ಪುಷ್ಕರಣಿ

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಚನ್ನಗಿರಿ ತಾಲ್ಲೂಕು ಸಂತೇಬೆನ್ನೂರು ಐತಿಹಾಸಿಕ ಪುಷ್ಕರಣೆಗೆ ನೀರು ತುಂಬಿಕೊಳ್ಳುತ್ತಿದೆ.  ಪುಷ್ಕರಣಿಯ ಪಕ್ಕದಲ್ಲಿಯೇ ಇದ್ದ ಆನೆಹೊಂಡ ಸುತ್ತಲೂ ಹರಿದು ಬರುವ ನೀರು ಒಳನಾಲೆಯ ಮೂಲಕ ಪುಷ್ಕರಣಿಗೆ ಬೀಳುತ್ತಿದೆ. ತನ್ನೊಡಲಲ್ಲಿ ನೀರು ತುಂಬಿಕೊಂಡ ಪುಷ್ಕರಣಿಯ ಅಂದ ಸವಿಯಲು ಜನರು ಧಾವಿಸುತ್ತಿದ್ದಾರೆ.