March 31, 2020

ಹಳ್ಳಿಯ ಕಂಪು ಬೀರಿದ ಎವಿಕೆ ಮಹಿಳಾ ಕಾಲೇಜು

ದಾವಣಗೆರೆ, ಫೆ.24- ಗ್ರಾಮೀಣ ಭಾಗದ ಉಡುಗೆ-ತೊಡುಗೆ ತೊಟ್ಟು ಅಪ್ಪಟ್ಟ ಹಳ್ಳಿ ಹೈಕಳಂತೆ ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಯರು ಮಿಂಚಿದರು. ವಿದೇಶಿ ಉಡು ಪುಗಳಿಗಿಂತ ದೇಶೀ ಉಡುಪುಗಳಲ್ಲಿ ಕಂಗೊಳಿಸಿದರು. ಇಂದು ಕಾಲೇಜು ಆವರಣ ಅಕ್ಷರಶಃ ಗ್ರಾಮೀಣ ಸೊಗಡನ್ನು ಕಂಪಿಸಿತು.

ಕಾಲೇಜಿನ ಆವರಣದ ತುಂಬೆಲ್ಲಾ ವಿದ್ಯಾ ರ್ಥಿನಿಯರು ಹಳ್ಳಿ ಗರಂತೆ ಉಡುಪು ಧರಿಸಿ ಮಿಂಚುತ್ತಾ ಕೆಲವರು ಚಾಟಿ ಹಿಡಿದು ಎತ್ತಿನ ಗಾಡಿ ಓಡಿಸಿ ಅವುಗಳ ಅನುಭವವನ್ನು ಕಂಡು ಕೊಂಡರಲ್ಲದೇ, ಮತ್ತೆ ಕೆಲವರು ಮೊಸರು-ಮಜ್ಜಿಗೆ  ಕಡೆದು ಬೆಣ್ಣೆ ತೆಗೆಯುವ ಹೀಗೆ ಹಳ್ಳಿ ಯಲ್ಲಿನ ಸಂಸ್ಕೃತಿ ಸೊಗಡನ್ನು ಪಸರಿಸಿದರು. 

ಶ್ರೀಕೃಷ್ಣ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಮಹನೀಯರ ವೇಷ ಭೂಷಣ ತೊಟ್ಟಿದ್ದು ಅವರುಗಳೇ ಧರೆಗಿಳಿದು ಬಂದಂತಾಗಿತ್ತು. ಇನ್ನು ಪಾನಿಪೂರಿ ಸೇರಿದಂತೆ ಗ್ರಾಮೀಣದ ಕೆಲ ಖಾದ್ಯಗಳನ್ನು ತಯಾರಿಸಿ ತಂದು ಪ್ರದರ್ಶಿಸಿದರು.

ಇನ್ನು ಕಾಲೇಜಿನ ಉಪನ್ಯಾಸಕ ವೃಂದದವರು ಸಹ ಸಾಂಪ್ರದಾಯಿಕ ಉಡುಗೆ-ತೊಡುಗೆ ತೊಟ್ಟು ವಿದ್ಯಾರ್ಥಿನಿಯರಿಗೆ ಮತ್ತಷ್ಟು ಹುರಿದುಂಬಿಸಿದರು.

ಸಂಭ್ರಮದ ಕ್ಷಣ ಸೆರೆ: ಹೀಗೆ ಹಳ್ಳಿ ನಾರಿಯರಂತೆ ಶೃಂಗಾರಗೊಂಡು ಒಬ್ಬರಿಗಿಂತ ಒಬ್ಬರು ಬಣ್ಣ ಬಣ್ಣದ ಸೀರೆಗಳನ್ನು ತೊಟ್ಟು ಸುಂದರವಾಗಿ ಮಿಂಚುತ್ತಿರುವುದರ ಸವಿ ನೆನಪಿಗಾಗಿ ಮೊಬೈಲ್ ಗಳ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಎಲ್ಲರೂ ಒಟ್ಟಾಗಿ ನಿಂತು ತಮ್ಮ ಉಡುಗೆ-ತೊಡುಗೆಗಳ ಮಾತುಕತೆ ನಡೆಸುತ್ತಾ ಮೊಬೈಲ್ ಕ್ಯಾಮರಾದಲ್ಲಿ ಸೆಲ್ಫಿ ಸಂಭ್ರಮದಲ್ಲಿ ಮಿಂದೆದ್ದರು. ಬಹಳಷ್ಟು ವಿದ್ಯಾರ್ಥಿಗಳು ಹಳ್ಳಿಯ ಪರಿಸರ, ಸಂಸ್ಕೃತಿಯನ್ನೇ ನೋಡಿ ರುವುದಿಲ್ಲ. ಹಾಗಾಗಿ ಎತ್ನಿಕ್ ಡೇ ಮುಖೇನ ಗ್ರಾಮೀಣ ಭಾಗದ ಪರಂಪರೆ, ಜೀವನ ಶೈಲಿ, ಕುರಿ-ಪಶು ಸಾಕಾಣಿಕೆ ಹೀಗೆ ಹಳ್ಳಿಯ ಸೊಗಡನ್ನು ವಿದ್ಯಾರ್ಥಿನಿಯರಿಗೆ ಪರಿಚಯಿಸು ತ್ತಿರುವುದಾಗಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ.ಎಸ್. ಶಿವಪ್ರಕಾಶ್ ತಿಳಿಸಿದರು.

ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಕಿರುವಾಡಿ ಗಿರಿಜಮ್ಮ ಮಾತನಾಡಿ, ಗ್ರಾಮೀಣ ಶೈಲಿಯ ಉಡುಗೆ-ತೊಡುಗೆಯಲ್ಲಿರುವ ವಿದ್ಯಾರ್ಥಿನಿಯರನ್ನು ನೋಡಿದರೆ ಸಂತಸವಾಗುತ್ತಿತ್ತು. ಇವರಿಗೆ ಮತ್ತಷ್ಟು ಹಳ್ಳಿ ಜೀವನ ಪರಿಚಯವಾಗಬೇಕು. ನಮ್ಮ ಗ್ರಾಮೀಣ ಭಾಗದ ಸಂಸ್ಕೃತಿ-ಪರಂಪರೆಯನ್ನು ಯುವ ಪೀಳಿಗೆಗೆ ಉಳಿಸುವಲ್ಲಿ ಮುಂದಾಗಬೇಕು. ಪಾಶ್ಚಿಮಾತ್ಯ ಸಂಸ್ಕೃತಿಗಿಂತ ನಮ್ಮ ನಾಡಿನ ಹಳ್ಳಿ ಸಂಸ್ಕೃತಿ ಗೌರವ ತರುವುದಲ್ಲದೇ, ಹಳ್ಳಿ ಪರಂಪರೆಯು ಆರೋಗ್ಯಕರ ಮತ್ತು ಬದುಕು ಕಟ್ಟಿಕೊಳ್ಳಲು ಸನ್ಮಾರ್ಗಕ್ಕೆ ದಾರಿ ದೀಪವಾಗಿದೆ ಎಂದು ಅಭಿಪ್ರಾಯಪಟ್ಟರು.

ಹಳ್ಳಿ ಪರಂಪರೆಯ ಸವಿಯ ಅನುಭವ ಹಂಚಿಕೊಂಡ ವಿದ್ಯಾರ್ಥಿನಿ ಫಾತಿಮಾ, ಗ್ರಾಮೀಣ ಭಾಗಕ್ಕೆ ಹೋಗಿಲ್ಲ. ಆದರೆ, ಅಲ್ಲಿನ ಸಂಸ್ಕೃತಿ-ಪರಂಪರೆಯನ್ನು ಕಾಲೇಜಿನ ಯತ್ನಿಕ್ ಡೇ ಮುಖಾಂತರ ಕಂಡುಕೊಂಡೆ. ಎಲ್ಲರ ಬದುಕು ಹಸನಾಗಿಸುವ ಹಳ್ಳಿ ಜೀವನವೇ ನಿಜಕ್ಕೂ ಉತ್ತಮವೆನಿಸುತ್ತಿದ್ದು, ಗ್ರಾಮೀಣ ಭಾಗದ ಸವಿಯನ್ನು ಯುವ ಪೀಳಿಗೆ ಅನುಭವಿಸಿ ಅದನ್ನು ಉಳಿಸುವಂತಾಗಬೇಕು ಎಂದು ಆಶಿಸಿದರು.

ಒಟ್ಟಿನಲ್ಲಿ ಇವತ್ತು ಒಂದು ದಿನ ಕಾಲೇಜಿನಿಂದ ಆಯೋಜಿಸಲಾಗಿದ್ದ `ಎತ್ನಿಕ್ ಡೇ¬ ಸಾಂಪ್ರದಾಯಿಕ ಉಡುಗೆ-ತೊಡುಗೆ, ಆಚರಣೆಗಳ ದಿನಾಚರಣೆಯಲ್ಲಿ ಕಾಲೇಜಿನ ಪದವಿ ವಿದ್ಯಾರ್ಥಿನಿಯರು ನಿತ್ಯದ ಪಾಠ ಹಾಗೂ ಉಡುಗೆ-ತೊಡುಗೆಗಳಿಂದ ದೂರ ಉಳಿದು ಗ್ರಾಮೀಣ ಭಾಗದ ಉಡುಗೆ-ತೊಡುಗೆ, ಸಂಸ್ಕೃತಿ-ಸಂಸ್ಕಾರದ  ಸವಿಯ ಅನುಭವವನ್ನು ಅನುಭವಿಸಿದರು.

ಈ ಸಂದರ್ಭದಲ್ಲಿ ಆರ್.ಎಲ್. ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ಎಮ್. ಸೋಮಶೇಖರ್, ಎವಿಕೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ. ಕುಮಾರ್, ಪ್ರೊ. ಪಾಲಾಕ್ಷಪ್ಪ ಸೇರಿದಂತೆ ಇತರರಿದ್ದರು.