ನಗರದ ಜನನಿಬಿಡ ಮಾರುಕಟ್ಟೆಯ ಕೇಂದ್ರ ಬಿಂದುವಾದ ವಿಜಯಲಕ್ಷ್ಮಿ ರಸ್ತೆ, ಕಾಳಿಕಾದೇವಿ ರಸ್ತೆಗಳಲ್ಲಿರುವ ಅಂಗಡಿಗಳ ಮೇಲೆ ದಾಳಿ ನಡೆಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನೇತೃತ್ವದ ತಂಡ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಾಗೂ ಕೋವಿಡ್ ಮಾರ್ಗಸೂಚಿ ಪಾಲಿಸದ ಅಂಗಡಿಗಳಿಗೆ ದಂಡ ವಿಧಿಸಿದೆ.
ಪ್ರಮುಖ ಸುದ್ದಿಗಳು

ನೂತನ ಕಲಿಕಾ ವಿಧಾನ, ಗುಣಾತ್ಮಕ ಶಿಕ್ಷಣ
ಖಾಸಗಿ ಶಾಲೆಗಳ ಪೈಪೋಟಿ ನಡುವೆಯೂ ಸರ್ಕಾರಿ ಶಾಲೆಯೊಂದು ಜನಪ್ರಿಯತೆ ಗಳಿಸುವುದು, ಮಕ್ಕಳ ದಾಖಲಾತಿ ಹೆಚ್ಚಿಸಿಕೊಳ್ಳುವುದು ಸುಲಭದ ಮಾತಲ್ಲ. ಆದರೆ ದಾವಣಗೆರೆ ತಾಲ್ಲೂಕಿನ ಎಲೆಬೇತೂರು ಗ್ರಾಮದ ಸರ್ಕಾರಿ ಶಾಲೆಯೊಂದು ಅಂತಹ ಸಾಧನೆ ಮಾಡಿದೆ.

ಸರ್ಕಾರಿ-ಖಾಸಗಿ ಬಸ್ ಚಾಲಕ, ನಿರ್ವಾಹಕರ ಮಧ್ಯೆ ಮಾತಿನ ಚಕಮಕಿ
ಪ್ರಯಾಣಿಕರು ಸಂಚರಿಸುವ ಮಾರ್ಗದಲ್ಲಿ ಬಸ್ಸುಗಳನ್ನು ಓಡಿಸುವ ವಿಚಾರದಲ್ಲಿ ಕೆಎಸ್ಆರ್ಟಿಸಿ ಸಾರಿಗೆ ನೌಕರರು ಹಾಗೂ ಖಾಸಗಿ ಬಸ್ ನೌಕರರ ನಡುವೆ ಜಟಾಪಟಿ, ಮಾತಿನ ಚಕ ಮಕಿಯೂ ನಡೆದು ನಿಲ್ದಾಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಉತ್ತಮ ನಾಯಕತ್ವಕ್ಕೆ ಸಮಾಜಮುಖಿ ಕೆಲಸವೇ ಬುನಾದಿ
ಯುವಕರು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡರೆ ಉತ್ತಮ ನಾಯಕರಾಗಲು ಬುನಾದಿ ಆಗುತ್ತದೆ ಎಂದು ಮೇಯರ್ ಎಸ್.ಟಿ. ವೀರೇಶ್ ತಿಳಿಸಿದರು.

ಅಂಬೇಡ್ಕರ್ ಜಯಂತಿ ನಾಟಕೀಯ ಆಚರಣೆ
ಸಂವಿಧಾನ ಸುಟ್ಟು ಹಾಕಿದ್ದಲ್ಲದೇ, ಅದನ್ನು ಬದಲಾಯಿಸಲು ಮುಂದಾಗಿದ್ದವರು ಇದೀಗ ಅಂಬೇಡ್ಕರ್ಗೆ ಪುಷ್ಪಾರ್ಚನೆ ಮಾಡಿ ನಾಟಕೀಯವಾಗಿ ಜಯಂತಿ ಆಚರಿಸುತ್ತಿರುವುದು ದೇಶದ ಬಹುದೊಡ್ಡ ದುರಂತ
ಅಧಿಕಾರಿಗಳ ಕಣ್ತಪ್ಪಿಸಿ ಓಡಾಡುತ್ತಿರುವ ಸಾರಿಗೆ ನೌಕರರು!
ಸರ್ಕಾರಿ ನೌಕರ ರೆಂದು ಪರಿಗಣನೆ, 6ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಸಾರಿಗೆ ನೌಕರರು ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ನಿಗಮದ ಬೆರಳೆಣಿಕೆಯಷ್ಟು ನೌಕರರು ಮಾತ್ರ ದಿನದಿಂದ ದಿನಕ್ಕೆ ಹಂತ ಹಂತವಾಗಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ.

ಮಾಸ್ಕ್ ಹಾಕದವರಿಗೆ ಬೆಳಿಗ್ಗೆಯೇ ಶಾಕ್ !
ಇಂದು ಬೆಳ್ಳಂ ಬೆಳಿಗ್ಗೆ ಜನ ನಿಬಿಡ ಪ್ರದೇಶಗಳಾದ ತರಕಾರಿ ಮಾರುಕಟ್ಟೆ, ಗಡಿಯಾರ ಕಂಬ, ಎಪಿಎಂಸಿ ಸೇರಿದಂತೆ ವಿವಿಧೆಡೆ ತೆರಳಿದ ಜಿಲ್ಲಾಧಿಕಾರಿ ಹಾಗೂ ಎಸ್ಪಿ ತಂಡವು ಮಾಸ್ಕ್ ಹಾಕದವರನ್ನು ತರಾಟೆಗೆ ತೆಗೆದುಕೊಂಡಿತು.

ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಶುಲ್ಕ
ಕಳೆದ ಏಪ್ರಿಲ್ 10ನೇ ತಾರೀಖಿನಿಂದ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ `ಕುರ್ಕಿ ಪ್ಲಾಜಾ ' ಟೋಲ್ಗೇಟ್ ನಿರ್ಮಿಸಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ.

ಪ್ರಸ್ತುತ ಖಿನ್ನತೆಗೊಳ್ಳುತ್ತಿರುವ ಯುವ ಸಮೂಹ
ಇಂದಿನ ದಿನಮಾನಗಳಲ್ಲಿ ಯುವ ಸಮುದಾಯ ಖಿನ್ನತೆಗೆ ಒಳಗಾಗುತ್ತಿದ್ದು, ಆತ್ಮಹತ್ಯೆಯಂತಹ ಮಟ್ಟಕ್ಕೆ ಬಂದು ನಿಲ್ಲುತ್ತಿದ್ದಾರೆ. ಇಂತಹ ಸಂದರ್ಭಗಳು ದಿನೇ ದಿನೇ ಹೆಚ್ಚುತ್ತಿದ್ದು, ಇದಕ್ಕೆ ಕಾರಣ ಆಧುನಿಕ ಜೀವನ ಶೈಲಿಯಿಂದ ಯುವ ಸಮುದಾಯ ಅತಿಯಾದ ಒತ್ತಡಕ್ಕೆ ಒಳಗಾಗುತ್ತಿದೆ

ರೇಣುಕಾಚಾರ್ಯ ಸೇರಿ ಜಿಲ್ಲೆಯಲ್ಲಿ 133 ಪಾಸಿಟಿವ್
ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ 133 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟ ಬಗ್ಗೆ ಭಾನುವಾರ ವರದಿಯಾಗಿದೆ.

ಕಲ್ಯಾಣ ಮಂಟಪಗಳಿಗೆ ದಂಡ
ಕೋವಿಡ್ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ನೇತೃತ್ವದಲ್ಲಿ ತಹಸೀಲ್ದಾರ್ ಗಿರೀಶ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ತಂಡ ನಗರದಲ್ಲಿನ ಕಲ್ಯಾಣ ಮಂಟಪಗಳಿಗೆ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಸಾಪ ಚುನಾವಣೆ : ನುಚ್ಚು ನೂರಾದ ಅವಿರೋಧ ಆಯ್ಕೆಯ ಕನಸು
ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಬರುವ ಮೇ 9 ರಂದು ಚುನಾವಣೆ ನಡೆಯಲಿದ್ದು, ಇಲ್ಲಿ ಅವಿರೋಧವಾಗಿ ಆಯ್ಕೆಯಾಗಬಹುದಾಗಿದ್ದರೂ ಒಬ್ಬರಿಂದಾಗಿ ಚುನಾವಣೆ ನಡೆಯಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದಲ್ಲಿ ಸ್ವಚ್ಛತೆ, ಹಂದಿಗಳಿಂದ ವಿಮೋಚನೆ
ಸ್ವಚ್ಛತೆ, ದೂಳು ಮುಕ್ತ ಹಾಗೂ ಹಸಿರು ನಗರಕ್ಕೆ ಆದ್ಯತೆ ನೀಡುವ ಬಜೆಟ್ ರೂಪಿಸಿರುವುದಾಗಿ ಹೇಳಿರುವ ಮೇಯರ್ ಎಸ್.ಟಿ. ವೀರೇಶ್, ಬಿಡಾಡಿ ದನ, ನಾಯಿ ಹಾಗೂ ಹಂದಿಗಳ ನಿವಾರಣೆಗೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ನರೇಗಾದಡಿ ಇಡೀ ಜಿಲ್ಲೆಯ ಅಡಿಕೆ ತೋಟಗಳ ನಿರ್ವಹಣೆ: ಅನುಮತಿ ಕೊಡಿಸಲು ಪ್ರಯತ್ನ
ಇಡೀ ಜಿಲ್ಲೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ಅಡಿಕೆ ತೋಟ ನಿರ್ವಹಣೆಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅನುಮತಿ ಕೊಡಿಸಲು ಪ್ರಯತ್ನಿಸಲಾಗು ವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದ್ದಾರೆ.

ನಗರದ ಪತ್ರಕರ್ತರು ಮತ್ತು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ : ಪಾಲಿಕೆಗೆ ಕೃತಜ್ಞತೆ
ನಗರದ ಪತ್ರಕರ್ತರು ಮತ್ತು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿಯನ್ನು ಸ್ಥಾಪಿಸಿ, ಅದಕ್ಕೆ 10 ಲಕ್ಷ ರೂ. ಅನುದಾನವನ್ನು ಇಂದು ನಡೆದ ಮಹಾನಗರ ಪಾಲಿಕೆಯ 2021-22ನೇ ಸಾಲಿನ ಆಯ-ವ್ಯಯದಲ್ಲಿ ಮೀಸಲಿಡಲು ನಿರ್ಧರಿಸಿರುವ ನಗರ ಪಾಲಿಕೆಯ ಕ್ರಮವನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸ್ವಾಗತಿಸಿ, ಅಭಿನಂದಿಸಿದೆ.

ತ್ಯಾಜ್ಯ ವಿಲೇವಾರಿ, ಪರಿಸರ ರಕ್ಷಣೆಗೆ ಹೆಚ್ಚಿನ ಆದ್ಯತೆ
ಸ್ವಚ್ಛ ನಗರ, ಸಮೃದ್ಧ ಪರಿಸರ ರಕ್ಷಣೆಗೆ ನನ್ನ ಮೊದಲ ಆದ್ಯತೆ. ತಾಜ್ಯ ವಿಲೇವಾರಿ ಸೇರಿದಂತೆ ಕುಡಿಯುವ ನೀರು, ಪ್ರತಿ ಬಡಾವಣೆಗಳಲ್ಲಿ ಗಿಡಮರಗಳನ್ನು ಬೆಳೆಸಿ ಈ ನಗರವನ್ನು ಉದ್ಯಾನ ನಗರಿಯಾಗಿ ಪರಿವರ್ತಿಸಲು ನನ್ನ ಅವಧಿಯಲ್ಲಿ ಶತಪ್ರಯತ್ನ.

ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಆಗ್ರಹಿಸಿ ಸಾರಿಗೆ ನೌಕರರಿಂದ ಎಸ್ಸೆಸ್ಗೆ ಮನವಿ
6ನೇ ವೇತನ ಆಯೋಗ ಜಾರಿ ವಿಚಾರವಾಗಿ ನೌಕರರ ಪರವಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ಮನವಿ ಮಾಡಿದರು.

ಕೊರೊನಾ ಸೋಂಕು ತೀವ್ರವಾದರೆ ಮಾತ್ರ ಆಸ್ಪತ್ರೆಗೆ ದಾಖಲು
ಬೆಂಗಳೂರು : ಹೆಚ್ಚು ರೋಗ ಲಕ್ಷಣ ಇರುವವರು ಮತ್ತು ತೀವ್ರವಾಗಿ ಬಳಲುತ್ತಿರುವ ಕೋವಿಡ್ ರೋಗಿಗಳನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿ ಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರೈಲ್ವೇ ಕೆಳ ಸೇತುವೆ : ಶಾಶ್ವತ ಪರಿಹಾರ ಕಲ್ಪಿಸಲು ಮೇಯರ್ ಎಸ್.ಟಿ. ವೀರೇಶ್ ಸೂಚನೆ
ಪಾಲಿಕೆ ಮುಂಭಾಗದ ರೈಲ್ವೇ ಅಂಡರ್ ಬ್ರಿಡ್ಜ್ ಕೆಳಗಿನ ಕಸವನ್ನು ತೆರವುಗೊಳಿಸಿದ ಮೇಯರ್ ಎಸ್.ಟಿ. ವೀರೇಶ್, ಶಾಶ್ವತ ಪರಿಹಾರಕ್ಕೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ತುಪ್ಪದಹಳ್ಳಿ ಕೆರೆ ಹೂಳು ತೆಗೆಯಲು 8 ಕೋಟಿ ರೂ. ಮಂಜೂರು
ಸಿರಿಗೆರೆ : ಜಗಳೂರು ಏತ ನೀರಾವರಿ ಯೋಜನೆಯ ಅಡಿಯಲ್ಲಿ ಬರುವ ತುಪ್ಪದಹಳ್ಳಿ ಕೆರೆಯ ಹೂಳು ತೆಗೆಸಲು 5 ಕೋಟಿ ರೂ. ಮತ್ತು ಏರಿಯನ್ನು ಸದೃಢ ಪಡಿಸಲು 3 ಕೋಟಿ ರೂ. ಸೇರಿ ಒಟ್ಟು 8 ಕೋಟಿ ರೂ. ಗಳನ್ನು ಸರ್ಕಾರ ಮಂಜೂರು ಮಾಡಿದೆ.

ಜಾಹೀರಾತಿಗೆ ಮಾರು ಹೋಗದೆ, ಐಎಸ್ಐ ಗುರುತಿನ ವಸ್ತುಗಳನ್ನು ಖರೀದಿಸಬೇಕು
ಹರಿಹರ : ಗ್ರಾಹಕರು ತಾವು ಖರೀದಿಸಿದ ವಸ್ತುಗಳಲ್ಲಿ ಗುಣಮಟ್ಟದ ಕೊರತೆ ಕಂಡುಬಂದಾಗ ಈ ಕುರಿತು ಗ್ರಾಹಕರ ಸೇವಾ ಕೇಂದ್ರಕ್ಕೆ ದೂರು ನೀಡಿ, ಪರಿಹಾರವನ್ನು ಪಡೆಯುವುದಕ್ಕೆ ಮುಂದಾಗಬೇಕು ಎಂದು ತಹಶೀಲ್ದಾರ ಕೆ.ಬಿ. ರಾಮಚಂದ್ರಪ್ಪ ತಿಳಿಸಿದರು.

ಮಲೇಬೆನ್ನೂರು : ಪುರ ಪ್ರವೇಶ ಮಾಡಿದ ನೂತನ ಶಿಲಾಮೂರ್ತಿಗಳು
ಮಲೇಬೆನ್ನೂರು : ಪಟ್ಟಣದ ಹೊರವಲಯದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮೇ 14 ರಂದು ಪ್ರತಿಷ್ಠಾಪನೆಗೊಳ್ಳಲಿರುವ ಶಿಲಾ ಮೂರ್ತಿಗಳಿಗೆ ಇಂದು ಮಲೇಬೆನ್ನೂರು ಹಾಗೂ ಕುಂಬಳೂರಿನಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.

ಸಾರ್ವಜನಿಕ ಆಸ್ಪತ್ರೆಗೆ ಹರೀಶ್ ಭೇಟಿ
ಹರಿಹರ : ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಜಗತ್ತು ಕಂಡ ಮಹಾನ್ ನಾಯಕ ಡಾ. ಬಿ.ಆರ್. ಅಂಬೇಡ್ಕರ್ರವರ 130ನೇ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಪಿ. ಹರೀಶ್ ಬಾಬಾ ಸಾಹೇಬರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವಿಸಿದರು.
ಕೊರೊನಾ ತಡೆಯಲು 15 ದಿನಗಳ ನಿರ್ಬಂಧ
ಬೆಂಗಳೂರು : ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಸಾಂಕ್ರಾಮಿಕ ರೋಗ ತಡೆಗಟ್ಟಲು ದೆಹಲಿ ಮತ್ತು ಮಹಾರಾಷ್ಟ್ರ ಮಾದರಿಯಲ್ಲೇ ಅನುಷ್ಠಾನಗೊಳಿಸುವಂತೆ ತಜ್ಞರ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.