ತುಂಬಿಹುದು ಜೀವನ ನೋವು ನಲಿವು
ಬೆಲ್ಲದ ಜೊತೆ ಇರುವಂತೆ ಬೇವು
ಮಾಡೋಣ ಪರರಿಗೆ ನೆರವು
ಗಳಿಸೋಣ ಸ್ನೇಹಪರ ಒಲವು
ಆಸೆ ಆಕಾಂಕ್ಷೆಗಳು ಹಲವು
ಇರಲಿ ಇತಿ ಮಿತಿಗಳ ಅರಿವು
ತೀರಿಸೋಣ ಸಾಧನೆಯ ಹಸಿವು
ತಿಳಿದಿರಲಿ ಹಾದಿಯಲ್ಲಿನ ತಿರುವು!
ತಪ್ಪಿದ್ದಲ್ಲ ಹುಟ್ಟಿದ ಜೀವಕ್ಕೆ ಸಾವು
ಗೊತ್ತಿಲ್ಲ ಎಷ್ಟು ದಿನದ ಪ್ರದರ್ಶನವು
ಕೊನೆಯಾಗಬಹುದು ಅಧ್ಯಾಯ,
ನೀಡದೆಯೇ ಸುಳಿವು
ಅನುದಿನವೂ ತುಂಬಿರಲಿ
ತನು ಮನವೆಲ್ಲ ನಗುವು!
– ಮಹಾಂತೇಶ ಮಾಗನೂರ, ಬೆಂಗಳೂರು.