ಜೆಡಿಎಸ್ಗೆ ಖೆಡ್ಡಾ ತೋಡಿದ ಸಿದ್ಧರಾಮಯ್ಯ

 

ಮಾನ್ಯರೇ,

ಹಿಂದೆ ಮಹಾಭಾರತದಲ್ಲಿ ಶಕುನಿಯ ಅಣ್ಣತಮ್ಮಂದಿರನ್ನು ಒಂದು ಮನೆಯಲ್ಲಿ ಕೂಡಿ ಹಾಕಿ ಒಬ್ಬರಿಗೇ ಹಾಕುವ ಊಟವನ್ನು ನೂರು ಜನರಿಗೆ ಕೊಟ್ಟ ಕೌರವರ ಕಥೆ ನಿಮಗೆ ಗೊತ್ತಿದೆ.

ಆ ಊಟವನ್ನು ಶಕುನಿ ಅಣ್ಣತಮ್ಮಂದಿರು ಶಕುನಿಗೆ ನೀಡಿ ಎಲ್ಲರೂ ಮರಣ ಹೊಂದುತ್ತಾರೆ. ನಂತರ ಶಕುನಿ ಕೌರವರ ಕಡೆ ಸೇರಿ ಅವರನ್ನು ಹೇಗೆ ಕೊನೆಗಾಣಿಸಿದ ಎಂದು ತಿಳಿದಿದೆ ಅಲ್ಲವೇ…

ಈ ಕಥೆಯಂತೆ ಹೊರಗಡೆಯಿಂದ ಜೆಡಿಎಸ್ ಮುಗಿಸಲು ಅಸಾಧ್ಯ ಎಂದರಿತ ಸಿದ್ಧರಾಮಯ್ಯ , ಜೆಡಿಎಸ್ನಲ್ಲಿದ್ದಾಗ ತಮಗಾದ ಅವಮಾನಗಳನ್ನು ಮೈತ್ರಿ ಧರ್ಮದ ಮೂಲಕ ತೀರಿಸಿಕೊಳ್ಳುತ್ತಿದ್ದಾರೆ. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ತಮ್ಮ ಶಿಷ್ಯಂದಿರನ್ನು ಎತ್ತಿಕಟ್ಟುತ್ತಲೇ ಬಂದಿದ್ದಾರೆ. ಈಗ ಲೋಕಸಭೆ ಚುನಾವಣೆ ಮೂಲಕ ಸಿದ್ಧರಾಮಯ್ಯ ಜೆಡಿಎಸ್ ಮಲಗಿಸಲು ಮೈದಾನವನ್ನೇ ಸಿದ್ಧಪಡಿಸಿದ್ದಾರೆ.

ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ವಿಜಯಪುರ, ಉತ್ತರ ಕನ್ನಡ, ಬೆಂಗಳೂರು ಉತ್ತರ, ಈ ಕ್ಷೇತ್ರಗಳು ಬಿಜೆಪಿ ಭದ್ರಕೋಟೆಗಳು. ಇಲ್ಲಿ ಜೆಡಿಎಸ್ಗೆ ಕಠಿಣ ಸವಾಲಗಳಿದೆ. ಇನ್ನು ಮಂಡ್ಯ, ಹಾಸನ, ತುಮಕೂರು ಕ್ಷೇತ್ರಗಳಲ್ಲಿ ಗೆಲ್ಲುವ ವಾತಾವರಣ ಇದ್ದರೂ ಕೂಡ ಸಿದ್ಧರಾಮಯ್ಯ ಇಲ್ಲಿಯೂ ತಮ್ಮ ಪ್ರಭಾವ ಬೀರಿದ್ದಾರೆ. ಅಲ್ಲಿ ಜೆಡಿಎಸ್ ಅನ್ನು ಮೈತ್ರಿ ಧರ್ಮದ ಮೂಲಕ ಕಟ್ಟಿ ಚೆನ್ನಾಗಿ ಖೆಡ್ಡಾ ತೋಡಿದ್ದಾರೆ.

ಮಂಡ್ಯದಲ್ಲಿ ಸುಮಲತಾ, ಹಾಸನದಲ್ಲಿ ಎ. ಮಂಜು ಅವರನ್ನು ಎತ್ತಿಕಟ್ಟಿ ಜೆಡಿಎಸ್ಗೇ ಖೆಡ್ಡಾ ತೋಡಿದ್ದಾರೆ. ತುಮಕೂರನ್ನು ಜೆಡಿಎಸ್ಗೆ ಬಿಟ್ಟುಕೊಟ್ಟು ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಂತೆ. ಜೆಡಿಎಸ್ಗೂ ಹಾಗೂ ಪರಮೇಶ್ವರಗೂ ಖೆಡ್ಡಾ ತೋಡಿದ್ದಾರೆ.

ಪಿ.ಕೆ. ಪ್ರಭಾಕರ್
ನಿಟುವಳ್ಳಿ
ದಾವಣಗೆರೆ.