ಬರದ ನಾಡಿಗೆ `ಸಿಹಿ ಸುದ್ದಿ’ಯ ಭರವಸೆ ಈಡೇರಿದೆ: ಎಸ್​ವಿಆರ್

ಜಗಳೂರು : ರಾಜ್ಯ ಸರ್ಕಾರ ಬರ ಪೀಡಿತ ಜಗಳೂರು ಕ್ಷೇತ್ರದ ಜನರ ಬಹು ದಿನದ ಬೇಡಿಕೆಗೆ ಸ್ಪಂದಿಸಿದೆ. ಕ್ಷೇತ್ರದ ಜನರಿಗೆ ಎರಡು ದಿನಗಳಲ್ಲಿ `ಸಿಹಿ ಸುದ್ದಿ’ ನೀಡುವ ಭರವಸೆ ನೀಡಿದ್ದೆ. ಇಂದು ನಮ್ಮ ಸರ್ಕಾರ ಯೋಜನೆಗೆ ಅನುಮೋದನೆ ನೀಡಿದೆ ಎಂದು ಶಾಸಕ ಎಸ್.ವಿ. ರಾಮಚಂದ್ರ ತಿಳಿಸಿದ್ದಾರೆ. 

ಮುಂದಿನ ಎರಡು ವರ್ಷಗಳ ಲ್ಲಿಯೇ ಈ ಯೋಜನೆ ಪೂರ್ಣ ಗೊಳಿಸಿ ಕೆರೆಗಳಿಗೆ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳುವ ನಿರ್ಧಾರ ಕೈಗೊಂಡಿರುವುದು ನನಗೆ ತುಂಬಾ ಸಂತಸ ಉಂಟು ಮಾಡಿದೆ ಎಂದು ಶಾಸಕ ರಾಮಚಂದ್ರ ತಿಳಿಸಿದ್ದಾರೆ.

ಮುಂದಿನ ಎರಡು ವರ್ಷಗಳ ಲ್ಲಿಯೇ ಈ ಯೋಜನೆ ಪೂರ್ಣ ಗೊಳಿಸಿ ಕೆರೆಗಳಿಗೆ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳುವ ನಿರ್ಧಾರ ಕೈಗೊಂಡಿರುವುದು ನನಗೆ ತುಂಬಾ ಸಂತಸ ಉಂಟು ಮಾಡಿದೆ ಎಂದವರು ತಿಳಿಸಿದ್ದಾರೆ.

ಬರ ಪೀಡಿತ ಜಗಳೂರು ವಿಧಾನಸಭಾ ಕ್ಷೇತ್ರದ 53 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಬಹು ನಿರೀಕ್ಷಿತ 660 ಕೋಟಿ ರೂ.ಗಳ ಯೋಜನೆಗಳಿಗೆ ರಾಜ್ಯ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದ ನಂತರ ಪತ್ರಿಕೆಯೊಂದಿಗೆ ಮಾತನಾಡುತ್ತಾ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳ ನೇತೃತ್ವ ಮತ್ತು ಮಾರ್ಗ ದರ್ಶನದಲ್ಲಿ ಈ ಯೋಜನೆ ರೂಪುಗೊಂಡಿತ್ತು. ಜಗಳೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡಿದ್ದರು. 

ಈಗಿನ ಸರ್ಕಾರದ ಮೇಲೆ ಶ್ರೀಗಳು ಒತ್ತಡ ತಂದು ಯೋಜನೆ ಶೀಘ್ರ ಜಾರಿಗೆ ಕಾರಣೀಭೂತರಾ ಗಿದ್ದಾರೆ. ಶ್ರೀಗಳಿಗೆ ಕ್ಷೇತ್ರದ ಸಮಸ್ತ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿ ಸುತ್ತೇನೆ ಎಂದು  ತಿಳಿಸಿದ್ದಾರೆ.

ಈ ಯೋಜನೆ ತಕ್ಷಣವೇ ಜಾರಿಗೊಳಿಸಲು ಹಣ ಬಿಡುಗಡೆ ಮಾಡಿ ಬರ ಪೀಡಿತ ಜನರ ಬವಣೆಗೆ ಸ್ಪಂದಿಸಿದ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ಅಭಿನಂದಿಸುತ್ತೇನೆ ಎಂದು ಶಾಸಕರು ಇದೇ ಸಂದರ್ಭದಲ್ಲಿ ಹೇಳಿದರು.

ಯೋಜನೆ ವಿವರ ಸಂಕ್ಷಿಪ್ತ : ಬರ ಪೀಡಿತ ಜಗಳೂರು ವಿಧಾನಸಭಾ ಕ್ಷೇತ್ರ ಸತತ ಬರದಿಂದ ನರಳುತ್ತಿದ್ದು, ಈ ಭಾಗದ 53 ಕೆರೆಗಳಿಗೆ ಅಂದರೆ ಜಗಳೂರು ತಾಲ್ಲೂಕಿನ 47 ಕೆರೆಗಳು ಹಾಗೂ ಹರಪನಹಳ್ಳಿ ಭಾಗದ ತಾಲ್ಲೂಕಿನ (ವಿಧಾನಸಭಾ ಕ್ಷೇತ್ರದ) 6 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸಲಾಗುವುದು.

ನದಿ ಸಮೀಪದ ದೀಟೂರು ಗ್ರಾಮದ ಬಳಿಯಿಂದ ಹುಚ್ಚಂಗಿದುರ್ಗ ಬೆಟ್ಟಕ್ಕೆ ನೀರು ಲಿಫ್ಟ್‌ ಮಾಡಿ ಅಲ್ಲಿಂದ ಮೂರು ಭಾಗವಾಗಿ ವಿಂಗಡಿಸಿ ಗುರುತ್ವಾಕರ್ಷಣೆ ಮೂಲಕ ಎಲ್ಲಾ 53 ಕೆರೆಗಳಿಗೆ ನೀರು ತುಂಬಿಸುವುದು ಯೋಜನೆ ಉದ್ದೇಶವಾಗಿದ್ದು, ಇದರಿಂದ ಕ್ಷೇತ್ರದ ಎಲ್ಲಾ ಕೆರೆಗಳಿಗೆ ನೀರು ಬಂದು ಅಂತರ್ಜಲ ಹೆಚ್ಚಳವಾಗಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.