May 21, 2019

ಮಹಾವೀರ ಜನ್ಮ ಕಲ್ಯಾಣ- ಜಯಂತಿ : ಅದ್ಧೂರಿ ಮೆರವಣಿಗೆ

ದಾವಣಗೆರೆ : ಶ್ರೀ ಮಹಾವೀರ ಜನ್ಮ ಕಲ್ಯಾಣ ಮತ್ತು ಮಹಾವೀರ ಜಯಂತಿ ಪ್ರಯುಕ್ತ ನಗರದಲ್ಲಿ ಇಂದು ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು.

ಮಹಾವೀರ ತೀರ್ಥಂಕರರ ಭವ್ಯ ಮೆರವಣಿಗೆ: ಸಮಸ್ತ ದಿಗಂಬರ ಜೈನ ಸಮಾಜ, 1008 ಪಾರ್ಶ್ವನಾಥ ಜೈನ ಮಂದಿರದ ಆಶ್ರಯದಲ್ಲಿ ಶ್ರೀ ಮಹಾವೀರ ಜನ್ಮ ಕಲ್ಯಾಣದ ಅಂಗವಾಗಿ ಎನ್‌.ಆರ್‌. ರಸ್ತೆಯ 1008 ಪಾರ್ಶ್ವನಾಥ ಜಿನ ಮಂದಿರದಿಂದ ಮಹಾವೀರ ತೀರ್ಥಂಕರರ ಭವ್ಯ ಮೆರವಣಿಗೆ ನಡೆಸಲಾಯಿತು.   

ಮಹಾವೀರ್‌ ಯುವ ಮಂಚ್‌ನ ಅಧ್ಯಕ್ಷ ಜಿತೇಂದ್ರ ಕುಮಾರ್‌ ಬೇತೂರು, ಕೋಮಲ್‌ ಕುಂದಪ್ಪ,  ಬಿ.ಟಿ. ಸಚಿನ್‌, ಪಿ.ಕೆ. ರಾಜು, ಸಂತೋಷ್‌, ವಿಜಯ್‌ ಕುಮಾರ್ ಸೇರಿದಂತೆ ಸರ್ವ ಸದಸ್ಯರು, ಸಮಸ್ತ ದಿಗಂಬರ ಜೈನ ಸಮಾಜದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಭವ್ಯ ಮೆರವಣಿಗೆ: ಚೌಕಿಪೇಟೆಯ ಸುಪಾರ್ಶ್ವನಾಥ ಜೈನ ಮಂದಿರದಿಂದ ಜೈನ್‌ ಸುಪಾರ್ಶ್ವನಾಥ್‌ ಮೂರ್ತಿ ಪೂಜಕಾ ಸಂಘದ ಆಶ್ರಯದಲ್ಲಿ ಮಹಾವೀರ ಜಯಂತಿ ಪ್ರಯುಕ್ತ ಆಚಾರ್ಯ ಭಗವಾನ್‌ ಉದಯಪ್ರಭ  ಶ್ರೀ ಸ್ವಾಮೀಜಿ ಸಾನಿಧ್ಯದಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು.  

ಸಂಘದ ಅಧ್ಯಕ್ಷ ಮಹೇಂದ್ರ ಕುಮಾರ್‌ ಜೈನ್‌ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Please follow and like us: