ಕೂಡ್ಲಿಗಿ : ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾ ಸಭಾದ ಕೂಡ್ಲಿಗಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಪಟ್ಟಣದ ಎಸ್.ಸುರೇಶ್ ಅವರನ್ನು ರಾಜ್ಯ ವಾಲ್ಮೀಕಿ ಮಹಾ ಸಭಾದ ಕಾರ್ಯದರ್ಶಿ ಹರ್ತಿಕೋಟೆ ವೀರೇಂದ್ರಸಿಂಹ ನೇಮಕ ಮಾಡಲಾಗಿದೆ.
ಚಿತ್ರದಲ್ಲಿ ಸುದ್ದಿ

ಜಿಲ್ಲೆಯಲ್ಲಿನ ಮಳೆಗೆ 23.55 ಲಕ್ಷ ರೂ. ನಷ್ಟ
ಜಿಲ್ಲೆಯಲ್ಲಿ ಅ.20 ರಂದು 36 ಮಿ.ಮೀ ಸರಾಸರಿ ಮಳೆಯಾಗಿದ್ದು, ಮನೆ, ಬೆಳೆ ಸೇರಿದಂತೆ ಒಟ್ಟು 23.55 ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ ಅತಿ ಹೆಚ್ಚು 60 ಮಿ.ಮೀ. ಸರಾಸರಿ ಮಳೆಯಾಗಿದೆ.

ಎಡಪಂಥೀಯ ಸಂಘಟನೆಗಳಲ್ಲಿ ಮುಂಚೂಣಿ ನಾಯಕತ್ವದಲ್ಲಿದ್ದ ಮಾರುತಿ ಮಾನ್ಪಡೆ
ಜಗಳೂರು : ಪ್ರಾಂತ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಅವರ ನಿಧನಕ್ಕೆ ಪ್ರಗತಿಪರ ಸಂಘಟನೆ ವತಿಯಿಂದ ಸಂತಾಪ ಸೂಚಿಸಲಾಯಿತು.

ಜಗಳೂರು : ಎಸ್ಎಫ್ಐ ಪ್ರತಿಭಟನೆ
ಜಗಳೂರು : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಸ್ಎಫ್ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಬಿ.ಸಿ.ಉಮಾಪತಿ ಅವರ ಮನೆಗೆ ಗೃಹಮಂತ್ರಿ ಬೊಮ್ಮಾಯಿ ಭೇಟಿ
ಗೃಹ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಅವರು ನಿನ್ನೆ ಬೆಳಿಗ್ಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುವ ಮಾರ್ಗಮಧ್ಯೆ ಪಂಚಮಸಾಲಿ ಜಗದ್ಗುರು ಪೀಠದ ಪ್ರಧಾನ ಧರ್ಮದರ್ಶಿಯೂ ಆದ ಜವಳಿ ಉದ್ಯಮಿ ಬಿ.ಸಿ.ಉಮಾಪತಿ ಅವರ ನಿವಾಸಕ್ಕೆ ಸೌಹಾರ್ದ ಭೇಟಿ ನೀಡಿದ್ದರು.

ಪಂಚಮಸಾಲಿ ಪೀಠದಲ್ಲಿ ನವದುರ್ಗೆಯರ ಪ್ರತಿಷ್ಠಾಪನೆ
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ವಿಜಯದಶಮಿ ಮತ್ತು ನವರಾತ್ರಿ ಅಂಗವಾಗಿ ನವದುರ್ಗೆಯರ ಪ್ರತಿಷ್ಠಾಪನೆ ಮತ್ತು ಪೂಜಾ ಕೈಂಕರ್ಯಗಳನ್ನು ಜಿಲ್ಲಾ ಮತ್ತು ನಗರ ಹರಿಹರ ತಾಲ್ಲೂಕು ಪಂಚಮಸಾಲಿ ಮಹಿಳಾ ಘಟಕದ ವತಿಯಿಂದ ನಡೆಸಲಾಯಿತು.

ದಂಡ ಬದಲು ಮಾಸ್ಕ್ ವಿತರಿಸಿದ ಗ್ರಾಮಾಂತರ ಪೊಲೀಸರು
ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಆನಗೋಡು ಗ್ರಾಮದಲ್ಲಿ 'ನನ್ನ ಮಾಸ್ಕ್ ನನ್ನ ಲಸಿಕೆ' ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.

ರೈಲ್ವೆ ಬಿಡಿಭಾಗಗಳ ಸಾಗಿಸುತ್ತಿದ್ದ ಟ್ರಕ್ ಪಲ್ಟಿ
ರೈತರಿಗೆ ಸಹಾಯ ಹಸ್ತ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಿದ್ದವಿದ್ದು ರೈತರು ಎದೆಗುಂದಬಾರದು ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಹೇಳಿದರು.

ಲೋಕ ಕಲ್ಯಾಣಾರ್ಥ ದೇವರಗುಡ್ಡದಲ್ಲಿ ಗೊರವಯ್ಯನವರಿಗೆ ದೋಣಿ ಪೂಜೆ
ಲೋಕ ಕಲ್ಯಾಣಾರ್ಥ ಹಾಗೂ ಅಧಿಕ ಮಾಸದ ಪ್ರಯುಕ್ತ ದೇವರಗುಡ್ಡದ ಶ್ರೀ ಮಾಲತೇಶ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಸಂತೋಷ ಭಟ್ಟ ಪೂಜಾರ ನೇತೃತ್ವದಲ್ಲಿ ಶ್ರೀಸ್ವಾಮಿಗೆ ವಿಶೇಷ ಪೂಜೆ ಮತ್ತು 101 ಗೊರವಯ್ಯನವರ ದೋಣಿಗೆ ಪೂಜೆ, ಕಂಬಳಿಯನ್ನು ವಿತರಿಸಲಾಯಿತು.

ಮಲೇಬೆನ್ನೂರಿನಲ್ಲಿ ಮಾಸ್ಕ್ ಹಾಕದವರಿಗೆ ದಂಡ
ಮಲೇಬೆನ್ನೂರು : ಮಾಸ್ಕ್ ಧರಿಸದಿರುವ ಸಾರ್ವಜನಿಕರಿಗೆ ದಂಡ ಹಾಕುವ ಬಗ್ಗೆ ಪಟ್ಟಣದಲ್ಲಿ ಧ್ವನಿ ವರ್ಧಕದ ಮೂಲಕ ಜಾಗೃತಿ ಮೂಡಿಸಿದ್ದರೂ ಸಹ ಮಾಸ್ಕ್ ಹಾಕದ ಸಾರ್ವಜನಿಕರಿಗೆ ಪುರಸಭೆ ಅಧಿಕಾರಿಗಳು ದಂಡ ಹಾಕುತ್ತಿದ್ದಾರೆ.

ಪಿ.ಬಿ. ರಸ್ತೆಯಲ್ಲಿ ತ್ಯಾಜ್ಯ ಡಂಪಿಂಗ್ ನಾಗರಿಕರಿಗೆ ಕಿರಿಕಿರಿ
ಮಹಾನಗರ ಪಾಲಿಕೆ ವತಿಯಿಂದ ನಗರದಲ್ಲಿ ಚಿಕ್ಕ ವಾಹನಗಳ ಮೂಲಕ ಸಂಗ್ರಹಿಸುವ ತಾಜ್ಯವನ್ನು ದೊಡ್ಡ ವಾಹನಗಳ ಮೂಲಕ ಸಾಗಿಸಲು ಪಿ.ಬಿ. ರಸ್ತೆಯಲ್ಲಿ ಡಂಪಿಂಗ್ ಮಾಡಲಾಗುತ್ತದೆ.

ಕೂಡ್ಲಿಗಿಯಲ್ಲಿ ಅರ್ಥಪೂರ್ಣ ಗುರುವಂದನಾ ಕಾರ್ಯಕ್ರಮ
ಕೂಡ್ಲಿಗಿ : ಇಲ್ಲಿನ ಶ್ರೀ ರೇಣುಕ ಪ್ರೌಢಶಾಲೆಯ 2002ನೇ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಶಾಲೆಗೆ ಗ್ರೀನ್ ಬೋರ್ಡ್ಗಳನ್ನು ವಿತರಿಸಿ ಸಸಿ ನೆಡುವುದರ ಆಚರಿಸಲಾಯಿತು.