ನಗರದ ಎಂ.ಸಿ.ಸಿ. `ಬಿ' ಬ್ಲಾಕ್ 38ನೇ ವಾರ್ಡ್ನ ಬಾಯ್ಸ್ ಹಾಸ್ಟೆಲ್ ರಸ್ತೆಯಲ್ಲಿ ಯು.ಜಿ.ಡಿ. ಕಾಮಗಾರಿಗೆ ಮಹಾನಗರ ಪಾಲಿಕೆ ಸದಸ್ಯ ಜಿ.ಎಸ್. ಮಂಜುನಾಥ ಗಡಿಗುಡಾಳ್ ಚಾಲನೆ ನೀಡಿದರು.
ಚಿತ್ರದಲ್ಲಿ ಸುದ್ದಿ

ಕೊರೊನಾ ಲಸಿಕೆ ಪಡೆದ ಎ.ಹೆಚ್. ಶಿವಯೋಗಿಸ್ವಾಮಿ
ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ|| ಎ.ಹೆಚ್. ಶಿವಯೋಗಿಸ್ವಾಮಿ ಅವರು ನಗರದ ಮಹಿಳೆಯರ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು `ಕೋವಿಶೀಲ್ಡ್' ಪಡೆದರು.

ಕೊರೊನಾ ಲಸಿಕೆ ಪಡೆದ ಮುರುಘಾ ಶರಣರು
ಚಿತ್ರದುರ್ಗ ನಗರದ ಬಸವೇಶ್ವರ ಆಸ್ಪತ್ರೆ ಯಲ್ಲಿ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಕೊರೊನಾ ಲಸಿಕೆ ಪಡೆದರು.

ದೇವರಬೆಳಕೆರೆ : ಶ್ರೀ ಮೈಲಾರಲಿಂಗೇಶ್ವರ ರಥೋತ್ಸವ
ಮಲೇಬೆನ್ನೂರು : ದೇವರಬೆಳಕೆರೆ ಗ್ರಾಮದ ಆರಾಧ್ಯ ದೈವ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ರಥೋತ್ಸವವು ಇಂದು ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

ಬೇವಿನಹಳ್ಳಿ ದುರುಗಮ್ಮ ರಥೋತ್ಸವ
ಕೂಡ್ಲಿಗಿ : ಚಿಕ್ಕಕೆರೆಯಾಗಳಹಳ್ಳಿ ಸಮೀಪ ಇರುವ ಶ್ರೀ ಬೇವಿನಹಳ್ಳಿ ದುರುಗಮ್ಮ ದೇವಿಯ ರಥೋತ್ಸವ ಇಂದು ಸಂಜೆ ನೆರವೇರಿತು.

ಹಿರೇಕೆರೂರಿನಲ್ಲಿ ಹಿಮೋಫಿಲಿಯಾ ಜಾಗೃತಿ ಜಾಥಾ
ವಿಶ್ವ ವಿರಳ ರೋಗಿಗಳ ದಿನಾಚರಣೆ ಅಂಗವಾಗಿ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ದಾವಣಗೆರೆ ಹಾಗೂ ಒಆರ್ಡಿಐ ಸಹಭಾಗಿತ್ವ ದಲ್ಲಿ ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದಲ್ಲಿ ರೇಸ್ ಫಾರ್ ಸೆವೆನ್ ಜಾಥಾದಲ್ಲಿ ಸ್ವಯಂ ಪ್ರೇರಿತರಾಗಿ ಯುವಕರು ಭಾಗವಹಿಸಿ, ಜಾಗೃತಿ ಮೂಡಿಸಿದರು.

ಅಭಿವೃದ್ಧಿ ನೆಪದಲ್ಲಿ ರಸ್ತೆಗಳಿಗೆ ಹಾನಿ
ಹೊನ್ನಾಳಿ : ಪ.ಪಂ. ವ್ಯಾಪ್ತಿಯ ಜಾಗದಲ್ಲಿ ಅಕ್ರಮ ಕಟ್ಟಡ ಹಾಗೂ ಯುಜಿಡಿ ಮತ್ತು ಕುಡಿಯುವ ನೀರಿನ ಪೈಪ್ಲೈನ್ ವ್ಯವಸ್ಥೆ ಕಾಮಗಾರಿ ನೆಪದಲ್ಲಿ ಸಿಸಿ ರಸ್ತೆ ಸಂಪೂರ್ಣ ಒಡೆದು ಹಾಳು ಮಾಡುತ್ತಿದ್ದು, ಸಾರ್ವಜನಿಕರ ಸಂಚಾರಕ್ಕೆ ಅನಾನುಕೂಲವಾಗುತ್ತಿರುವುದನ್ನು ಖಂಡಿಸಿಸಲಾಯಿತು.

ವಿಜ್ಞಾನವು ಮಾನವನ ಆಶೋತ್ತರ ಈಡೇರಿಸುವ ದಿಕ್ಕಿನಲ್ಲಿ ಸಾಗಿದೆ
ವಿಜ್ಞಾನವು ಮಾನವನ ಆಶೋತ್ತರಗಳನ್ನು ಈಡೇರಿಸುವ ದಿಕ್ಕಿನಲ್ಲಿ ಸಾಗಿದೆ. ನಿತ್ಯ ಜೀವನದಲ್ಲಿ ವಿಜ್ಞಾನದ ಮಹತ್ವ ಹೆಚ್ಚಾಗಿದೆ ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ ಹೇಳಿದ್ದಾರೆ.

ನಂದಿಗುಡಿ ಶ್ರೀಗಳ ಆಶೀರ್ವಾದ ಪಡೆದ ನೊಳಂಬ ಸಂಘದ ಡಾ. ಗಂಗಪ್ಪ, ಈಶ್ವರಪ್ಪ
ಮಲೇಬೆನ್ನೂರು : ಮಾಜಿ ಶಾಸಕ ಡಾ. ಡಿ.ಬಿ. ಗಂಗಪ್ಪ ಹಾಗೂ ನಿವೃತ್ತ ಇಂಜಿನಿಯರ್ ಸಿ.ಬಿ. ಈಶ್ವರಪ್ಪ ಅವರು ನಂದಿಗುಡಿ ಬೃಹನ್ಮಠಕ್ಕೆ ತೆರಳಿ, ಶ್ರೀ ಸಿದ್ದರಾಮೇಶ್ವರ ಸ್ವಾಮಿಗಳ ಆಶೀರ್ವಾದ ಪಡೆದರು.

ಭಾರತೀಯ ವೈದ್ಯಕೀಯ ಸಂಘದ ಸಭೆ
ಹರಿಹರ ನಗರದ ಶ್ರೇಯಾ ಆಸ್ಪತ್ರೆಯಲ್ಲಿ ಭಾನುವಾರ ಭಾರತೀಯ ವೈದ್ಯಕೀಯ ಸಂಘದ ಸಭೆ ಏರ್ಪಡಿಸಲಾಗಿತ್ತು.

ಜಿ.ಬೇವಿನಹಳ್ಳಿ: ಕ್ರಿಕೆಟ್ ಟೂರ್ನಿಗೆ ಚಾಲನೆ
ಜಿ. ಬೇವಿನಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯ ಕ್ರಿಕೆಟರ್ ವತಿಯಿಂದ ಪ್ರಪ್ರಥಮ ಬಾರಿಗೆ ಹಮ್ಮಿಕೊಂಡಿದ್ದ ಗ್ರಾಮೀಣ ಮಟ್ಟದ ಎರಡು ದಿನಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು.

ಹರಪನಹಳ್ಳಿ : ಬಸ್ ಪಾಸ್ ಅವಧಿ ಮುಂದೂಡಿಕೆಗೆ ವಿಕಲಚೇತನರ ಮನವಿ
ಹರಪನಹಳ್ಳಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ವಿಕಲಚೇತನರಿಗೆ ನೀಡುವ ರಿಯಾಯ್ತಿ ದರದ ಬಸ್ಪಾಸ್ ಅವಧಿಯನ್ನು ಮುಂದೂಡುವಂತೆ ಘಟಕಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.