October 15, 2019

ಚಿಗಟೇರಿಯಲ್ಲಿ ದೇವಾಲಯಕ್ಕೆ ಕಳಸಾರೋಹಣ, ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆ

ಐತಿಹಾಸಿಕ ಚಿಗಟೇರಿ ಗ್ರಾಮದ ನಾರದಮುನಿ ದೇವಾಲಯ ಸಂಕೀರ್ಣದಲ್ಲಿ  ನೂತನವಾಗಿ ನಿರ್ಮಿಸಿರುವ ಸಾವಮ್ಮನ ದೇವಾಲಯದ ಕಳಸಾರೋಹಣ, ಸಾವಮ್ಮ ದೇವಿ ಮತ್ತು ನಂದಿ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆಯನ್ನು ಸಂಭ್ರಮದಿಂದ ಇಂದು ನೆರವೇರಿಸಲಾಯಿತು.

ಶ್ರೀ ನಾರದಮುನಿ ದೇವಸ್ಥಾನ ಸೇವಾ ಟ್ರಸ್ಟ್‍ನ ಅಧ್ಯಕ್ಷ ಹಾಗೂ ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ಅವರು ಮಂಗಳ ಕಾರ್ಯಗಳೊಂದಿಗೆ ಪ್ರಾಣ ಪ್ರತಿಷ್ಠಾಪನೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ   ರಾಜಣ್ಣ, ಭಕ್ತರು ನೀಡಿದ ಸುಮಾರು 65 ಲಕ್ಷ ರೂಪಾಯಿಗಳ  ಭಕ್ತಿ ಕಾಣಿಕೆಯಿಂದ ದೇವಾಲಯವನ್ನು ನಿರ್ಮಿಸಲಾಗಿದೆ. 14 ಲಕ್ಷ ರೂಪಾಯಿಗಳ ವೆಚ್ಚದ ನಂದಿ ಶಿಲಾವಿಗ್ರಹವನ್ನು ಕೊಟ್ಟೂರು ತಾಲ್ಲೂಕಿನ ಅಂಬಳಿ ಗ್ರಾಮದ ಭಕ್ತರು ದೇವಾಲಯಕ್ಕೆ ಸಮರ್ಪಿಸಿದ್ದಾರೆ. ಶಿಥಿಲವಾಗಿದ್ದ ಓಕಳಿ ಹೊಂಡವನ್ನೂ ಸಹ ಕಟ್ಟಲಾಗಿದೆ  ಎಂದು ತಿಳಿಸಿದರು. 

ಟ್ರಸ್ಟಿನ ಸದಸ್ಯರುಗಳಾದ ಶಾಮನೂರು ಬಸಣ್ಣ, ವಡ್ಡಿನಹಳ್ಳಿ ಷಡಕಣ್ಣ, ಬೇತೂರು ಕರಿಬಸಪ್ಪ, ಜಾತಪ್ಪ, ಈಶ್ವರಪ್ಪ, ಹುಲ್ಲೇಹಾಳ್, ಆವರಗೆರೆ, ಕಲಪನಹಳ್ಳಿ ಬಸವಲಿಂಗಪ್ಪ, ನಾಗರಾಜ್ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು. 

ದೇವಾಲಯದ ವಾಸ್ತುಶಿಲ್ಪಿ ಇಂಜನಿಯರ್ ಜಿ.ಬಿ. ಸುರೇಶ್ ಹಾಗೂ ವಿಗ್ರಹ ಶಿಲ್ಪಿಗಳಾದ ಶಂಕರಾಚಾರ್ ಮುಂತಾದವರನ್ನು ಸನ್ಮಾನಿಸಲಾಯಿತು.  ನಾಡಿನ ವಿವಿಧೆಡೆಗಳಿಂದ ಆಗ
ಮಿಸಿದ್ದ ಭಕ್ತರಿಗೆ ದಾಸೋಹ ಏರ್ಪಡಿಸಲಾಗಿತ್ತು.

Please follow and like us: