November 22, 2019

ಕೆಲ ಹನಿ ಮಳೆ, ಒಂದಿಷ್ಟು ತಂಪು

ನಗರದಲ್ಲಿ ಭಾನುವಾರ ಸುರಿದ ಒಂದಿಷ್ಟು ಮಳೆ, ಇದು ಮಳೆಗಾಲ ಎಂಬುದನ್ನು `ನೆನಪು’ ಮಾಡಿಕೊಟ್ಟಿತ್ತು. ಮಳೆಗಾಲ ಆರಂಭವಾಗಿ ನಾಲ್ಕು ವಾರಗಳಾಗುತ್ತಾ ಬಂದಿದ್ದರೂ ನಗರದಲ್ಲಿ ಗಟ್ಟಿ ಮಳೆಯಾಗಿಲ್ಲ. ನೆಪಕ್ಕೊಂದಿಷ್ಟು ಹನಿಸಿದ ಮಳೆ ಹಾಗೂ ಒಂದಿಷ್ಟು ತಂಪಿಗೆ ಜನರೀಗ ತೃಪ್ತಿಪಡಬೇಕಿದೆ.