ಮಲೇಬೆನ್ನೂರು : ಜಿ. ಬೇವಿನಹಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರ ದಿನಾಚರಣೆ ಮತ್ತು ಸಸಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಚಿತ್ರದಲ್ಲಿ ಸುದ್ದಿ

ತೋಳಹುಣಸೆ : ಕಲಿಕಾ ಕಿಟ್ಗಳ ವಿತರಣೆ
ತೋಳಹುಣಸೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಕ್ಲಬ್ ದಾವಣಗೆರೆ ದಕ್ಷಿಣದ ವತಿಯಿಂದ ಮಕ್ಕಳಿಗೆ ಕಲಿಕಾ ಕಿಟ್ಗಳನ್ನು ವಿತರಿಸಲಾಯಿತು.

ಹರಿಹರದಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಹರಿಹರ : ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಇಂದು ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ ಅವರಿಗೆ ಮನವಿಯನ್ನು ಸಲ್ಲಿಸಿದರು.

ಆಸ್ಪತ್ರೆ ಮುಂದೆ ಪ್ರತಿಭಟನೆ
ರಾಣೇಬೆನ್ನೂರು : ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಆವರಣ ದಲ್ಲಿ ಕೋವಿಡ್ ಪತ್ತೆ ಘಟಕದ ಕಟ್ಟಡ ನಿರ್ಮಾಣ ಸೇರಿದಂತೆ ಆಸ್ಪ ತ್ರೆಯ ಎಲ್ಲಾ ತ್ಯಾಜ್ಯಗಳನ್ನು ಎಸೆಯುತ್ತಿರುವುದನ್ನು ವಿರೋಧಿಸಿ, ಆಸ್ಪತ್ರೆ ಸುತ್ತಲಿನ ನಿವಾಸಿಗಳು ಇಂದು ಪ್ರತಿಭಟಿಸಲಾಯಿತು.

ಇಂಧನ ಬೆಲೆ ಏರಿಕೆ ಖಂಡಿಸಿ ಕರವೇ ಪ್ರತಿಭಟನೆ
ಜಯದೇವ ವೃತ್ತದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ನಾಗರಾಜ್ ಜಮ್ಮನಹಳ್ಳಿ ನೇತೃತ್ವದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಸರಣಿಯಲ್ಲಿ ಏರಿಕೆ ಮಾಡುತ್ತಿರುವುದು ಸರಿಯಲ್ಲ

ಗೋಶಾಲೆಗೆ ಶಿವಗಂಗಾ ಮೇವು ದಾನ
ದಾವಣಗೆರೆ : ಉದ್ಯಮಿ ಶ್ರೀನಿವಾಸ್ ಶಿವಗಂಗಾ ಅವರು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಆವರಗೆರೆಯ ಶ್ರೀ ಭಗವಾನ್ ಮಹಾವೀರ ಗೋಶಾಲೆಯ ಹಸುಗಳಿಗೆ ಮೇವು ದಾನ ಮಾಡಿದರು.

ಪೊಲೀಸ್ ಸ್ಟೇಷನ್ ಕಾಂಪೌಂಡ್ ಗೇಟ್ ಉದ್ಘಾಟನೆ
ಕ್ರೆಡಿಟ್ ಆಕ್ಸೆಸ್ ಗ್ರಾಮೀಣ್ ಲಿಮಿಟೆಡ್-ಗ್ರಾಮೀಣ ಕೂಟ, ದಾವಣಗೆರೆ ವಲಯದ ವತಿಯಿಂದ ಪಿ.ಜೆ. ಬಡಾವಣೆಯ ದಾವಣಗೆರೆ ಪೊಲೀಸ್ ಸ್ಟೇಷನ್ಗೆ ಕಾಂಪೌಂಡ್ ಗೇಟ್ ಅನ್ನು ಕೊಡುಗೆಯಾಗಿ ನೀಡಿದ್ದು, ಅಡಿಷನಲ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ರಾಜೀವ್ ಉದ್ಘಾಟಿಸಿದರು.

ಹರಪನಹಳ್ಳಿಯ ಅರಸೀಕೆರೆ ಗ್ರಾ.ಪಂ. ಕಚೇರಿಗೆ ಬೀಗ ಜಡಿದು ಪ್ರತಿಭಟನೆ
ಹರಪನಹಳ್ಳಿ : ಕಳೆದ 20 ತಿಂಗಳಿನಿಂದ ವೇತನ ನೀಡದಿರುವುದಕ್ಕೆ ಸಿಟ್ಟಿಗೆದ್ದ ದಿನಗೂಲಿ ನೌಕರರು ಅಧಿಕಾರಿಗಳನ್ನು ಕೂಡಿ ಹಾಕಿ ಗ್ರಾ.ಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆಯಲ್ಲಿ ಇಂದು ಜರುಗಿದೆ.

ರೋಟರಿ ದಕ್ಷಿಣ ಅಧ್ಯಕ್ಷರಾಗಿ ಬಸವರಾಜ್
ದಾವಣಗೆರೆ ದಕ್ಷಿಣ ರೋಟರಿ ಕ್ಲಬ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹೆಚ್.ಜಿ.ಬಸವರಾಜ್, ಕಾರ್ಯದರ್ಶಿಯಾಗಿರುವ ಪ್ರಶಾಂತ್ ಅಂಬರ್ಕರ್ ಅವರು ರೋಟರಿ ಬಾಲಭವನದಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಪದಗ್ರಹಣ ಮಾಡಿದರು.

ಕಸ ವಿಲೇವಾರಿ ವಾಹನ ಉದ್ಘಾಟನೆ
ನಗರದ ಶ್ರೀ ಡಿ. ದೇವರಾಜ ಅರಸು ಬಡಾವಣೆ `ಎ' ಬ್ಲಾಕ್ ವ್ಯಾಪ್ತಿಯ ಮಹಾನಗರ ಪಾಲಿಕೆಯ 15ನೇ ವಾರ್ಡಿನ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ನಗರ ಪಾಲಿಕೆಯಿಂದ ವಿತರಣೆಯಾಗಿರುವ ಮನೆ ಕಸ ವಿಲೇವಾರಿ ವಾಹನ ನಾಗರಿಕರ ಸೇವೆಗೆ ಸಮರ್ಪಿಸಿದರು.

ಮಾಯಕೊಂಡದಲ್ಲಿ ರೈತರ ಪ್ರತಿಭಟನೆ
ಮಾಯಕೊಂಡ ಛ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರದಂತೆ ಮತ್ತು ಬಗರ್ ಹುಕ್ಕುಂ ಸಾಗುವಳಿದಾರರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ, ಉಪ ತಹಶೀಲ್ದಾರ್ ಲೋಕೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಣೇಬೆನ್ನೂರು ಸಂಪೂರ್ಣ ಲಾಕ್ ಡೌನ್
ರಾಣೇಬೆನ್ನೂರು : ಕೊರೊನಾ ಹರಡದಂತೆ ಸರ್ಕಾ ರದ ಆದೇಶದ ಲಾಕ್ಡೌನ್ ಬೆಂಬ ಲಿಸಿದ ನಗರದ ಎಲ್ಲ ವರ್ತಕರು ತಮ್ಮ ಅಂಗಡಿ ಮುಂಗಟ್ಟು ಗಳನ್ನು ಬಂದ್ ಮಾಡಿದ್ದರು.