August 17, 2019

ಲಿಂಗಾಯತರಿಂದ ವೈ.ರಾಮಪ್ಪ ವಿರುದ್ಧ​ ಪ್ರತಿಭಟನೆ

ವೀರಶೈವ ಲಿಂಗಾಯತ ಸಮಾಜದ ಬಗ್ಗೆ ನಿಂದನೆಗೆ ಖಂಡನೆ, ರಾಮಪ್ಪ ಪ್ರತಿಕೃತಿ ದಹನ

ದಾವಣಗೆರೆ : ವೀರಶೈವ ಲಿಂಗಾಯತ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದರೆನ್ನಲಾದ ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷ ವೈ. ರಾಮಪ್ಪ ಅವರ ಹೇಳಿಕೆಯನ್ನು ಖಂಡಿಸಿ ವೀರಶೈವ ಲಿಂಗಾಯತ ಸಮಾಜ ಬಾಂಧವರಿಂದ ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸುವ ಮೂಲಕ ತೀವ್ರ ಆಕ್ರೋಶ ವ್ಯಕ್ತವಾಯಿತು.

ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪ್ರತಿಭಟನಾ ಮೆರವಣಿಗೆ ಮೂಲಕ ಜಯದೇವ ವೃತ್ತಕ್ಕೆ ಆಗಮಿ ಸಿದ ಪ್ರತಿಭಟನಾನಿರತ ಸಮಾಜ ಬಾಂದವರು, ಜಯದೇವ ಜಗದ್ಗುರುಗಳ ಮೂರ್ತಿಗೆ ಮಾಲಾರ್ಪಣೆ ಮಾಡಿ ದರು. ಈ ಸಂದರ್ಭದಲ್ಲಿ ವೈ. ರಾಮಪ್ಪ ಭಾವಚಿತ್ರಕ್ಕೆ ಕಪ್ಪು ಮಸಿಯನ್ನು ಬಳಿದು ಅವರ ಪ್ರತಿಕೃತಿ ದಹನ ಮಾಡಿದರು.

ರಾಮಪ್ಪ ಅವರು ಬಹಿರಂಗವಾಗಿ ಕ್ಷಮಾಪಣೆ ಕೇಳಬೇಕು. ಅಲ್ಲದೇ, ಅವರು ದೂರು ನೀಡಿರುವ ಜಾತಿ ನಿಂದನೆ
ಪ್ರಕರಣ ಹಿಂದಕ್ಕೆ ಪಡೆಯಬೇಕು. ನಾಡಿದ್ದು ದಿನಾಂಕ 27ರೊಳಗಾಗಿ ಕ್ಷಮೆ ಕೇಳದಿದ್ದಲ್ಲಿ ದಿನಾಂಕ 28 ರಂದು ಜಿಲ್ಲೆಯ ಲಿಂಗಾಯಿತ ಸಮಾಜ ಬಾಂಧವರು ಸಭೆ ಸೇರಿ ಹೋರಾಟದ ಬಗ್ಗೆ ಮುಂದಿನ ತೀರ್ಮಾನ ಕೈಗೊಳ್ಳಬೇಕಾದೀತು ಎಂದು ಎಚ್ಚರಿಸಿದರು.

ಮೊನ್ನೆ ಮಂಗಳವಾರ ನಡೆದ ಲೋಕಸಭಾ ಚುನಾವಣೆಯ ಸಂದರ್ಭ ದಲ್ಲಿ ತಾಲ್ಲೂಕಿನ ನೇರ್ಲಿಗೆ ಗ್ರಾಮದಲ್ಲಿ ರಾಮಪ್ಪ ಅವರು ವೀರಶೈವ ಲಿಂಗಾಯತ ಸಮಾಜ ಬಾಂಧವರ ಬಗ್ಗೆ ಹಗುರವಾಗಿ ಮಾತನಾಡಿದ್ದು ಖಂಡನೀಯ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ಪ್ರಚೋದನಕಾರಿ ಹೇಳಿಕೆಗಳ ಮೂಲಕ ಕೊಲೆ ಬೆದರಿಕೆ ಹಾಕಿದ್ದಾರೆ. ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಜಾತಿಯತೆಯನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್, ಸಮಾಜದ ಯುವ ಮುಖಂಡ ಶಶಿಧರ ಹೆಮ್ಮನಬೇತೂರು ಮೊದಲಾದವರು ಮಾತನಾಡಿ, ವೈ. ರಾಮಪ್ಪ ಅವರು ಜಿಲ್ಲಾ ಪಂಚಾಯತ್‌ ಸದಸ್ಯ ಹಾಗೂ ಅಧ್ಯಕ್ಷರಾಗಿದ್ದ ವೇಳೆ ನಮ್ಮ ಸಮಾಜದ ನೆರವು ಬೇಕಾಗಿತ್ತು. 2008ರಲ್ಲಿ ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ವೀರಶೈವ ಲಿಂಗಾಯತ ಸಮಾಜದವರು ಅವರ ಹಿಂದೆ ನಿಂತು ಕೆಲಸ ಮಾಡಿದ್ದನ್ನು ಮರೆಯಬಾರದು ಎಂದರು.

ನಮ್ಮ ಸಮಾಜ ಬಾಂಧವರು ಬಸವಾದಿ ಶರಣರ ಮಾರ್ಗದರ್ಶನದಲ್ಲಿ ಬಸವ ತತ್ವ ಪ್ರತಿಪಾದಿಸುತ್ತಾ, ಆದರ್ಶಗಳನ್ನು ಪಾಲಿಸುವವರಾಗಿದ್ದಾರೆ. ರಾಜಕಾರಣಿಯಾದ ಮಾತ್ರಕ್ಕೆ ಈ ರೀತಿ ನಿಂದಿಸುವುದು ಸರಿಯಲ್ಲ ಎಂದ ಅವರು, ಚುನಾವಣೆಯ ದಿನ ಸಮಾಜ ಬಾಂಧವರಿಗೆ ಬೆದರಿಸಿರುವುದಲ್ಲದೇ, ಮಚ್ಚು, ಕೊಡಲಿ ಸಂಚರಿಸುತ್ತವೆ ಎಂದಿದ್ದಾರೆ. ಇದರಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೂ ಸಹ ಕ್ರಮ ಕೈಗೊಳ್ಳುವತೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಮಾಜದ ಮುಖಂಡರು, ಸಾವಿರಾರು ಬಾಂಧವರು ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ವೀರಶೈವ ಲಿಂಗಾಯತ ಸಮಾಜದ ಮುಖಂಡರುಗಳಾದ ಅಣಬೇರು ಜೀವನಮೂರ್ತಿ, ಲೋಕಿಕೆರೆ ನಾಗರಾಜ್, ಮುದೇಗೌಡ್ರು ಗಿರೀಶ್‌, ಅಜ್ಜಂಪುರ ಶೆಟ್ರು ಮೃತ್ಯುಂಜಯ, ಅಗಸನಕಟ್ಟೆ ಶಿವಮೂರ್ತ್ಯಪ್ಪ, ಮೆಳ್ಳೇಕಟ್ಟೆ ನಾಗರಾಜ್‌, ಉಮೇಶ್‌, ಜಯಣ್ಣ, ಶಿವನಹಳ್ಳಿ ರಮೇಶ್‌, ಶಿವಗಂಗಾ ಬಸವರಾಜ್‌, ಕರಿಬಸಪ್ಪ ಎಲೆಬೇತೂರು, ಆಲೂರು ಚನ್ನಬಸಪ್ಪ, ಐಗೂರು ಚಿದಾನಂದ್‌, ಶಿವಗಂಗಾ ಶ್ರೀನಿವಾಸ್‌, ಜಿ.ಬಿ.ಲಿಂಗರಾಜು, ಎಸ್‌.ಟಿ. ವೀರೇಶ್‌, ಗಂಗಾಧರ್‌ ನಾಯ್ಕ, ಹಾಲೇಶ್‌, ಎಂ.ಡಿ. ರವೀಂದ್ರ, ಡಾ. ಮಲ್ಲಿಕಾರ್ಜುನ, ಹೆಚ್.ಎನ್. ಶಿವಕುಮಾರ್, ರಾಜಶೇಖರ್, ಧನಂಜಯ್ ಕಡ್ಲೇಬಾಳು, ಅಣಬೇರು ಗಂಗಾಧರ್, ದ್ರಾಕ್ಷಾಯಣಮ್ಮ ಮಲ್ಲಿಕಾರ್ಜುನ್, ರಾಜೇಶ್ವರಿ ಉಮೇಶ್, ಜಯಣ್ಣ ಶ್ಯಾಗಲೆ, ಶಿವನಗೌಡ ಟಿ. ಪಾಟೀಲ್, ಶಿವಮೂರ್ತಿ, ಟಿಂಕರ್ ಮಂಜಣ್ಣ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Please follow and like us: