ಬಿಜೆಪಿ ರಾಷ್ಟ್ರಾಧ್ಯಕ್ಷರೊಂದಿಗೆ ಮೇಯರ್ ಕಾನ್ಫರೆನ್ಸ್

ಬಿಜೆಪಿ ರಾಷ್ಟ್ರಾಧ್ಯಕ್ಷರೊಂದಿಗೆ ಮೇಯರ್ ಕಾನ್ಫರೆನ್ಸ್

ದಾವಣಗರೆ, ಮೇ 15- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಜೆ.ಪಿ. ನಡ್ಡಾ ಅವರು ವಿವಿಧ ರಾಜ್ಯಗಳ ಹಲವು ಜಿಲ್ಲೆಗಳಲ್ಲಿ ಬಿಜೆಪಿ ಆಡಳಿತದ ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಉಪ ಮೇಯರ್ ಅವರೊಂದಿಗೆ ಇಂದು ವೀಡಿಯೋ ಸಂವಾದ ನಡೆಸಿದರು. 

ಸಂವಾದದಲ್ಲಿ ಸ್ಥಳೀಯ ಮಹಾಪೌರರಾದ ಬಿ.ಜಿ.ಅಜಯ್ ಕುಮಾರ್, ಉಪ ಮಹಾಪೌರರಾದ ಶ್ರೀಮತಿ ಸೌಮ್ಯ ನರೇಂದ್ರ ಕುಮಾರ್ ಅವರುಗಳು ಮಹಾನಗರ ಪಾಲಿಕೆ ವತಿಯಿಂದ ಕೊರೊನಾ ನಿಯಂತ್ರಣಕ್ಕಾಗಿ ನಗರದಲ್ಲಿ ಮಾಡಿದ ಕೆಲಸಗಳು, ರಾಜ್ಯ ಸರ್ಕಾರ ಉಚಿತವಾಗಿ ನೀಡಿದ ಹಾಲು ವಿತರರಣೆ ಕುರಿತು ಮತ್ತು ಪಕ್ಷದಿಂದ ಮಾಡಿದ ಕೆಲಸದ ಬಗ್ಗೆ ವಿವರಿಸಿದರು.

ಸಂವಾದದಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳಿಧರ್ ರಾವ್, ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್  ಭಾಗವಹಿಸಿದ್ದರು.