ಚಿತ್ರದಲ್ಲಿ ಸುದ್ದಿ

Home ಚಿತ್ರದಲ್ಲಿ ಸುದ್ದಿ
ಕ್ಷೌರಿಕರು ಪರಿಹಾರ ಧನ ಪಡೆಯಲು ನಿಬಂಧನೆ ಸಡಿಲಿಕೆಗೆ ಮನವಿ

ಕ್ಷೌರಿಕರು ಪರಿಹಾರ ಧನ ಪಡೆಯಲು ನಿಬಂಧನೆ ಸಡಿಲಿಕೆಗೆ ಮನವಿ

ಕೋವಿಡ್-19 ಮಹಾಮಾರಿಯಿಂದ ಸಂಕಷ್ಟಕ್ಕೆ ಒಳಗಾದ ಕ್ಷೌರಿಕರಿಗೆ ಸರ್ಕಾರದ 5,000 ರೂ. ಪರಿಹಾರ ಪಡೆಯಲು ನೀತಿ, ನಿಬಂಧನೆಗಳಲ್ಲಿ ಪರವಾನಿಗಿ ಕಡ್ಡಾಯ ಮಾಡಿರುವುದನ್ನು ರದ್ದುಗೊಳಿಸಿ, ಇತರೆ ನಿಯಮಗಳನ್ನು ಸಡಿಲಿಸಿ, ಸರಳೀಕರಿಸುವಂತೆ ಒತ್ತಾಯಿಸಲಾಯಿತು.

ಸೇನೆಯಿಂದ ನಿವೃತ್ತಿ : ಪ್ರಭು  ಹನುಮಂತಪ್ಪ ಕರಡೆಪ್ಪನವರ್‌ಗೆ ಸನ್ಮಾನ

ಸೇನೆಯಿಂದ ನಿವೃತ್ತಿ : ಪ್ರಭು ಹನುಮಂತಪ್ಪ ಕರಡೆಪ್ಪನವರ್‌ಗೆ ಸನ್ಮಾನ

ಕೋಡಿಯಾಲ ಹೊಸಪೇಟೆ ಗ್ರಾಮದ ಪ್ರಭು ಹನುಮಂತಪ್ಪ ಕರಡೆಪ್ಪನವರ್ ದೇಶದ ಸೇನೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಗ್ರಾಮಕ್ಕೆ ಆಗಮಿಸಿದ್ದು, ಶಾಸಕ ಅರುಣ್‌ಕುಮಾರ್ ಪೂಜಾರ್ ಸ್ವಾಗತಿದರು.

ವಿಠಲಪುರದ ರುದ್ರಪ್ಪಗೆ ಬಿದರಿ ಶ್ರದ್ಧಾಂಜಲಿ

ವಿಠಲಪುರದ ರುದ್ರಪ್ಪಗೆ ಬಿದರಿ ಶ್ರದ್ಧಾಂಜಲಿ

ಇತ್ತೀಚೆಗೆ ನಿಧನರಾದ ಎಪಿಎಂಸಿ ವರ್ತಕ ವಿಠಲಾಪುರದ ರುದ್ರಪ್ಪ ಅವರ ಕೈಲಾಸ ಶಿವಗಣಾರಾಧನೆ ಕಾರ್ಯಕ್ರಮದಲ್ಲಿ ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಅವರು ಪಾಲ್ಗೊಂಡು ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸರ್ವ ಸನ್ನದ್ಧ

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸರ್ವ ಸನ್ನದ್ಧ

ಎಲೆಬೇತೂರು ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆಯಲ್ಲಿ ನಾಳೆ ಗುರುವಾರದಿಂದ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಈ ಪ್ರೌಢಶಾಲೆಯಲ್ಲಿ 223 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ

ಜಿಲ್ಲಾದ್ಯಂತ ನಾಡಿದ್ದು ದಿನಾಂಕ 25 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷಾ ಕೇಂದ್ರಗಳಲ್ಲಿನ ಕೊಠಡಿಗಳಿಗೆ ಮಹಾನಗರ ಪಾಲಿಕೆ ವತಿಯಿಂದ ಔಷಧಿ ಸಿಂಪಡಣೆ ಮಾಡಲಾಯಿತು.

ಪಾದಚಾರಿ ವ್ಯಾಪಾರಿಗಳಿಗೆ ಕರವೇ ಆಹಾರದ ಕಿಟ್ ವಿತರಣೆ

ಪಾದಚಾರಿ ವ್ಯಾಪಾರಿಗಳಿಗೆ ಕರವೇ ಆಹಾರದ ಕಿಟ್ ವಿತರಣೆ

ನಗರ ಪಾಲಿಕೆಯ ನಾಮ ನಿರ್ದೇಶಕ ಸದಸ್ಯರಾದ ಕು. ಜಯಮ್ಮ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ಸಂಕಷ್ಟದಲ್ಲಿರುವ ಪಾದಚಾರಿ ವ್ಯಾಪಾರಿಗಳಿಗೆ ಆಹಾರದ ಕಿಟ್ ವಿತರಣೆ ಮಾಡಿದರು. 

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ

ಮಲೇಬೆನ್ನೂರು ಪಟ್ಟಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರವಾಗಿರುವ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಈಗಾಗಲೇ ಸ್ಯಾನಿಟೈಸ್‌ ಮಾಡಲಾಗಿದ್ದು, ಬುಧವಾರ ಪೂರ್ವ ತಯಾರಿ ನಡೆಯಲಿದೆ.

ಪೌರ ಕಾರ್ಮಿಕರಿಗೆ ಕೊರೊನಾ ಟೆಸ್ಟ್

ಪೌರ ಕಾರ್ಮಿಕರಿಗೆ ಕೊರೊನಾ ಟೆಸ್ಟ್

ರಾಜ್ಯ ಸರ್ಕಾರದ ಸೂಚನೆಯಂತೆ ಪಾಲಿಕೆಯ ಪೌರ ಕಾರ್ಮಿಕರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ನಗರ ಪಾಲಿಕೆಯ ಆವರಣದಲ್ಲಿ ಮಂಗಳವಾರದಂದು 214 ಪೌರ ಕಾರ್ಮಿಕರ ಗಂಟಲು ದ್ರವದ ಮಾದರಿಯನ್ನು ಪಡೆಯಲಾಗಿದೆ.

ನಿಗಮಗಳ ನೇಮಕಾತಿಯಲ್ಲಿ  ಉಪ್ಪಾರ ಸಮಾಜಕ್ಕೆ ಆದ್ಯತೆ ನೀಡಿ

ನಿಗಮಗಳ ನೇಮಕಾತಿಯಲ್ಲಿ ಉಪ್ಪಾರ ಸಮಾಜಕ್ಕೆ ಆದ್ಯತೆ ನೀಡಿ

ವಿಧಾನ ಪರಿಷತ್ ಸದಸ್ಯರ ಆಯ್ಕೆ ಹಾಗೂ ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಉಪ್ಪಾರ ಸಮಾಜಕ್ಕೆ ಆದ್ಯತೆ ನೀಡುವಂತೆ ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ವತಿಯಿಂದ ಮನವಿ ಸಲ್ಲಿಸಲಾಯಿತು.

ಪ್ಯಾನ್ ಮಾದರಿ ಹೊಸ ಗುರುತಿನ ಚೀಟಿ

ಪ್ಯಾನ್ ಮಾದರಿ ಹೊಸ ಗುರುತಿನ ಚೀಟಿ

ಹೊಸ ವಿನ್ಯಾಸದ ಮತದಾರರ ಗುರುತಿನ ಚೀಟಿಯನ್ನು ಗುಂಡಾಲ್ ಬ್ಯುಸಿನೆಸ್ ಸಲ್ಯೂಷನ್ಸ್‌ನ ಮಂಜುನಾಥ ಗುಂಡಾಲ್ ಅವರು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಎಸ್ಪಿ ಹನುಮಂತರಾಯ ಅವರಿಗೆ ಸಾಂಕೇತಿಕವಾಗಿ ನೀಡಿದ್ದಾರೆ.

ಡಾ. ಶಶಿಕುಮಾರ್ ಕುಟುಂಬದಿಂದ ಯೋಗ

ಡಾ. ಶಶಿಕುಮಾರ್ ಕುಟುಂಬದಿಂದ ಯೋಗ

ದೊಡ್ಡಬಾತಿಯ ತಪೋವನದ ಛೇರ್ಮನ್ ಡಾ. ಶಶಿಕುಮಾರ್ ಮೆಹರ್ವಾಡೆ ಅವರು ಪತ್ನಿ ಶ್ರೀಮತಿ ಜಯಲಕ್ಷ್ಮಿ, ಪುತ್ರರಾದ ಅಭಿಷೇಕ್, ಅಮಿತ್, ಮಗಳು ಅಕ್ಷತಾ ಕುಟುಂಬದೊಂದಿಗೆ ಯೋಗಾಭ್ಯಾಸ ಮಾಡಿದರು.