ಕಾಲ್ತೆಗೆ ಕೊರೊನಾ

ಕಾಲ್ತೆಗೆ ಕೊರೊನಾ

ಲೆಕ್ಕವೇ ಸೋತು ಕೈಚೆಲ್ಲಿ ಕೂತಿದೆ
ವಿಶ್ವವೇ ಚಿಂತೆಯ ಹಾದಿಯಲ್ಲಿದೆ
ಸತ್ತವರು ಎಷ್ಟೋ ಜನ ಕೊರೊನಾ
ಇದು ನಿನ್ನ ತಂತ್ರದ ಮಾಯೆ!

ಎಲ್ಲೆಲ್ಲೂ ಆವರಿಸಿದೆ ಶೂನ್ಯ
ಸದ್ದು – ಗದ್ದಲವಿಲ್ಲ ಎಲ್ಲವೂ ಮೌನ
ಮದ್ದಿಲ್ಲದೆ ಮಹಾಮಾರಿಗೆ ಶರಣು
ಆತಂಕದ ಮಡುವಿನಲ್ಲೂ ಮತ್ತೆ ಚೇತರಿಕೆ!

ಗುಡುಗು – ಸಿಡಿಲಂತೆ ಅಬ್ಬರಿಸಿ
ಮತ್ತೆ ಹಿಂಡುತ್ತಿದೆ ಜನರ ಪ್ರಾಣ
ಮಾನವನ ಆಸೆಗಳು ಕರಗುತ್ತಿವೆ
ಮತ್ತೆ ಸವಿಸುಖಕ್ಕಾಗಿ ಕನಸು ಕಾಣುತ್ತಿದೆ!

ಮೂಗು, ಬಾಯಿ, ಕಣ್ಣು ಮುಚ್ಚಿದರೂ
ಜಾಗ್ರತೆ ವಹಿಸಿ ನಡೆದಾಡಿದರೂ
ಹತಾಶೆ ಹಾರೈಕೆಗಳ ನಡುವೆ
ತಲ್ಲಣಿಸಿದೆ ನಮ್ಮಯ ಮನಸು!

ಕೊರೊನಾ ನೀನಾಗಿಯೇ ಬಂದೆಯೋ ಅಥವಾ
ಎಳೆದು ತಂದರೋ ನಮ್ಮೀ ಜನಗಳು
ನಿನಗಿಲ್ಲ ಇಲ್ಲಿ ಜಾಗ
ಕಾಲ್ತೆಗೆ ಇಲ್ಲಿಂದ ಬಹುಬೇಗ!

– ಜೆಂಬಿಗಿ ಮೃತ್ಯುಂಜಯ