ನಿರ್ಮಾ ಣದಿಂದ ಸುಮಾರು 2 ಲಕ್ಷ  ಲೀ. ನೀರು  ಸಂಗ್ರ ಹವಾಗುವುದಲ್ಲದೇ  ರೈತರ ಜಮೀನುಗಳ  ಅಂತ ರ್ಜಲ ವೃದ್ಧಿಯಾಗುತ್ತದೆ. ಇದರ ಮೂಲಕ ಕೊಳವೆ ಬಾವಿಗಳು ಮರುಪೂರಣವಾಗುತ್ತವೆ. ಕುಟುಂಬದ  ಸದಸ್ಯರುಗಳಿಗೆ  ಕೂಲಿ ಕೆಲಸದಿಂದ ಜೀವನ ನಡೆ ಸಲು ಸಹಕಾರಿಯಾಗುತ್ತದೆ.  ಜಮೀನು ಇಲ್ಲದ ಕೆಲವು ರೈತರಿಗೆ  ಇತರೆ  ಜಮೀನುಗಳಲ್ಲಿ ಕೆಲಸ ಕೊಡುವ ಅವಕಾಶವಿದೆ.  ಯೋಜನೆಯ ಸದುಪ ಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ  ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಾನಾಯ್ಕ, ಬಿಜೆಪಿ ತಾಲ್ಲೂಕಾಧ್ಯಕ್ಷ  ಎಚ್.ಸಿ ಮಹೇಶ್  ಸೇರಿದಂತೆ ಮತ್ತಿತರರಿದ್ದರು.     

Leave a Reply

Your email address will not be published.