ಹರಿಹರ: ದಿನವಿಡೀ ವ್ಯಾಪಾರಕ್ಕೆ ವರ್ತಕರ ಮನವಿ

ಹರಿಹರ: ದಿನವಿಡೀ ವ್ಯಾಪಾರಕ್ಕೆ ವರ್ತಕರ ಮನವಿ

ಹರಿಹರ, ಮೇ 14- ನಗರದ ವ್ಯಾಪಾರಸ್ಥರಿಗೆ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಅನುಕೂಲ ಕಲ್ಪಿಸುವಂತೆ ಶಾಸಕ ಎಸ್.ರಾಮಪ್ಪ, ಹರಿಹರ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶಂಕರ್ ಖಟಾವ್‌ಕರ್ ಅವರು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅವರಿಗೆ ಮನವಿ ಮಾಡಿಕೊಂಡರು.
ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ  ಹರಿಹರ ಛೇಂಬರ್ ಆಫ್ ಕಾಮರ್ಸ್‌ ವತಿಯಿಂದ ನಿನ್ನೆ ನಡೆದ ಸಭೆಯಲ್ಲಿ ಮನವಿಯನ್ನು ಅರ್ಪಿಸಿ ಮಾತನಾಡಿದ ಶಾಸಕ ಎಸ್. ರಾಮಪ್ಪ ಅವರು, ದಾವಣಗೆರೆ ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ಸೋಂಕು ಹರಡುತ್ತಿದ್ದರೂ ಸಹ ಅಲ್ಲಿನ ವ್ಯಾಪಾರ ವಹಿವಾಟು ಸುಗಮವಾಗಿ ನಡೆಯುವುದಕ್ಕೆ ಜಿಲ್ಲಾಧಿಕಾರಿಗಳು ಯಾವುದೇ ತೊಂದರೆಯಾಗದಂತೆ ಆದೇಶ ನೀಡಿದ್ದಾರೆ. ಅದರಂತೆ ಇಲ್ಲಿನ ವ್ಯಾಪಾರಸ್ಥರೂ ಸಹ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸುವುದಕ್ಕೆ ಅವಕಾಶ ಕಲ್ಪಿಸುವಂತೆ ಕೋರಿದರು.
ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶಂಕರ್ ಖಟಾವ್ ಕರ್ ಮಾತನಾಡಿ, ಬಟ್ಟೆ ಅಂಗಡಿ, ಬಂಗಾರದ ಅಂಗಡಿ ಸೇರಿದಂತೆ ಉಳಿದ ಎಲ್ಲಾ ಅಂಗಡಿಗಳ ವ್ಯಾಪಾರ ವಹಿವಾಟು ನಡೆಸುವುದಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.
ತಹಶೀಲ್ದಾರ್ ರಾಮಚಂದ್ರಪ್ಪ ಮಾತನಾಡಿ, ವ್ಯಾಪಾರ ವಹಿವಾಟು ಮಾಡುವಾಗ ವ್ಯಾಪಾರಸ್ಥರು ತಮ್ಮ ಅಂಗಡಿಗೆ ಬರುವಂತಹ ಗ್ರಾಹಕರಿಗೆ ಸ್ಯಾನಿಟೈಸರ್, ಮಾಸ್ಕ್, ಹ್ಯಾಂಡ್ ಗ್ಲೌಸ್ ಬಳಸುವುದರ ಜೊತೆಯಲ್ಲಿ ಅಂತರವನ್ನು ಕಾಯ್ದುಕೊಂಡು ವ್ಯಾಪಾರ ವಹಿವಾಟು ಮಾಡುವುದಕ್ಕೆ ಮುಂದಾದಾಗ ಮಾತ್ರ ಕೊರೊನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡದಂತೆ ತಡೆಯಲು ಸಾಧ್ಯವಿರುತ್ತದೆ ಎಂದರು.
ಸಿಪಿಐ ಎಸ್. ಶಿವಪ್ರಸಾದ್ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದಂತೆ ಇಲ್ಲಿನ ವ್ಯಾಪಾರಸ್ಥರು ವ್ಯಾಪಾರ ಮಾಡುವಾಗ ಅವರ ಆದೇಶ ಪಾಲನೆಯನ್ನು ಸರಿಯಾಗಿ ನಿಭಾಯಿಸಬೇಕು. ಇಲ್ಲದೇ ಹೋದರೆ ಅವರ ಅಂಗಡಿಗಳನ್ನು ಮುಚ್ಚಿಸಿ ಮುಂದೆ ಅವರಿಗೆ ವ್ಯಾಪಾರ ವಹಿವಾಟು ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಪೌರಾಯುಕ್ತರಾದ ಎಸ್ ಲಕ್ಷ್ಮಿ ಮಾತನಾಡಿ, ಈಗ ನಗರದಲ್ಲಿ ಇರುವ ಬಟ್ಟೆ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುವುದಕ್ಕೆ ಅವಕಾಶ ನೀಡ ಲಾಗಿದೆ. ಆದರೆ ಅವರು ಕಡ್ಡಾಯವಾಗಿ ಅಂತರವನ್ನು ಕಾಯ್ದುಕೊಂಡು ವ್ಯಾಪಾರ, ವಹಿವಾಟು ಮಾಡುವು ದರಿಂದ ಯಾವುದೇ ಕೊರೊನಾ ಸೋಂಕು ಹರಡ ದಂತೆ ಎಚ್ಚರ ವಹಿಸಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವ್ಯಾಪಾರಸ್ಥರಾದ ಟಿ.ಜೆ. ಮುರುಗೇಶಪ್ಪ, ಹಲಸಬಾಳು ಬಸವರಾಜ್, ಪಟೇಲ್ ಬಸವರಾಜ್, ಅನ್ವರ್‌ಪಾಷಾ, ಶಿವಪ್ರಕಾಶ್ ಶಾಸ್ತ್ರಿ, ವೆಂಕಟೇಶ್, ದುರುಗೋಜಿ ಗೋಪಿ, ರೇವಣಸಿದ್ದಪ್ಪ ಅಮರಾವತಿ, ಮಾಲತೇಶ್ ಭಂಡಾರಿ, ನಾಗರಾಜ್ ನಲ್ಲೂರು, ರಡ್ಡಿ ಹನುಮಂತಪ್ಪ, ಜ್ಞಾನೇಶ್ವರ, ಮಂಜುನಾಥ್ ಪಾಟೀಲ್, ಎಸ್.ಬಿ. ವಿಜಯಕುಮಾರ್ ಮತ್ತು ಇತರರು ಹಾಜರಿದ್ದರು.

Leave a Reply

Your email address will not be published.