ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

ಪ್ರಾದೇಶಿಕ-ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ; ಸ್ವಾಗತಾರ್ಹ

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಪ್ರಾದೇಶಿಕ-ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡುವ ಕೇಂದ್ರದ ನಿಲುವನ್ನು ಕಸಾಪ ತಾಲ್ಲೂಕು ಅಧ್ಯಕ್ಷ ಬಿ. ವಾಮದೇವಪ್ಪ ಸ್ವಾಗತಿಸಿದ್ದಾರೆ.

24 ತಾಸು ಆಮ್ಲಜನಕ ಸಿಲಿಂಡರ್‌ಗಳ ಉಚಿತ ಸೇವೆಗೆ ಜಮಾಯಿತ್ ಈ ಉಲ್ಮಾ ಸಿದ್ಧ

ಜಮಾಯಿತ್ ಈ ಉಲ್ಮಾ ವತಿಯಿಂದ ಸುಮಾರು 30 ಆಮ್ಲಜನಕ ಸಿಲಿಂಡರ್ ಗಳನ್ನು ಉಚಿತವಾಗಿ ಅಗತ್ಯವಿರುವ ಕೋವಿಡ್ ರೋಗಿಗಳ ಸೇವೆಗೆ ವೈದ್ಯರ ಮೇಲ್ವಿಚಾರಣೆಯಲ್ಲಿ 24 ತಾಸು ಲಭ್ಯವಿರಲಿವೆ.

ಮೂತ್ರಪಿಂಡ ವೈಫಲ್ಯ : ದಯಾಮರಣ ಕೋರಿ ರಾಷ್ಟ್ರಪತಿಗೆ ಮನವಿ

ರಾಣೇಬೆನ್ನೂರು : ಸೂಕ್ತವಾಗಿ ಡಯಾಲಿಸಿಸ್ ಚಿಕಿತ್ಸೆ ಸಿಗದೇ ಸಂಕಷ್ಟಕ್ಕೆ ಸಿಲುಕಿರುವ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳು ದಯಾ ಮರಣ ಕೋರಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಕೊರೊನಾ ಹೆಚ್ಚಳ ಸಾಧ್ಯತೆ: ಹೆಚ್ಚು ವೈದ್ಯಕೀಯ ಸಿಬ್ಬಂದಿ ನೇಮಿಸಿಕೊಳ್ಳಿ

ಕೊರೊನಾ  ಸೋಂಕಿನ ವಿಚಾರದಲ್ಲಿ ಸೋಂಕಿನ ಭಯಕ್ಕಿಂತ ಅಪಪ್ರಚಾರಗಳೇ ಹೆಚ್ಚು ಭಯ ಪಡಿಸುತ್ತಿವೆ. ಹಾಗಾಗಿ ಐಇಸಿ ತಂಡ, ಆರೋಗ್ಯ ಇಲಾಖೆ ಹಾಗೂ ವಾರ್ತಾ ಇಲಾಖೆ ಜಂಟಿಯಾಗಿ ಕ್ರಮ ವಹಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾಗಿದೆ.

ದೇಶೀ ಮೂಲದ ತಂತ್ರಜ್ಞಾನದ ಸದ್ಬಳಕೆ ಅನಿವಾರ್ಯ

ದೇಶೀ ಮೂಲದ ಕಲೆ, ವಿಜ್ಞಾನ, ತಂತ್ರಜ್ಞಾನ, ವೃತ್ತಿ ಕೌಶಲ್ಯ, ಸಾಮಾಜಿಕ ಮೌಲ್ಯ, ಆಚರಣೆ, ಕೃಷಿ ಪದ್ಧತಿಗಳನ್ನು ಒಳಗೊಂಡ ಉನ್ನತ ಗುಣಮಟ್ಟದ ಶಿಕ್ಷಣ ನೀಡುವ ಆಶಯವನ್ನು ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿಯು ಒಳಗೊಂಡಿದೆ.

ಸಂಕಷ್ಟದಲ್ಲಿ ಬಾರ್ ರೆಸ್ಟೋರೆಂಟ್ ಮಾಲೀಕರು

ಸರ್ಕಾರ ಬಾರ್ ಓಪನ್ ಮಾಡಿ ಮದ್ಯ ಮಾರಾಟಕ್ಕೆ ಪರವಾನಗಿ ನೀಡಿದೆ. ಆದರೆ ರೆಸ್ಟೋರೆಂಟ್‌ಗಳು ಇನ್ನೂ ಆರಂಭವಾಗದ ಕಾರಣ ಮಾಲೀಕರು, ಕಾರ್ಮಿಕರು ಇಂದಿಗೂ ಸಂಕಷ್ಟದಲ್ಲಿದ್ದಾರೆ.

ನಗರದ ಸರ್ಕಾರಿ ಬಾಲಮಂದಿರದಲ್ಲಿ ಇ-ಸ್ಮಾರ್ಟ್ ಕ್ಲಾಸ್

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಬಾಲ ಮಂದಿರದ ನಿವಾಸಿಗಳು ಏಕ ಪೋಷಕರು, ಅನಾಥ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲೆಂದು ಬಾಲಕರ ಸರ್ಕಾರಿ ಬಾಲ ಮಂದಿರದಿಂದ ನಿವಾಸಿಯ ಮಕ್ಕಳಿಗಾಗಿ ಇ-ಸ್ಮಾರ್ಟ್ ಕ್ಲಾಸ್ ರೂಂ ಆರಂಭಿಸಲಾಯಿತು.

ಕೋವಿಡ್ ಸಂಕಷ್ಟದಲ್ಲಿ ಸಮನ್ವಯ ಶಿಕ್ಷಣ ತರಬೇತಿ ಅನಿವಾರ್ಯವೇ ?

ಹೊನ್ನಾಳಿ : ಕೋವಿಡ್-19 ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯು ಶಿಕ್ಷಕರುಗಳಿಗೆ ಸಮನ್ವಯ ಶಿಕ್ಷಣ ತರಬೇತಿ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಸಾಮಾನ್ಯ ಪ್ರಶ್ನೆಯಾಗಿದೆ.

ಕೊರೊನಾ ಸೋಂಕಿತರಿಗೆ ಆತ್ಮವಿಶ್ವಾಸ ತುಂಬುವ ವೈದ್ಯ ಹರಿಹರದ ವಿಶ್ವನಾಥ್

ಹರಿಹರ : ಕೊರೊನಾ ಶಬ್ದ ಕೇಳಿ ದರೆ ಜನ ಸಾಮಾನ್ಯರ ಎದೆ ಝಲ್ ಎನ್ನುತ್ತದೆ. ಜನರನ್ನು ಬಿಟ್ಟು ಬಿಡಿ. ಹಲವು ವೈದ್ಯರು ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುವ ಕೆಲವು ವೈದ್ಯರು ರಾಜೀನಾಮೆ ನೀಡಿದ್ದಾರೆ.

ಶರಣರ ಅಹಿಂಸಾ ತತ್ವ ವೈದಿಕ-ಜೈನರಿಗಿಂತ ವಿಭಿನ್ನ: ಸಾಣೇಹಳ್ಳಿ ಶ್ರೀಗಳು

ಸಾಣೇಹಳ್ಳಿ : ಜೈನರಲ್ಲಿ ಸಾಮೂಹಿಕವಾಗಿ ಅಹಿಂಸಾತತ್ವಕ್ಕೆ ಅಷ್ಟು ಒತ್ತು ಕೊಡದಿದ್ದರೂ ವ್ಯಕ್ತಿ ಮಟ್ಟದಲ್ಲಿ ಅಹಿಂಸಾ ತತ್ವವನ್ನು ಒಂದು ವ್ರತವಾಗಿ ಸ್ವೀಕರಿಸುವರು.

ಕೊರೊನಾ : ಹರಿಹರದಲ್ಲಿ ಒಂದೇ ದಿನಕ್ಕೆ ಸೀಮಿತವಾದ ಗಣೇಶೋತ್ಸವ

ಹರಿಹರ : ಕೊರೊನಾ ರೋಗದ ಆತಂಕದಿಂದಾಗಿ ನಗರದಲ್ಲಿ ಈ ಬಾರಿ ಗಣೇಶೋತ್ಸವ ಹಬ್ಬವನ್ನು ಸರಳವಾಗಿ ಆಚರಣೆ ಮಾಡುವುದರ ಮೂಲಕ ಬಹುತೇಕ ಗಣೇಶನನ್ನು ಒಂದೇ ದಿನದಲ್ಲಿ ವಿಸರ್ಜನೆ ಮಾಡಲಾಯಿತು.

ಅಂಚೆ ನೌಕರನಿಗೆ ಗಿಫ್ಟ್‌ ನೆಪದಲ್ಲಿ ಅಮೆರಿಕಾ ಮಹಿಳೆ ವಂಚನೆ

ಗಿಫ್ಟ್ ರೂಪದಲ್ಲಿ ಹಣ ಕಳಿಸಿರುವುದಾಗಿ ನಂಬಿಸಿ ಆನ್ ಲೈನ್ ಮುಖೇನ ಸುಮಾರು 9 ಲಕ್ಷಕ್ಕೂ ಅಧಿಕ ಹಣವನ್ನು  ವಂಚಿಸಿರುವುದಾಗಿ ಜ್ಯೋತಿಷಿಯೂ ಆಗಿರುವ ಅಂಚೆ ನೌಕರ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅವಳಿ ತಾಲ್ಲೂಕುಗಳನ್ನು ಧೂಳುಮುಕ್ತ ತಾಲ್ಲೂಕುಗಳನ್ನಾಗಿಸುವೆ : ರೇಣುಕಾಚಾರ್ಯ

ಹಳ್ಳಿಗಳಲ್ಲೂ ಮುಂದಿನ ದಿನಗಳಲ್ಲಿ ಸಿಸಿ ರಸ್ತೆ ಮಾಡಿಸುವ ಮೂಲಕ ಅವಳಿ ತಾಲ್ಲೂಕುಗಳನ್ನು ಧೂಳು ಮುಕ್ತ ತಾಲ್ಲೂಕುಗಳನ್ನಾಗಿ ಮಾಡುತ್ತೇನೆಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ.

17 ವ್ಯಕ್ತಿಗಳಿಗೆ ಸೋಂಕು ದೃಢ : ತಹಶೀಲ್ದಾರ್

ಹರಿಹರ ನಗರದ ಹರ್ಲಾಪುರ 3, ಬೆಂಕಿನಗರ ಬಡಾವಣೆಯಲ್ಲಿ 2 ಸೇರಿ ಒಟ್ಟು 5 ವ್ಯಕ್ತಿಗಳಿಗೆ ಸೇರಿದಂತೆ ತಾಲ್ಲೂಕಿನ ಹೊಳೆಸಿರಿಗೆರೆ 1, ಬೆಳ್ಳೂಡಿ 2, ಮಲೇಬೆನ್ನೂರು 8, ಕೆ.ಬೇವಿನಹಳ್ಳಿ 1 ಸೇರಿದಂತೆ ಹರಿಹರ ತಾಲ್ಲೂಕಿನಲ್ಲಿ ಒಟ್ಟು 17 ವ್ಯಕ್ತಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಸಾಂಸ್ಥೀಕರಣಗೊಳಿಸುವ ಉದ್ದೇಶ ಶಿವಶರಣರಿಗೆ ಇರಲಿಲ್ಲ

ಸಾಣೇಹಳ್ಳಿ : ಧರ್ಮವನ್ನು ಸಾಂಸ್ಥೀಕರಣಗೊಳಿಸುವ ಉದ್ದೇಶ ಬಸವಾದಿ ಶಿವಶರಣರಿಗೆ ಇರಲಿಲ್ಲ ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮಿಗಳು ನುಡಿದರು.

ಪ್ರಜಾಪ್ರಭುತ್ವದಲ್ಲಿ ಸ್ವಾತಂತ್ರ್ಯ – ಸಮಾನತೆ ಕಾರ್ಯರೂಪಕ್ಕೆ ಬರಬೇಕು

ಪ್ರಜಾಪ್ರಭುತ್ವದಲ್ಲಿ ಸ್ವಾತಂತ್ರ್ಯ ಮತ್ತು ಸಮಾನತೆ ಪದಗಳು ದಿನಾಚರ ಣೆಗೆ ಸೀಮತವಾಗದೆ, ಕಾರ್ಯರೂಪಕ್ಕೆ ಬರಬೇಕೆಂದು ಹಿರಿಯ ವಕೀಲರೂ ಆಗಿರುವ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್.ಅರುಣ್‌ಕುಮಾರ್ ಅಭಿಪ್ರಾಯಪಟ್ಟರು.

ಕೋವಿಡ್ : ಶವ ಸಂಸ್ಕಾರ ಸ್ವಯಂ ಸೇವಕರ ನೇಮಕ

ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ಮುಸ್ಲಿಂ ಧರ್ಮದವರನ್ನು ನಿಯಮಾನುಸಾರ ಶವಸಂಸ್ಕಾರ ಮಾಡಲು ಜಿಲ್ಲಾ ವಕ್ಫ್ ಅಧಿಕಾರಿಯನ್ನು ನೋಡೆಲ್ ಅಧಿಕಾರಿಯನ್ನಾಗಿ ಹಾಗೂ ಆರು ಜನ ಸ್ವಯಂ ಸೇವಕರನ್ನು ನೇಮಿಸಲಾಗಿದೆ.

ಕಾನೂನು ಪರೀಕ್ಷೆಯನ್ನು ರದ್ದುಗೊಳಿಸಲು ಆಗ್ರಹ

ಪ್ರಥಮ ಹಾಗೂ ದ್ವಿತೀಯ ವರ್ಷದ ಕಾನೂನು ಪರೀಕ್ಷೆಗಳನ್ನು ರದ್ದುಪಡಿಸಿ ಮುಂದಿನ ತರಗತಿಗೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿ ಎಸ್ ಎಫ್ ಐ ಹಾಗೂ ಎಐಎಸ್ ಎಫ್ ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಇಂದು ಪ್ರತಿಭಟನೆ ನಡೆಸಿದರು.

ಕಿಡ್ನಿ ವೈಫಲ್ಯಕ್ಕೊಳಗಾದ ಸರ್ಕಾರಿ ನೌಕರರಿಗೆ ಸಾಂದರ್ಭಿಕ ರಜೆ

ಕಿಡ್ನಿ ವೈಫಲ್ಯಕ್ಕೆ ತುತ್ತಾಗುವ ರಾಜ್ಯ ಸರ್ಕಾರಿ ನೌಕರರು ಡಯಾಲಿಸಿಸ್‌ಗೆ ಒಳಪಡುವ ದಿನದಂದು ವಿಶೇಷ ಸಾಂದ ರ್ಭಿಕ ರಜೆಯನ್ನು ಮಂಜೂರು ಮಾಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಮನವಿ ಸಲ್ಲಿಸಲಾಗಿ ಸ್ಪಂದನೆಗೆ ಅಭಿನಂದಿಸಿದೆ.

ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಆರೋಪಿಗಳ ಬಂಧನಕ್ಕೆ ಆಗ್ರಹ

ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಯಡಿಯಲ್ಲಿ ಪ್ರಕರಣ ದಾಖ ಲಾಗಿರುವ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದಿ) ವತಿಯಿಂದ ಅನಿರ್ದಿಷ್ಟಾವಧಿಯ ನಿರಂತರ  ಸತ್ಯಾಗ್ರಹವನ್ನು ಆರಂಭಿಸಲಾಗಿದೆ.

ಕೋವಿಡ್ ಮಾರ್ಗಸೂಚಿಯನ್ನು ನಾಗರಿಕರು ಪಾಲಿಸಲು ದಿನೇಶ್ ಕರೆ

ಕೊರೊನಾ ಸಾಂಕ್ರಾಮಿಕ ರೋಗ ಸಮುದಾಯಕ್ಕೆ ಹರಡಿದ್ದು, ನಾಗರೀಕರು ನಿರ್ಲಕ್ಷ್ಯ ವಹಿಸದೇ ಸರ್ಕಾರಗಳು ಸೂಚಿಸಿರುವ ಮಾರ್ಗಸೂಚಿಯನ್ನು ಎಲ್ಲಾ ನಾಗರಿಕರು ಪಾಲಿಸುವಂತೆ  ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮನವಿ ಮಾಡಿದ್ದಾರೆ.

ಹರಿಹರನ ಬಂಡಾಯ ಧೋರಣೆಗೆ ಆತನ ಮನೋಧರ್ಮವೇ ಕಾರಣ

ಸಾಣೇಹಳ್ಳಿ : `ರಗಳೆ'ಯ ಕವಿಯೆಂದೇ ಖ್ಯಾತನಾದ ಹರಿಹರ ಒಬ್ಬ ಸ್ವತಂತ್ರ್ಯ ಪ್ರವೃತ್ತಿಯ, ಬಂಡಾಯ ಮನೋಧರ್ಮದ ಕವಿಯಾಗಿದ್ದು, ಯಾರ ಅಧೀನದಲ್ಲೂ ಬದುಕುವ ಸ್ವಭಾವ ಅವನದಾಗಿರಲಿಲ್ಲ.

ವಚನ ಚಳವಳಿಯಲ್ಲಿ ಜಂಗಮಶೀಲ ಗುಣವಿದೆ: ಪಂಡಿತಾರಾಧ್ಯ ಶ್ರೀ

ಸಾಣೇಹಳ್ಳಿ : ವಚನ ಚಳವಳಿ ನಿಂತ ನೀರಲ್ಲ. ಅದರಲ್ಲಿ ಜಂಗಮಶೀಲ ಗುಣವಿದೆ. ಇಂದಿನ ದಲಿತ, ಬಂಡಾಯ, ಸ್ತ್ರೀವಾದಿ ಮತ್ತಿತರ ಚಳವಳಿಗೆ ಅಡಿಗಲ್ಲಾಗಿದೆ. ಇವತ್ತಿನ ಹಲವಾರು ಚಳವಳಿಗಳಿಗೆ ಬೀಜ ಸ್ವರೂಪವಾಗಿದೆ.

175 ಅಡಿ ತಲುಪಿದ ಭದ್ರಾ ಜಲಾಶಯ

ಶಿವಮೊಗ್ಗ : ಮಲೆನಾಡಿನಲ್ಲಿ ಮಳೆ ಕ್ಷೀಣಿಸಿದ್ದು, ತುಂಗಾ, ಭದ್ರಾ ನದಿಗಳಲ್ಲಿ ನೀರಿನ ಹರಿವು ಮಂಗಳವಾರ ಮತ್ತೊಷ್ಟು ಕಡಿಮೆ ಆಗಿದೆ. ಗಾಜನೂರಿನ ತುಂಗಾ ಜಲಾಶಯಕ್ಕೆ 23 ಸಾವಿರ ಕ್ಯೂಸೆಕ್ಸ್ ಬಳ ಹರಿವು ಇದೆ.

ಉದ್ಯೋಗಕ್ಕಾಗಿ ಯುವ ಕಾಂಗ್ರೆಸ್ ಅಭಿಯಾನ

ಕೇಂದ್ರದ ಬಿಜೆಪಿ ಸರ್ಕಾರದಿಂದ ದೇಶದ ಯುವ ಜನತೆ ನಿರುದ್ಯೋಗ ಸೃಷ್ಟಿ ಮಾಡಿದೆ ಎಂದು ಭಾರತೀಯ ಯುವ ಕಾಂಗ್ರೆಸ್ ವತಿಯಿಂದ ಉದ್ಯೋಗ ಕೊಡಿ ಅಭಿಯಾನವನ್ನು  ಪ್ರಾರಂಭಿಸಲಾಯಿತು.