ದಾವಣಗೆರೆ ತಾಲ್ಲೂಕು ದೊಡ್ಡ ಬೂದಿಹಾಳು ಗ್ರಾಮದ ವಾಸಿ ರಾಯಪ್ಪರ ಶಿವಪ್ಪ (78) ಅವರು ದಿನಾಂಕ 14.01.2021 ರಂದು ಗುರುವಾರ ಸಂಜೆ 5.30ಕ್ಕೆ ನಿಧನರಾಗಿದ್ದಾರೆ.
ನಿಧನ
ಎ.ಎಂ. ಬಸವರಾಜಯ್ಯ
ದಾವಣಗೆರೆ ಸಿಟಿ, ಆನೆಕೊಂಡದ ನಿವಾಸಿ ದಿ.ಶ್ರೀಮತಿ ಚನ್ನಮ್ಮ ಶ್ರೀ ಎಂ. ಮಹೇಶ್ವರಪ್ಪಯ್ಯನವರ ಸೊಸೆ ಶ್ರೀಮತಿ ಬಸಮ್ಮ ಇವರ ಪತಿ ಶ್ರೀ ಎ.ಎಂ. ಬಸವರಾಜಯ್ಯ (60) ಇವರು ದಿನಾಂಕ 14.01.2021ರ ಗುರುವಾರ ಮಧ್ಯಾಹ್ನ 12.30ಕ್ಕೆ ನಿಧನರಾಗಿರುತ್ತಾರೆ.
ಎನ್. ಕೆ. ಮಹದೇವಮ್ಮ (ಚಂಪಮ್ಮ)
ದಾವಣಗೆರೆ ಹೊಂಡದ ರಸ್ತೆ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಹತ್ತಿರದ ವಾಸಿ ದಿ|| ಎನ್.ಕೆ. ಮಹೇಶ್ವರಪ್ಪನವರ ಧರ್ಮಪತ್ನಿ ಶ್ರೀಮತಿ ಎನ್.ಕೆ. ಮಹದೇವಮ್ಮ (ಚಂಪಮ್ಮ) ಅವರು ದಿನಾಂಕ 13.01.2021 ರ ಬುಧವಾರ ರಾತ್ರಿ 8 ಗಂಟೆಗೆ ನಿಧನರಾಗಿದ್ದಾರೆ.
ಕೆ.ಎಸ್. ಶ್ರೀನಿವಾಸ್
ಹರಿಹರ ತಾಲ್ಲೂಕು ಕುಂಬಳೂರು ಗ್ರಾಮದ ಆರಾಧ್ಯ ದೈವ ಶ್ರೀ ಹನುಮಂತ ದೇವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಕೆ.ಎಸ್. ಶ್ರೀನಿವಾಸ್ (ಸೀನಪ್ಪ ಸ್ವಾಮಿ) ಅವರು, ದಿನಾಂಕ 13.01.2021ರ ಬುಧವಾರ ತಡರಾತ್ರಿ 12 ಗಂಟೆಗೆ ನಿಧನರಾದರು.
ಪ್ರಮೀಳಾ ಷಣ್ಮುಖಪ್ಪ
ದಾವಣಗೆರೆ ವಿದ್ಯಾನಗರ 2ನೇ ಬಸ್ಸ್ಟಾಪ್ ಹತ್ತಿರದ ವಾಸಿ, ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ಸಮಾಜಶಾಸ್ತ್ರ ಪ್ರಾಧ್ಯಾಪಕರಾದ ಶ್ರೀಮತಿ ಪ್ರಮೀಳಾ ಷಣ್ಮುಖಪ್ಪ (ಗೌಡರ) ಅವರು ದಿನಾಂಕ 13.01.2021ರ ಬುಧವಾರ ಮಧ್ಯಾಹ್ನ 3 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಎನ್. ಕೆ. ಮಹದೇವಮ್ಮ (ಚಂಪಮ್ಮ)
ದಾವಣಗೆರೆ ಎಪಿಎಂಸಿ ಯಾರ್ಡ್ ಪ್ರಸಾದ್ ಟ್ರೇಡರ್ಸ್ ಮಾಲೀಕರಾದ ಜೆ. ರವೀಂದ್ರಗುಪ್ತ ಹಾಗೂ ಕೆ.ಜೆ. ಪ್ರಸಾದ್ ಇವರ ಮಾತೃಶ್ರೀ ಶ್ರೀಮತಿ ಸತ್ಯಭಾಮ (88 ವರ್ಷ) ಅವರು ದಿ. 13.01.2021ರ ಬುಧವಾರ ಸಂಜೆ 6.35ಕ್ಕೆ ಗಂಗಾವತಿಯಲ್ಲಿ ನಿಧನರಾದರೆಂದು ತಿಳಿಸಲು ವಿಷಾಧಿಸುತ್ತೇವೆ.
ಮೊಹಮದ್ ಖುದ್ರತ್ವುಲ್ಲಾ
ದಾವಣಗೆರೆ ಆಜಾದ್ ನಗರ 1ನೇ ಮೇನ್ 8ನೇ ಕ್ರಾಸ್ (# 614) ವಾಸಿ, ಮೊಹಮದ್ ಖುದ್ರತ್ವುಲ್ಲಾ (56) ಅವರು ದಿನಾಂಕ 12.1.2021ರ ಮಂಗಳವಾರ ರಾತ್ರಿ 8 ಗಂಟೆಗೆ ನಿಧನರಾದರು.
ಎಂ.ಎಸ್. ಶ್ರೀಧರ್
ದಾವಣಗೆರೆ ಸಮೀಪದ ಬೇತೂರು ಗ್ರಾಮದ ವಾಸಿ, ದಿ|| ಪರಮಶಿವಯ್ಯ ಇವರ ಪುತ್ರ ಶ್ರೀ ಎಂ.ಎಸ್. ಶ್ರೀಧರ್ ಬಿ.ಇ. ಟೆಕ್ಸ್ಟೈಲ್ ಇಂಜಿನಿಯರ್ಅವರು ದಿನಾಂಕ 12.01.2020ರ ಮಂಗಳವಾರ ರಾತ್ರಿ 11.30 ಕ್ಕೆ ನಿಧನರಾಗಿದ್ದಾರೆ.
ವೈ.ಕೆ. ರಾಘವೇಂದ್ರ
ದಾವಣಗೆರೆ ನಿಜಲಿಂಗಪ್ಪ ಬಡಾವಣೆ ವಾಸಿ ದಿ. ಹೊಸಹಳ್ಳಿ ಕೊಟ್ರಪ್ಪ ಹಾಗೂ ಶ್ರೀಮತಿ ಶಾಂತಮ್ಮ ದಂಪತಿ ಪುತ್ರ ವೈ.ಕೆ. ರಾಘವೇಂದ್ರ (44) ಅವರು ದಿನಾಂಕ 11.01.2021 ರಂದು ಸೋಮವಾರ ಸಂಜೆ 7.30ಕ್ಕೆ ನಿಧನರಾಗಿದ್ದಾರೆ.
ಬಿಕ್ಕಿಕಟ್ಟಿ ನಿಂಗಪ್ಪ
ಹರಪನಹಳ್ಳಿ ತಾಲ್ಲೂಕಿನ ದೇವರ ತಿಮ್ಮಲಾಪುರದ ನಿವಾಸಿ ಬಿಕ್ಕಿಕಟ್ಟಿ ನಿಂಗಪ್ಪ (88) ಅವರು ದಿನಾಂಕ 11.1.2021ರ ಸೋಮವಾರ ನಿಧನರಾಗಿದ್ದಾರೆ.