December 6, 2019

ಹಿರೇಕಲ್ಮಠದ ಚನ್ನಪ್ಪಸ್ವಾಮಿ ತೇರು

ಇತಿಹಾಸ ಪ್ರಸಿದ್ದ ಹೊನ್ನಾಳಿಯ ಹಿರೇಕಲ್ಮಠದ ಶ್ರೀ ಚನ್ನಪ್ಪ ಸ್ವಾಮೀಜಿ ಮಹಾ ರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಸಡಗರ, ಸಂಭ್ರಮದಿಂದ ಜರುಗಿತು. ಮಂಗಳವಾರ ಭವ್ಯವಾಗಿ ಆಲಂಕೃತಗೊಂಡ ಮಹಾ ರಥೋತ್ಸವ ವಿವಿಧ ಮಂಗಳ ವಾದ್ಯಗಳು, ಜಾನಪದ ನೃತ್ಯ ಕಲೆಗಳು, ಡೊಳ್ಳು, ಭಜನೆ, ವೀರಗಾಸೆ ಕುಣಿತಗಳ ಸಹಿತ ಮಠದಿಂದ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದವರಗೆ ರಥದ ಮೆರವಣಿಗೆ ನಡೆಯಿತು.