ಮಲೇಬೆನ್ನೂರು : ಅಜ್ಞಾನಿಗಳ ಸಹವಾಸದಿಂದಾಗಿ ಪರಂಪರೆಯುಳ್ಳ ಹಾಲುಮತ ಸಮಾಜದ ಸಂಸ್ಕೃತಿಗೆ ದಕ್ಕೆ ಉಂಟಾಗುತ್ತದೆ ಎಂದು ಕಾಗಿನೆಲೆ ಗುರುಪೀಠದ ಶ್ರೀ ನಿರಂಜಾನಂದಪುರಿ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಪ್ರಮುಖ ಸುದ್ದಿಗಳು

ಜಮ್ಮಾಪುರ ಗುಡ್ಡದಲ್ಲಿ ಅಕ್ರಮ ಗಣಿಗಾರಿಕೆ
ಜಗಳೂರು : ತಾಲ್ಲೂಕಿನ ಜಮ್ಮಾಪುರ ಸಮೀಪದ ಗುಡ್ಡದಲ್ಲಿ ರಾತ್ರಿ ಅಕ್ರಮ ಮ್ಯಾಂಗನೀಸ್ ಗಣಿಗಾರಿಕೆ ನಡೆಯುತ್ತಿದ್ದು, ಭಾರೀ ಪ್ರಮಾಣದಲ್ಲಿ ಮ್ಯಾಂಗನೀಸ್ ಅದಿರನ್ನು ಬೇರೆಡೆ ಸಾಗಣೆ ಮಾಡಲಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಜಾಣ ಕುರುಡಾಗಿದ್ದಾರೆ.

ದಾರ್ಶನಿಕರ ಜಯಂತಿ ಆಚರಣೆಗೆ ಸೀಮಿತ
ಹರಿಹರ : ನಾಡಿನಾದ್ಯಂತ ಆಚರಣೆ ಮಾಡು ತ್ತಿರುವ ದಾರ್ಶನಿಕರ ಜಯಂತಿ ಗಳು ಕೇವಲ ಸಾಂಪ್ರದಾಯಿಕ ಆಚರಣೆಗೆ ಮಾತ್ರ ಸೀಮಿತ ವಾಗಿವೆ ಎಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಸಾಮರಸ್ಯದಿಂದ ಬದುಕೋಣ : ಶಾಸಕ ಎಸ್.ವಿ. ರಾಮಚಂದ್ರ ಕರೆ
ಜಗಳೂರು : ಹಿಂದೂ ಮತ್ತು ಮುಸಲ್ಮಾನರು ಸಾಮರಸ್ಯದಿಂದ ಬದುಕಿದರೆ ಮಾತ್ರ ಸಮಾಜ ಸುಸ್ಥಿರವಾಗಿ ಇರಲು ಬದುಕೋಣ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.

ಹರಿಹರಕ್ಕೆ ಜಲಧಾರೆ ರಥ
ಜಾತ್ಯತೀತ ಜನತಾದಳದ ವತಿಯಿಂದ ರಾಜ್ಯದ ಸಮಗ್ರ ನೀರಾವರಿಗಾಗಿ ರಾಜ್ಯದಾದ್ಯಂತ ಸಂಚರಿಸುತ್ತಿರುವ ಜನತಾ ಜಲಧಾರೆ ರಥವು ನಗರಕ್ಕೆ ಆಗಮಿಸಿದ್ದು, ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್ ಅವರು ಗುತ್ತೂರು ಬಳಿಯ ಶ್ರೀ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ರಥಕ್ಕೆ ಹೂವಿನ ಹಾರವನ್ನು ಹಾಕುವ ಮೂಲಕ ಬರಮಾಡಿಕೊಂಡರು.
ರೌಡಿ ಚಟುವಟಿಕೆಗಳಿಗೆ ಆಸ್ಪದ ನೀಡಲ್ಲ
ಸ್ಥಳೀಯರನ್ನು ಹೆದರಿಸಿ ಹಣ ಮಾಡುವ ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಅಂತಹವರ ವಿರುದ್ಧ ದೂರು ನೀಡದ ಹಿನ್ನೆಲೆಯಲ್ಲಿ ಇಲಾಖೆಯೂ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಯಾರಾದರೂ ದೂರು ನೀಡಿದರೆ, ರೌಡಿಗಳನ್ನು ಹಿಡಿದು ಜೈಲಿಗೆ ಕಳಿಸಲಾಗುವುದು

ಶೋಷಿತರು-ಬಡವರ ದನಿಯಾಗಿದ್ದ ಹೆಚ್ಕೆಆರ್
ಕಾಮ್ರೆಡ್ ಹೆಚ್.ಕೆ. ರಾಮಚಂದ್ರಪ್ಪ ಅವರು ಶೋಷಿತರು, ಬಡವರ ದನಿಯಾಗಿದ್ದರು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

ಮನುಕುಲದ ಓರೆ-ಕೋರೆಗಳನ್ನು ತಿದ್ದುವ ಪ್ರಬಲ ಮಾಧ್ಯಮ ನಾಟಕ : ಹೆಬ್ಬಾಳು ಶ್ರೀ
ನಾಟಕ ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸ ವಿದೆ. ಮನುಕುಲದ ಓರೆ-ಕೋರೆಗಳನ್ನು ನೇರವಾಗಿ ತಿದ್ದುವಂತಹ ಪ್ರಬಲ ಮಾಧ್ಯಮ `ನಾಟಕ' ಎಂದು ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಹೇಳಿದರು.

ಮಲೇಬೆನ್ನೂರು: ನಾಮಫಲಕ ಉದ್ಘಾಟನೆ
ಮಲೇಬೆನ್ನೂರು : ಲಯನ್ಸ್ ಜಿಲ್ಲೆ - 317 ಸಿ ವ್ಯಾಪ್ತಿಯ 19ನೇ ಲಯನ್ಸ್ ಸಮ್ಮೇಳವು ನಾಡಿದ್ದು ದಿನಾಂಕ 30 ಮತ್ತು ಮೇ 1ರಂದು ಉಡುಪಿಯಲ್ಲಿ ಜರುಗಲಿದೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ವಿಶ್ವನಾಥ್ ಶೆಟ್ಟಿ ತಿಳಿಸಿದರು.

ದೊಡ್ಡ, ಸಣ್ಣ ರೈತ ಎನ್ನದೇ ಬೇಡಿಕೆ ಈಡೇರಿಸಲು ಮುಂದಾಗಿ
ರಾಣೇಬೆನ್ನೂರು : ದೊಡ್ಡ, ಸಣ್ಣ ರೈತ ಎನ್ನುವ ತಾರತಮ್ಯವಾಗಲೀ, ಮುಂಗಾರು, ಹಿಂಗಾರು ಎಂದು ಬೆಳೆಗಳ ವಿಂಗಡನೆ ಬೇಡ, ಎಲ್ಲೆಡೆ ಎಲ್ಲರದ್ದು ಸಮನಾದ ಶ್ರಮ ಇರುತ್ತೆ. ಎಲ್ಲ ರೈತರನ್ನೂ ಸರ್ಕಾರ ಸಮನಾಗಿ ಕಾಣಬೇಕು.

ತುಂಗಭದ್ರಾ ನದಿಯಲ್ಲಿ ವಿಪತ್ತು ನಿರ್ವಹಣಾ ತಂಡದಿಂದ ಅಣಕು ಪ್ರದರ್ಶನ
ಹರಿಹರ : ನದಿಯಲ್ಲಿ ಅವಘಡ ನಡೆದರೆ ಆತ್ಮ ರಕ್ಷಣೆಯನ್ನು ಹೇಗೆ ಮಾಡಿಕೊಳ್ಳಬೇಕು ಎಂಬ ಮಾಹಿತಿ ತಿಳಿದುಕೊಂಡು ಈಜುವುದು ಒಳ್ಳೆಯದು ಎಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅವರು ತಿಳಿಸಿದರು.

ಪುರೋಹಿತರು, ದೇವರ ಮತ್ತು ಭಕ್ತರ ಮಧ್ಯೆ ಸೇತುವೆ ಇದ್ದಂತೆ
ಮಲೇಬೆನ್ನೂರು : ಪುರೋಹಿತರು, ಅರ್ಚಕರು ಎಲ್ಲಿಯವರೆಗೆ ಸಂಘಟನೆ ಆಗುವುದಿಲ್ಲವೋ ಅಲ್ಲಿಯವರೆಗೆ ಸರ್ಕಾರದ ಸೌಲಭ್ಯಗಳು ಸಿಗುವುದಿಲ್ಲ ಎಂದು ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದ ಖಜಾಂಚಿ ಕೆ.ಜಿ.ಮಹದೇವಸ್ವಾಮಿ (ಗಣೇಶ್ ಶಾಸ್ತ್ರಿ) ಅಭಿಪ್ರಾಯಪಟ್ಟರು.

ಭಾನುವಳ್ಳಿ : ಗ್ರಾಮದೇವತೆ ಹಬ್ಬಕ್ಕೆ ಹಂದರ ಕಂಬ ಪೂಜೆ
ಮಲೇಬೆನ್ನೂರು : ಭಾನುವಳ್ಳಿ ಗ್ರಾಮದಲ್ಲಿ ಬರುವ ಮೇ 6ರಂದು ನಡೆಯಲಿರುವ ಶ್ರೀ ಕೆರೆ ಚೌಡೇಶ್ವರಿ ಉತ್ಸವ ಮತ್ತು ಮೇ 10, 11ಕ್ಕೆ ಹಮ್ಮಿಕೊಂಡಿರುವ ಗ್ರಾಮ ದೇವತೆ ಶ್ರೀ ಕರಿಯಮ್ಮ ದೇವಿ ಹಬ್ಬದ ಅಂಗವಾಗಿ ಬುಧವಾರ ಹಂದರ ಕಂಬ ಪೂಜೆ ಮಾಡಿ, ಹಬ್ಬದ ಸಿದ್ಧತೆಗೆ ಚಾಲನೆ ನೀಡಲಾಯಿತು.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ, ಭಾಷಾ ಅತಿಕ್ರಮಣ ಸಲ್ಲದು
ಅಭಿಜಾತ ಸ್ಥಾನಮಾನದ ಶ್ರೇಷ್ಠ ತೆಯನ್ನು ಪಡೆದಿರುವ ಕನ್ನಡ ಭಾಷೆಯು ಕರ್ನಾ ಟಕ ದಲ್ಲಿ ಸಾರ್ವಭೌಮ ಭಾಷೆ ಯಾಗಿದ್ದು, ರಾಷ್ಟ್ರಭಾಷೆಯ ಹೆಸರಲ್ಲಿ ಮತ್ತೊಂದು ಭಾಷೆಯ ಅತಿಕ್ರಮ ಪ್ರವೇಶವನ್ನು ಕನ್ನಡಿಗ ರೆಲ್ಲರೂ ಒಗ್ಗಟ್ಟಿನಿಂದ ಖಂಡಿಸ ಬೇಕಾಗಿದೆ

ಪರೀಕ್ಷೆಯಲ್ಲಿನ ಅಕ್ರಮದ ತನಿಖೆಗೆ ಎಬಿವಿಪಿ ಆಗ್ರಹ
ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮವನ್ನು ಪಾರದರ್ಶಕವಾಗಿ ತನಿಖೆಗೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿತು.
ಹೆಂಡ-ತಂಬಾಕಿನಂತೆ ಮೊಬೈಲ್ ಸಹ ವ್ಯಸನಕಾರಿ
ಮೊಬೈಲ್ ಸಹ ಹೆಂಡ ಹಾಗೂ ತಂಬಾಕಿನ ರೀತಿಯಲ್ಲೇ ವ್ಯಸನ ತರಿಸುವ ವಸ್ತು ಎಂದಿರುವ ಮಾನಸಿಕ ರೋಗ ತಜ್ಞರಾದ ಡಾ. ಎಂ. ಅನುಪಮ, ಎರಡು ವರ್ಷದ ಒಳಗಿನ ಮಕ್ಕಳನ್ನು ಮೊಬೈಲ್ನಿಂದ ಸಂಪೂರ್ಣ ದೂರವಿಡಬೇಕು ಎಂದಿದ್ದಾರೆ.

ಬೋಳಾಸ್ ದಿ ಫ್ಯಾಕ್ಟರಿ ಔಟ್ಲೆಟ್ ಆರಂಭ
ಕರಾವಳಿ ಬೋಳಾಸ್ ಸಮೂಹ ಸಂಸ್ಥೆ ಕಳೆದ ಏಳು ದಶಕಗಳಿಂದ ಗೋಡಂಬಿ ಮತ್ತು ಇತರ ಡ್ರೈ ಫ್ರೂಟ್ ಉದ್ಯಮದಲ್ಲಿ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಸರು ಮಾಡಿದೆ.

ಇಳುವರಿ ಸಂಸ್ಕರಣೆಯಿಂದ ಹೆಚ್ಚು ಆದಾಯ
ರೈತರಿಗಾಗಿ ನೀರಾವರಿ, ಮೌಲ್ಯವರ್ಧನೆ ಮಾರುಕಟ್ಟೆಯ ವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯೋಜನೆಗಳನ್ನು ರೂಪಿಸಿವೆ ಎಂದಿರುವ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ, ರೈತರ ಆದಾಯ ದ್ವಿಗುಣಗೊಳಿಸಿ ಹೆಚ್ಚಿನ ಜನರು ಕೃಷಿಯತ್ತ ಆಕರ್ಷಿತರಾಗು ವಂತೆ ಮಾಡಬೇಕಿದೆ ಎಂದಿದ್ದಾರೆ.

ನಾಟಕ ನೋಡಿ ಸದ್ಗುಣ ಬೆಳೆಸಿಕೊಳ್ಳಿ
ಕೇವಲ ನಾಟಕ ನೋಡಿ ಖುಷಿ ಪಡದೆ, ನಾಟಕದ ಸಾರವನ್ನು ಮೈಗೂಡಿಸಿಕೊಂಡು, ಬದುಕಿನ ಅವಗುಣಗಳನ್ನು ದೂರ ಮಾಡಿಕೊಂಡು ಸದ್ಗುಣ ಮೈಗೂಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ರೈತ ಉತ್ಪಾದಕ ಕಂಪನಿಗಳು ಕೃಷಿ ವಿಸ್ತರಣಾ ಕೇಂದ್ರಗಳಿದ್ದಂತೆ
ರೈತ ಉತ್ಪಾದಕ ಕಂಪನಿಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೃಷಿ ವಿಸ್ತರಣಾ ಕೇಂದ್ರಗಳಿದ್ದಂತೆ ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ|| ದೇವರಾಜ ಟಿ.ಎನ್ ಅಭಿಪ್ರಾಯಪಟ್ಟರು.

ಜಗಳೂರಿನ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆಗೆ ನಾಡಿದ್ದು ಮುಖ್ಯಮಂತ್ರಿ
ಜಗಳೂರು ತಾಲ್ಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಸೇರಿದಂತೆ ವಿವಿಧ ಇಲಾಖೆಗಳಿಂದ ನೀಡಲಾಗುವ ಸವಲತ್ತುಗಳ ವಿತರಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ ದಿನಾಂಕ 29 ರಂದು ಜಗಳೂರಿಗೆ ಆಗಮಿಸುತ್ತಿದ್ದಾರೆ.

ವಿಷಮುಕ್ತ ಆಹಾರ ಬೆಳೆದು ವಿಷಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ
ವಿಷಮುಕ್ತ ಆಹಾರ ಬೆಳೆದು ವಿಷಮುಕ್ತ ಸಮಾಜ ನಿರ್ಮಾಣಕ್ಕಾಗಿ ಕೈ ಜೋಡಿಸಬೇಕಿದೆ ಎಂದು ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್.ಟಿ ವೀರೇಶ್ ರೈತರಿಗೆ ಕರೆ ನೀಡಿದರು.

ಜಗಳೂರು : ರಸಗೊಬ್ಬರ, ಕೀಟನಾಶ, ಬಿತ್ತನೆ ಬೀಜಗಳ ಕಾಯ್ದೆಗಳ ಕುರಿತು ಉಪನ್ಯಾಸ
ಜಗಳೂರು, ಏ.26- ತಾಲ್ಲೂಕಿನ ಕೆಚ್ಚೇನಹಳ್ಳಿ ಗ್ರಾಮದಲ್ಲಿ ಮುಂಗಾರು ಹಂಗಾಮಿನ ಪೂರ್ವಭಾವಿ ಸಿದ್ದತೆ ಕುರಿತು ತಾಲ್ಲೂಕು ಕೃಷಿ ಪರಿಕರ ಮಾರಾಟಗಾರರ ಸಭೆಯನ್ನು ಜಂಟಿ ಕೃಷಿ ನಿದೇ೯ಶಕರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ರಾಣೇಬೆನ್ನೂರು ಬಿಜೆಪಿಯಲ್ಲಿ ಬಿರುಕು ನಗರಸಭೆ ಅಧ್ಯಕ್ಷೆ ವಿರುದ್ಧ ಅವಿಶ್ವಾಸಕ್ಕೆ ಮನವಿ
ರಾಣೇಬೆನ್ನೂರು : ಕೆಪಿಜೆಪಿಯಿಂದ ಆಯ್ಕೆಯಾದವರೂ ಸೇರಿದಂತೆ ಸ್ಪಷ್ಟ ಬಹುಮತದೊಂದಿಗೆ ರಾಣೇಬೆನ್ನೂರು ನಗರಸಭೆಯ ಅಧಿಕಾರ ಹಿಡಿದಿದ್ದ ಬಿಜೆಪಿಯಲ್ಲೀಗ ಬಿರುಕು ಬಿಟ್ಟಿದ್ದು, ನಗರಾಧ್ಯಕ್ಷೆ ರೂಪಾ ಚಿನ್ನಿಕಟ್ಟಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಭೆ ಕರೆಯುವಂತೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.