ಮುಚ್ಚಳಿಕೆಗೆ ಬೆದರಿ ಮುಚ್ಚಿದ ಅಂಗಡಿಗಳು

ಮುಚ್ಚಳಿಕೆಗೆ ಬೆದರಿ ಮುಚ್ಚಿದ ಅಂಗಡಿಗಳು

ದಾವಣಗೆರೆ, ಮೇ 12- ಅಂಗಡಿಗಳಿಗೆ ಬಂದ ಸಿಬ್ಬಂದಿ ಹಾಗೂ ಗ್ರಾಹಕ ಯಾರಿಗಾದರೂ ಕೊರೊನಾ ಸೋಂಕು ಬಂದರೆ ಮಾಲೀಕರೇ ಹೊಣೆ, ಖರ್ಚು ವೆಚ್ಚಗಳನ್ನು ಮಾಲೀಕರೇ ಭರಿಸಬೇಕು.ಅಂಗಡಿಗಳಲ್ಲಿ ಇಂತಿಷ್ಟು ಸಿಬ್ಬಂದಿ ಇರಬೇಕು ಇಂಬಿತ್ಯಾದಿ ನಿಯಮಗಳು ಇವೆ ಎಂದು ಆತಂಕಗೊಂಡ ಮಾಲೀಕರು ಬೆಚ್ಚಿ ಬಿದ್ದಿದ್ದಾರೆ.

ಔಷಧಿ ಅಂಗಡಿ, ಹಣ್ಣು, ಹೂ, ತರಕಾರಿ ಅಂಗಡಿಗಳು, ಕಿರಾಣಿ ಅಂಗಡಿಗಳಿಗೆ ಈ ರೀತಿಯ ನಿಯಮಗಳಿಲ್ಲ. ಆದರೆ ಇದೀಗ ನಮಗೆ ಇಂತಹ ನಿಯಮ ವಿಧಿಸುತ್ತಿರುವುದು ಯಾವ ನ್ಯಾಯ? ಎಂದು ವರ್ತಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೇರೆಡೆ ಸೋಂಕು ಹಚ್ಚಿಸಿಕೊಂಡು ನಮ್ಮಲ್ಲಿ ವ್ಯಾಪಾರ ಮಾಡಿ, ನಮ್ಮ ಅಂಗಡಿಯಿಂದಲೇ ಸೋಂಕು ತಗುಲಿದೆ ಎಂದು ರೋಗಿಯೊಬ್ಬ ಜಿಲ್ಲಾಡಳಿತಕ್ಕೆ ತಿಳಿಸಿದರೆ ನಾಳೆ ನಮ್ಮ ಗತಿಯೇನು? ಎಂದು ಕೆಲ ಅಂಗಡಿಗಳ ಮಾಲೀಕರು ಪ್ರಶ್ನಿಸಿದ್ದಾರೆ.

ಪಾಲಿಕೆಗೆ ಸ್ವಯಂ ಘೋಷಣೆ ಸಲ್ಲಿಕೆ ಕಡ್ಡಾಯ : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಅಂಗಡಿಗಳ ಮಾಲೀಕರು 100 ರೂಪಾಯಿ ಛಾಪಾ ಕಾಗದದ ಮೇಲೆ ಸ್ವಯಂ ಘೋಷಣಾ ಪತ್ರ ಬರೆದುಕೊಡುವುದು ಕಡ್ಡಾಯ ಎಂದು ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ತಿಳಿಸಿದ್ದಾರೆ. ನಿನ್ನೆ ಜಿಲ್ಲಾಧಿಕಾರಿಗಳು ಪಾಲಿಕೆಗೆ ಮುಚ್ಚಳಿಕೆ ನೀಡಲು ಹೇಳಿದ್ದಾಗಿಯೂ ಇದುವರೆಗೂ ಯಾರೂ ನೀಡಿಲ್ಲ ಎಂದ ಅವರು, ಸಂಬಂಧ ಪಟ್ಟ ಅಂಗಡಿ ಮಾಲೀಕರು ಆಯಾ ವಲಯ ಕಚೇರಿಗೆ ತೆರಳಿ ಘೋಷಣೆ ಪತ್ರ ನೀಡಬೇಕು. ಒಂದು ಪ್ರತಿಯನ್ನು ಅಂಗಡಿಯವರು ಇಟ್ಟುಕೊಳ್ಳಬೇಕು.  ಸ್ವಯಂ ಘೋಷಣೆ ಯಾವ ರೀತಿ ಇರಬೇಕೆಂಬ ಬಗ್ಗೆ ಪಾಲಿಕೆ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ ಎಂದು ಹೇಳಿದರು.

ಕಠಿಣ ನಿಯಮಗಳಿಗೆ ಬಾಗಿಲು ಹಾಕಿದ ಬಂಗಾರದ ಅಂಗಡಿಗಳು : ನಗರದ ಮಂಡಿಪೇಟೆ ಸೇರಿದಂತೆ ಕೆಲವೆಡೆ ಬೆಳಿಗ್ಗೆ ಬೆಳ್ಳಿ-ಬಂಗಾರದ ಅಂಗಡಿಗಳನ್ನು ತೆರೆಯಲಾಗಿತ್ತು. ಆದರೆ ಮಧ್ಯಾಹ್ನದ ವೇಳೆಗೆ ಜಿಲ್ಲಾಡಳಿತ ಸೂಚಿಸಿದ ನಿಯಮಗಳಿಗೆ ಬದ್ಧರಾಗಿ, ಸಹಿ ಮಾಡಿದ ನಂತರವೇ ತೆರೆಯಲು ಅವಕಾಶ ಎಂದು ತಿಳಿದು, ಜಿಲ್ಲಾಡಳಿತದ ಕಠಿಣ ನಿಯಮಗಳಿಗೆ ಬೆದರಿ ಬಾಗಿಲು ಹಾಕಲಾಯಿತು.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾ ಡಿದ ಜ್ಯುವೆಲರಿ ಅಂಗಡಿ ಮಾಲೀಕರೊಬ್ಬರು ನಿನ್ನೆ ಮಾಧ್ಯಮಗಳಲ್ಲಿ ಬಂದ ವರದಿ ನೋಡಿ ಬಂಗಾರದ ಅಂಗಡಿ ತೆರೆಯಲು ಅನುಮತಿ ಇದೆ ಎಂದು ಭಾವಿಸಿ ವ್ಯಾಪಾರ ಆರಂಭಿಸಿದೆವು. ಆದರೆ ಮಧ್ಯಾಹ್ನದ ವೇಳೆ ಕೆಲ ನಿಯಮಗಳಿರುವ ಪತ್ರಕ್ಕೆ ಸಹಿ ಮಾಡಿ ಜಿಲ್ಲಾಧಿಕಾರಿಗಳಿಗೆ ನೀಡಿದ ನಂತರವೇ ಆರಂಭಕ್ಕೆ ಅನುಮತಿ ನೀಡಲಾಗುವುದು ಎಂದು ತಿಳಿಯಿತು. 

ಪಾಲಿಕೆಗೆ ಸಲ್ಲಿಸಬೇಕಾದ ಸ್ವಯಂ ಘೋಷಣಾ ಪತ್ರದಲ್ಲಿ ಏನಿದೆ? :

ದಾವಣಗೆರೆ, ಮೇ 13- ಮಹಾನಗರ ಪಾಲಿಕೆ ಬುಧವಾರ ಸಂಜೆ ತನ್ನ ವೆಬ್ ತಾಣದಲ್ಲಿ ವರ್ತಕರು ಹಾಗೂ ಉತ್ಪಾದನಾ ಘಟಕದ ಮಾಲೀಕರು ನೀಡಬೇಕಾಗಿರುವ ಸ್ವಯಂ ಘೋಷಣೆಯ ಮಾದರಿ ಪ್ರಕಟಿಸಿದೆ.

ಅದರ ಅನ್ವಯ ವರ್ತಕರು ಹಾಗೂ ಕಂಪನಿಗಳು ಟ್ರೇಡ್ ಲೈಸೆನ್ಸ್ ವಿವರದ ಜೊತೆಗೆ ಸ್ವಯಂ ಘೋಷಣಾ ಪತ್ರವನ್ನು 100 ರೂ.ಗಳ ಸ್ಟಾಂಪ್ ಪೇಪರ್ ಮೂಲಕ ಸಂಬಂಧಿಸಿದ ವಲಯ ಕಚೇರಿಗೆ ಸಲ್ಲಿಸಬೇಕಿದೆ.

ಕಳೆದ ಮೇ 1ರಂದು ಕೇಂದ್ರ ಆರೋಗ್ಯ ಸಚಿವಾಲಯದ ಆದೇಶದ ಅನುಸಾರವಾಗಿ ಸ್ವಯಂ ಘೋಷಣೆಯ ನಿಯಮಾವಳಿಗಳನ್ನು ರೂಪಿಸಿರುವುದಾಗಿ ಪ್ರಕಟಿಸಲಾಗಿದೆ.

ಇಂಗ್ಲಿಷ್‌ನಲ್ಲಿರುವ ಸ್ವಯಂ ಘೋಷಣೆಯ ಪ್ರಮುಖ ಅಂಶಗಳು ಹೀಗಿವೆ : ಮಾಸ್ಕ್,
ಸಾಮಾಜಿಕ ಅಂತರದ ಮಾರ್ಗಸೂಚಿಗಳು ಕಡ್ಡಾಯ. ಶಿಫ್ಟ್ ಹಾಗೂ  ಭೋಜನದ ಅವಧಿಯಲ್ಲಿ ಅಂತರ ಇರಬೇಕು.

  • ಥರ್ಮಲ್ ಸ್ಕ್ಯಾನಿಂಗ್, ಕೈ ತೊಳೆದುಕೊಳ್ಳಲು ಹಾಗೂ ಸ್ಯಾನಿಟೈಜ್ ಮಾಡಲು ವ್ಯವಸ್ಥೆ ಇರಬೇಕು.  ಇಡೀ ಕೆಲಸದ ಸ್ಥಳವನ್ನು ಆಗಾಗ ಸ್ಯಾನಿಟೈಜ್ ಮಾಡುತ್ತಿರಬೇಕು.
  • ಆರೋಗ್ಯ ಸೇತು ಆಪ್ ಕಡ್ಡಾಯ. ದೊಡ್ಡ ಸಭೆಗಳನ್ನು ನಡೆಸಬಾರದು.
  • ಉದ್ಯೋಗಿಗಳಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಬೇಕು. 
  • ವೈಯಕ್ತಿಕ ಹಾಗೂ ಸಾರ್ವಜನಿಕ ಸಾರಿಗೆ ಲಭ್ಯವಿಲ್ಲದ ಸಮಯದಲ್ಲಿ ಸಾಮಾಜಿಕ ಅಂತರದೊಂದಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು.
  • ಉತ್ತಮ ನೈರ್ಮಲ್ಯ ಅಭ್ಯಾಸಗಳ ಬಗ್ಗೆ ತರಬೇತಿ ನೀಡಬೇಕು.
  • ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾಲಾನುಕಾಲಕ್ಕೆ ನೀಡುವ ನಿಯಮಗಳನ್ನು ಪಾಲಿಸಬೇಕು.
  • ಐಟಿ ಕಂಪನಿಗಳು, ಡಾಟಾ ಸೆಂಟರ್‌ಗಳು, ಟೆಲಿಕಮ್ಯುನಿಕೇಷನ್, ಇಂಟರ್‌ನೆಟ್‌ ಸೇವಾದಾರರು ಸಾಮರ್ಥ್ಯದ ಶೇ.33ರ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಬೇಕು.
  • ಸ್ವಯಂ ಘೋಷಣೆಯನ್ನು ಕೈಗಾರಿಕೆ/ಕಂಪನಿಯ ತಾಣದಲ್ಲಿ ಅಂಟಿಸಬೇಕು.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸ್ಯಾನಿಟೈಜ್ ಮಾಡಿ ಈಗ ತಾನೇ ವ್ಯಾಪಾರ ಆರಂಭಿಸಿದ್ದೇನೆ. ವ್ಯಾಪಾರದ ಬಿಸಿ ಇನ್ನೂ ಆರಂಭವಾಗಿಲ್ಲ. ಜನ ತುಂಬಿ ತುಳುಕುತ್ತಿದ್ದ ಗಾಂಧಿ ಸರ್ಕಲ್, ಈಗ ಖಾಲಿ ಇದೆ. ಜನರ ನಿರೀಕ್ಷೆಯಲ್ಲಿದ್ದೇವೆ. – ಪ್ರದೀಪ್, ಮೆ. ಎನ್. ಮಹೇಶ್ವರಪ್ಪ ಹೋಂ ಅಪ್ಲೈಯನ್ಸಸ್, ಗಾಂಧಿ ಸರ್ಕಲ್, ದಾವಣಗೆರೆ.

ನಾವು ಕೃಷಿ ಉಪಕರಣಗಳನ್ನೇ ಹೆಚ್ಚಾಗಿ ಮಾರುವುದು. ಮಳೆ ಬಂದರೆ ನಮ್ಮ ವ್ಯಾಪಾರ ಕುದುರುತ್ತದೆ. ಹಳ್ಳಿಗಳಿಂದ ರೈತರು ಬರಲು ಅನುಕೂಲ ಇಲ್ಲದಿರುವುದೇ ದೊಡ್ಡ ಸಮಸ್ಯೆಯಾಗಿದೆ. ಎರಡು ತಿಂಗಳು ವ್ಯಾಪಾರ ಬಂದ್ ಆಗಿ ಬೇಸತ್ತು ಹೋಗಿದ್ದೇವೆ. ಈಗ ಅಂಗಡಿ ತೆರೆಯಲು ಅವಕಾಶ ಸಿಕ್ಕಿರುವುದೇ ಸಮಾಧಾನ. ಮಾಲುಗಳನ್ನು ತರಿಸಲು ಲಾರಿಗಳ ಸಮಸ್ಯೆ ಇದೆ. ಹೀಗಾಗಿ ಹೊರಗಿನಿಂದ ಯಾವುದೇ ಮಾಲುಗಳು ಬರುತ್ತಿಲ್ಲ. ಅಂಗಡಿಯಲ್ಲಿ ಇರುವ ಸರಕುಗಳನ್ನು ಮಾರುತ್ತಿದ್ದೇವೆ.   ಇರ್ಫಾನ್ ಖಾನ್, ಕೆ.ಆರ್. ಮಾರುಕಟ್ಟೆಯ ಕಬ್ಬಿಣದ ಸಲಕರಣೆಗಳ ವ್ಯಾಪಾರಿ

ಎರಡು ತಿಂಗಳು ಮಾರ್ಕೆಟ್ ಬಂದ್ ಆಗಿದ್ದರಿಂದ ಈ ವರ್ಷದ ಸೀಸನ್ ಮುಗಿದು ಹೋಗಿದೆ. ಈಗ ವ್ಯಾಪಾ ರವೂ ಅಷ್ಟಕ್ಕಷ್ಟೆ ಎಂಬಂತಾಗಿದೆ. ನಮ್ಮ ಎರಡು ಅಂಗ ಡಿಗಳಲ್ಲಿ ಒಂಭತ್ತು ಕೆಲಸಗಾರರಿದ್ದಾರೆ. ಇವರ ವೇತನ ಸರಿದೂಗಿ ಸುತ್ತಾ ವ್ಯಾಪಾರ ಮಾಡುವುದು ಸವಾಲೇ ಆಗಿದೆ. – ಚಂದ್ರಕಾಂತ್, ಎಂ.ಪಿ. ಹಾರ್ಡ್‌ವೇರ್, ಬಿನ್ನಿ ಕಂಪನಿ ರಸ್ತೆ

ಸರಕು ಸಾಗಣೆ ಇಲ್ಲದೇ ಕ್ರೀಡಾ ಸಾಮಗ್ರಿಗಳನ್ನು ತರಿಸುವುದು ಕಷ್ಟವಾಗಿದೆ. ಲಾಕ್‌ಡೌನ್ ಕಾರಣದಿಂದಾಗಿ ಜನರು ಕೇರಂ ಬೋರ್ಡ್, ಪಾನ್, ಪೌಡರ್ ಇತ್ಯಾದಿಗಳನ್ನು ಕೇಳುತ್ತಿದ್ದಾರೆ. ಆದರೆ, ತರಿಸಲು ಸಮಸ್ಯೆ ಇದೆ. ಇರುವ ಸರಕುಗಳನ್ನೇ ಮಾರಿ ಮುಗಿಸುತ್ತಿದ್ದೇವೆ. – ಚಂದ್ರಶೇಖರ್, ರಾಖಿ ಸ್ಪೋರ್ಟ್ಸ್ ಸ್ಟೋರ್, ಅಶೋಕ ರಸ್ತೆ

ಬಳಿಗ್ಗೆ ಅಂಗಡಿಗೆ ಬಂದು ಕೆಲ ಗ್ರಾಹಕರು ಫ್ಯಾನ್‌ಗಳನ್ನು ಖರೀದಿಸಿದರು. ಕೆಲವರು ಟಿವಿಗಳ ಬಗ್ಗೆ ವಿಚಾರಿಸಿ ಹೋದರು. ಅನೇಕರಿಗೆ ಅಂಗಡಿಗಳು ಆರಂಭವಾದ ಬಗ್ಗೆ ತಿಳಿದಿಲ್ಲ. ಮುಂದಿನ ದಿನಗಳಲ್ಲಿ ವ್ಯಾಪಾರದ ಹೆಚ್ಚಳದ ನಿರೀಕ್ಷೆಯಲ್ಲಿದ್ದೇವೆ. – ಸೂರಜ್ , ರವಿ ಎಲೆಕ್ಟ್ರಾನಿಕ್ಸ್, ಹದಡಿ ರಸ್ತೆ.

 


ದಾವಣಗೆರೆಯ ಗುಡ್ ಫುಡ್ ಹೋಟೆಲ್ ಹಾಗೂ ಹದಡಿ ರಸ್ತೆಯ ಜೆರಾಕ್ಸ್ ಅಂಗಡಿಯಲ್ಲಿ ಮಾಸ್ಕ್ ಹಾಗೂ ಗ್ಲೌಸ್ ಬಳಸಿ ಕಾರ್ಯ ನಿರತರಾಗಿರುವುದು.

ಮಾಸ್ಕ್ ಬಳಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮುಂತಾದ ಎಚ್ಚರಿಕೆ ಪಾಲಿಸಲು ಸಿದ್ಧರಿದ್ದೇವೆ. ಆದರೆ ಮುಂದೆ  ಯಾರೋ ಮಾಡಿದ ತಪ್ಪಿಗೆ ನಮ್ಮನ್ನೇ ಹೊಣೆ ಮಾಡಿದರೆ, ಈಗಾಗಲೇ ಕಷ್ಟದ ಸನ್ನಿವೇಶದಲ್ಲಿರುವ ನಮಗೆ ತೊಂದರೆಯಾಗುತ್ತದೆ. ಇದಕ್ಕಿಂತ ಅಂಗಡಿ ಗಳನ್ನು ಮುಚ್ಚುವುದೇ ಮೇಲೆಂದು ಬಹುತೇಕ ಅಂಗಡಿಗಳನ್ನು ಮಧ್ಯಾಹ್ನ  ಮುಚ್ಚಲಾಯ%