ಸುದ್ದಿ ಸಂಗ್ರಹ

Home ಸುದ್ದಿ ಸಂಗ್ರಹ

175 ಅಡಿ ತಲುಪಿದ ಭದ್ರಾ ಜಲಾಶಯ

ಶಿವಮೊಗ್ಗ : ಮಲೆನಾಡಿನಲ್ಲಿ ಮಳೆ ಕ್ಷೀಣಿಸಿದ್ದು, ತುಂಗಾ, ಭದ್ರಾ ನದಿಗಳಲ್ಲಿ ನೀರಿನ ಹರಿವು ಮಂಗಳವಾರ ಮತ್ತೊಷ್ಟು ಕಡಿಮೆ ಆಗಿದೆ. ಗಾಜನೂರಿನ ತುಂಗಾ ಜಲಾಶಯಕ್ಕೆ 23 ಸಾವಿರ ಕ್ಯೂಸೆಕ್ಸ್ ಬಳ ಹರಿವು ಇದೆ.

ಉದ್ಯೋಗಕ್ಕಾಗಿ ಯುವ ಕಾಂಗ್ರೆಸ್ ಅಭಿಯಾನ

ಕೇಂದ್ರದ ಬಿಜೆಪಿ ಸರ್ಕಾರದಿಂದ ದೇಶದ ಯುವ ಜನತೆ ನಿರುದ್ಯೋಗ ಸೃಷ್ಟಿ ಮಾಡಿದೆ ಎಂದು ಭಾರತೀಯ ಯುವ ಕಾಂಗ್ರೆಸ್ ವತಿಯಿಂದ ಉದ್ಯೋಗ ಕೊಡಿ ಅಭಿಯಾನವನ್ನು  ಪ್ರಾರಂಭಿಸಲಾಯಿತು. 

ಹಡಗಲಿ ಶಾಸಕ ಪಿಟಿಪಿಗೆ ಬೆದರಿಕೆ ಕರೆ : ದೂರು

ಹರಪನಹಳ್ಳಿ : ಕುರಿ ಕಳ್ಳತನದ ಹಿನ್ನೆಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಹೇಳಿರುವ ವಿಷಯಕ್ಕೆ ಸಂಬಂಧ ಪಟ್ಟಂತೆ ಇಬ್ಬರು ನನಗೆ ರಾತ್ರಿ ವೇಳೆ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ.

ಜಿಲ್ಲಾ ವರದಿಗಾರರ ಕೂಟದಿಂದ ಮಾಧ್ಯಮ ಪ್ರಶಸ್ತಿಗೆ ಆಯ್ಕೆ

ವಿಜಯ ಕರ್ನಾಟಕ ಪತ್ರಿಕೆಯ ಯಳನಾಡು ಮಂಜುನಾಥ್, ಸಂಯುಕ್ತ ಕರ್ನಾಟಕದ ರಂಗನಾಥ್, ನ್ಯೂಸ್-18 ವಾಹಿನಿಯ ಹೆಚ್.ಎಂ.ಪಿ.ಕುಮಾರ್, ಬಿ-ಟಿವಿ ಕ್ಯಾಮರಾಮ್ಯಾನ್ ಲೋಕೇಶ್, ದಾವಣಗೆರೆ ಟೈಮ್ಸ್‌ ಪತ್ರಿಕೆಯ ವೀರೇಶ್ ಆಯ್ಕೆಯಾಗಿದ್ದಾರೆ.

ಹರಿಹರ ತಾ|| ನಲ್ಲಿ 35 ವ್ಯಕ್ತಿಗಳಿಗೆ ಕೊರೊನಾ ರೋಗ ಲಕ್ಷಣ

ಹರಿಹರ : ನಗರದಲ್ಲಿ 25 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 10 ಸೇರಿದಂತೆ ಒಟ್ಟು 35 ವ್ಯಕ್ತಿಗಳಿಗೆ ಇಂದು ಕೊರೊನಾ ರೋಗ ಲಕ್ಷಣಗಳು ಹರಡಿರುವ ವರದಿ ಬಂದಿದೆ ಎಂದು ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ ತಿಳಿಸಿದರು.

ಹರಪನಹಳ್ಳಿ : 19 ಕೊರೊನಾ ಸೋಂಕು ದೃಢ

ಪಟ್ಟಣದಲ್ಲಿ 8 ಜನರಿಗೆ ಹಾಗೂ ಗ್ರಾಮೀಣ ಭಾಗದಲ್ಲಿ 11 ಜನರಿಗೆ ಸೋಂಕು ಆವರಿಸಿದೆ. ಪಟ್ಟಣದ ತೆಲುಗರ ಓಣಿಯಲ್ಲಿ 20 ಹಾಗೂ 19 ವರ್ಷದ ವ್ಯಕ್ತಿಗಳು, 43 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದ್ದು, ಇವರಿಗೆ 7 ಜನರನ್ನು ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದೆ.

ಮಾದಿಗ ದಂಡೋರ ಸಮಾಜಕ್ಕೆ ಬಿಜೆಪಿ ಪಕ್ಷವು ಸಾಮಾಜಿಕ ನ್ಯಾಯ ಕಲ್ಪಿಸಿದೆ

ಜಗಳೂರು ಮಾದಿಗ ದಂಡೋರ ಸಮಿತಿಯ ರಾಜ್ಯಾಧ್ಯಕ್ಷ ಎಂ.ಶಂಕರಪ್ಪ ಅವರನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಮಾದಿಗ ದಂಡೋರ ಸಮುದಾಯಕ್ಕೆ ಬಿಜೆಪಿ ಪಕ್ಷವು ಸಾಮಾಜಿಕ ನ್ಯಾಯ ಕಲ್ಪಿಸಿಕೊಟ್ಟಂತಾಗಿದೆ

ಕಳಪೆ ಕಾಮಗಾರಿ ತಡೆಗೆ ಯುವಕರು, ರೈತರು, ಜನಪರ ಸಂಘಟನೆಗಳು ಗಮನ ಹರಿಸಲಿ

ಜಗಳೂರು ತಾಲ್ಲೂಕಿನ ಪೈಪ್ ಲೈನ್ ಕಾಮಗಾರಿ ನಡೆಯುವ ಸುತ್ತಮುತ್ತಲಿನ ಗ್ರಾಮಗಳ ಭಾಗದಲ್ಲಿ 18 ರಿಂದ 40 ವರ್ಷದ ಯುವಕರು, ರೈತರು, ಜನಪರ ಸಂಘಟನೆಗಳು ಅದರಲ್ಲೂ ಯುವಕರು ಹೆಚ್ಚಿನದಾಗಿ ಪಾಲ್ಗೊಳ್ಳಬೇಕು.

ಹಲವಾಗಲು ಸಾರ್ವಜನಿಕ ಆಸ್ಪತ್ರೆ , ನೆಮ್ಮದಿ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ

ಹರಪನಹಳ್ಳಿ :ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ತಾಲ್ಲೂಕಿನ  ಹಲವಾಗಲು ಗ್ರಾಮದ ಸಾರ್ವಜನಿಕ ಆಸ್ಪತ್ರೆ ಹಾಗೂ ನೆಮ್ಮದಿ ಕೇಂದ್ರವನ್ನು ಈ ಕ್ಷೇತ್ರದ ಜನರಿಗೆ ಅನುಕೂಲವಾಗುವಂತೆ ಈ ಉಪಕೇಂದ್ರಗಳನ್ನು  ಮೇಲ್ದರ್ಜೆಗೇರಿಸಬೇಕು.

50 ರಿಂದ 60 ವರ್ಷದ ವ್ಯಕ್ತಿಗಳಿಗೆ ಉಚಿತವಾಗಿ ಕೋವಿಡ್ ತಪಾಸಣೆ

ಹರಿಹರ : ಬಿ.ಪಿ. ಅಸ್ತಮಾ, ಸಕ್ಕರೆ ಸೇರಿದಂತೆ ಹಲವಾರು ಕಾಯಿಲೆ ಯಿಂದ ಬಳಲುತ್ತಿರುವ 50 ರಿಂದ 60 ವರ್ಷದ ವ್ಯಕ್ತಿಗಳಿಗೆ ಉಚಿತವಾಗಿ ಕೋವಿಡ್ ತಪಾಸಣೆ ಮಾಡಲಾಗುತ್ತದೆ.

ಜಿಲ್ಲೆಗೆ ಯೂರಿಯಾ ಪೂರೈಕೆಗೆ ಸಂಸದ ಸಿದ್ದೇಶ್ವರ ಮನವಿಗೆ ಸಚಿವರ ಭರವಸೆ

ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಹೆಚ್ಚಿನ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಯೂರಿಯಾ ಬೇಡಿಕೆ ಹೆಚ್ಚಾಗಿದೆ. ಮೆಕ್ಕೆಜೋಳಕ್ಕೆ ಉಪಯೋಗಿಸಲು ಬೇಡಿಕೆ ಹೆಚ್ಚಾಗಿದೆ 

ಆಶಾ ಅನಿರ್ದಿಷ್ಟ ಹೋರಾಟ ತಾತ್ಕಾಲಿಕ ಹಿಂಪಡೆ

ಮಾಸಿಕ ಕನಿಷ್ಠ 12 ಸಾವಿರ ಗೌರವ ಧನ ಖಾತರಿಪಡಿಸುವುದು ಸೇರಿದಂತೆ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿದ್ದ ಅನಿರ್ದಿಷ್ಟ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.

ಸರಳವಾಗಿ ಬಕ್ರೀದ್ ಆಚರಿಸಲು ಕರೆ

ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬವನ್ನು  ಸರಳವಾಗಿ ಆಚರಿಸುವಂತೆ ತಾಲ್ಲೂಕು ಅಲ್ಪಸಂಖ್ಯಾತರ ಅಸೋಸಿಯೇಷನ್ ಅಧ್ಯಕ್ಷ ಎ. ಮೂಸಸಾಬ್ ಅವರು ಮನವಿ ಮಾಡಿದ್ದಾರೆ.  

ಆಡಳಿತ ವೈಫಲ್ಯ ಮರೆಮಾಚಲು ಗಾಂಧಿ ಕುಟುಂಬದ ಟ್ರಸ್ಟ್‌ಗಳ ತನಿಖೆ : ಡಿ. ಬಸವರಾಜ್ ಆಕ್ರೋಶ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯ ಮರೆಮಾಚಲು ನೆಹರು ಗಾಂಧೀ ಕುಟುಂಬದ ಮೂರು ಟ್ರಸ್ಟ್‌ಗಳ ವಿರುದ್ಧ ಮೋದಿ, ಅಮಿತ್‌ ಷಾ ತನಿಖೆಗೆ ಆದೇಶಿಸಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಡಿ. ಬಸವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಶಾ ಕಾರ್ಯಕರ್ತೆಯರ ಗೌರವ ಧನ 18 ಸಾವಿರ ರೂ. ನಿಗದಿಗೆ ಆಗ್ರಹ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ನೀಡುವುದನ್ನು ಕೈಬಿಟ್ಟು, 18 ಸಾವಿರ ರೂಪಾಯಿ ಕನಿಷ್ಟ ವೇತನ ನೀಡುವಂತೆ ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಫೆಡರೇಷನ್ ರಾಜ್ಯ ಸಮಿತಿ ಅಧ್ಯಕ್ಷ ಕಾಂ. ಹೆಚ್.ಕೆ. ರಾಮಚಂದ್ರಪ್ಪ ಆಗ್ರಹಿಸಿದ್ದಾರೆ.

ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಎಐಎಂಎಸ್‌ಎಸ್ ಬೆಂಬಲ

ಕಳೆದ 12 ದಿನಗಳಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ದಿಷ್ಟ ಕಾಲದ ಮುಷ್ಕರವನ್ನು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್) ರಾಜ್ಯ ಸಮಿತಿ ಸಂಪೂರ್ಣವಾಗಿ ಬೆಂಬಲಿಸಲಿದೆ.

ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಎಂ.ಪಿ. ವೀಣಾ ಬೆಂಬಲ

ಹರಪನಹಳ್ಳಿ, : ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ನಡೆಸಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ 15ನೇ ದಿನಕ್ಕೆ ಕಾಲಿಟ್ಟಿದ್ದು, ಎಂ.ಪಿ. ಸಮಾಜಮುಖಿ ಟ್ರಸ್ಟ್‌ನ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ್ ಬೆಂಬಲ ನೀಡಿದ್ದಾರೆ.

ಅಂಚೆ ಮೂಲಕ ರಾಖಿ ಕಳುಹಿಸುವ ವಿನೂತನ ಪರಿಕಲ್ಪನೆ

ದೂರದ ಊರಿನಲ್ಲಿರುವ ಸಹೋದರನಿಗೆ ಮನೆಯಲ್ಲೇ ಕುಳಿತು ಮೊಬೈಲ್‍ನಿಂದ ಅಂತರ್ಜಾಲ ಮೂಲಕ ರಾಖಿಯನ್ನು ಕಳುಹಿಸುವ ವಿನೂತನ ಪರಿಕಲ್ಪನೆಯನ್ನು ಭಾರತೀಯ ಅಂಚೆ ಇಲಾಖೆ ಜಾರಿಗೆ ತಂದಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಮರೆಯಾದ ಮಾನವೀಯತೆ

ಹೆಚ್ಚುತ್ತಲೇ ಇರುವ ಕೊರೊನಾ ಸೋಂಕು. ತುಸು ಸೀನು, ಕೆಮ್ಮು, ಜ್ವರ ಬಂದರೂ ಹೆಚ್ಚುವ ಆತಂಕ. ರೋಗಿಗಳ ಅಳಲಿಗೆ ಕ್ಯಾರೇ ಎನ್ನದ ಖಾಸಗಿ ಆಸ್ಪತ್ರೆಗಳು, ಬದುಕುವಂತಿದ್ದರೂ ರೋಗಿಗಳನ್ನು ಸಾವಿನಂಚಿಗೆ ತಳ್ಳುತ್ತಿರುವ ಭಯದ ಭೂತ !

ಉತ್ಸವಾಂಬ ದೇವಸ್ಥಾನದಲ್ಲಿ ಮೂಲಸೌಕರ್ಯದ ಕೊರತೆ

ಹರಪನಹಳ್ಳಿ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಉಚ್ಚಂಗಿದುರ್ಗ ಬೆಟ್ಟದ ಮೇಲಿನ ಉತ್ಸವಾಂಭ ದೇವಸ್ಥಾನದಲ್ಲಿ ಬರುವ ಭಕ್ತರಿಗೆ ಮೂಲ ಸೌಕರ್ಯದ ಕೊರತೆ ಇದೆ ಎಂದು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯೆ ವಿಜಯಲಕ್ಷ್ಮಿ ಹಿರೇಮಠ ತಿಳಿಸಿದ್ದಾರೆ.

ಜಗಳೂರು ತಾ|| 53 ಕೆರೆಗೆ ನೀರು ಹರಿಸುವ ಯೋಜನೆಯಲ್ಲಿ ಲೋಪ

ತಾಲ್ಲೂಕಿನ 53 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿಯಲ್ಲಿರುವ ಲೋಪಗಳನ್ನು ಶೀಘ್ರವೇ ಸರಿಪಡಿಸಿಕೊಳ್ಳುವಂತೆ ಜೆಡಿಎಸ್ ಮುಖಂಡ ಕೆ.ಬಿ. ಕಲ್ಲೇರುದ್ರೇಶಪ್ಪ ಒತ್ತಾಯಿಸಿದ್ದಾರೆ.

ಅನುದಾನಿತ ಶಾಲಾ–ಕಾಲೇಜುಗಳ ಪಿಂಚಣಿ ವಂಚಿತ ನೌಕರರಿಂದ ಮನೆಯಿಂದಲೇ ಪ್ರತಿಭಟನೆ

ಅನುದಾನಿತ ಶಾಲಾ–ಕಾಲೇಜುಗಳ ಪಿಂಚಣಿ ವಂಚಿತ ನೌಕರರು ಪಿಂಚಣಿಗಾಗಿ ಒತ್ತಾಯಿಸಿ ಮನೆಯಿಂದಲೇ ಪ್ರತಿಭಟನೆ ಪ್ರಾರಂಭಿಸಿರುವುದಾಗಿ ವಿರೂಪಾಕ್ಷಪ್ಪ ಮಂತ್ರೋಡಿ ಹೇಳಿದ್ದಾರೆ.