November 22, 2019

ಕಲೆ ದೇಶದ ಆಸ್ತಿಯೂ ಹೌದು: ಡಾ. ವಿ.ಜಿ. ಅಂದಾನಿ

ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಚಿತ್ರೋತ್ಸವ-2019ಕ್ಕೆ ಚಾಲನೆ

ದಾವಣಗೆರೆ : ಚಿತ್ರಕಲೆ, ದೃಶ್ಯಕಲೆ, ಶಿಲ್ಪಕಲೆಗಳು ಪ್ರದರ್ಶನದ ಜೊತೆಗೆ ದೇಶದ ಆಸ್ತಿಯೂ ಹೌದು ಎಂದು ವರ್ಣ ಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತರೂ, ಖ್ಯಾತ ಕಲಾವಿದರೂ, ಕರ್ನಾಟಕ  ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷರೂ ಆದ ಡಾ.ವಿ.ಜಿ. ಅಂದಾನಿ ಪ್ರತಿಪಾದಿಸಿದರು.

ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಇದೇ ಇಂದಿನಿಂದ 21ರವರೆಗೆ  ಆಯೋಜಿಸಲಾಗಿದ್ದ ಚಿತ್ರೋತ್ಸವ-2019 ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ತಾಜ್​ಮಹಲ್, ಅಜಂತಾ, ಎಲ್ಲೋರಾ ಸೇರಿದಂತೆ ನಾಡಿನ ಶಿಲ್ಪಕಲೆಗಳು ದೇಶದ ಅಭಿವೃದ್ಧಿಯಲ್ಲೂ ಮಹತ್ವದ ಪಾತ್ರ ವಹಿಸುತ್ತಿವೆ. ವರ್ಷಕ್ಕೆ ಸಾವಿರಾರು ಜನ ತಾಜ್​ಮಹಲ್ ವೀಕ್ಷಿಸುತ್ತಾರೆ. ಇದರಿಂದ ದೇಶಕ್ಕೆ ಪ್ರತಿ ವರ್ಷ​ಅರವತ್ತು ನೂರು ಕೋಟಿ ಡಾಲರ್ ಆದಾಯ ಬರುತ್ತದೆ ಇಂತಹ ಕಲೆಗಳು ದೇಶದ ಆಸ್ತಿಗಳು ಎಂದು ಹೇಳಿದರು.

ಫೈನ್​ ಆರ್ಟ್ ಕಾಲೇಜಿನಲ್ಲಿ  ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ: ಪ್ರೊ.ಹಲಸೆ
ದಾವಣಗೆರೆ, ಮೇ 17-ದೃಶ್ಯಕಲಾ ಮಹಾವಿದ್ಯಾಲಯಕ್ಕೆ ಬೇಕಾದ ಎಲ್ಲಾ ಸಹಕಾರವನ್ನೂ ನೀಡಲು ಸಿದ್ದರಿದ್ದೇವೆ. ಆದರೆ ಯಾವ ರೀತಿಯ ಸಹಕಾರ ಬೇಕೆಂಬುದನ್ನು ಇಲ್ಲಿನ ಪ್ರಾಂಶುಪಾಲರು, ಸಿಬ್ಬಂದಿಗಳು ಕೇಳಿ ಪಡೆಯಬೇಕು ಎಂದು ದಾವಣಗೆರೆ ವಿವಿ ಕುಲಪತಿ ಪ್ರೊ.ಎಸ್.ವಿ. ಹಲಸೆ ಹೇಳಿದರು.
ಚಿತ್ರೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಈ ವರ್ಷ​ ಅನಿಮೇಷನ್ ಅಂಡ್ ಮಲ್ಟಿಮೀಡಿಯಾ ಕೋರ್ಸ್ ಆರಂಭಿಸಲಾಗಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಸಹ ಪ್ರವೇಶಕ್ಕೆ ಅವಕಾಶವಿದೆ. ಮುಂದೆ ಫೋಟೋಗ್ರಫಿ ಸೇರಿದಂತೆ ಹೊಸ ಕೋರ್ಸ್​ಗಳನ್ನು ಆರಂಭಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು. ಕಾಲೇಜು ಆವರಣದಲ್ಲಿ ಇಲ್ಲಿನ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣವಾಗಿದೆ. ವಿದ್ಯಾರ್ಥಿನಿಯರ ಹಾಸ್ಟೆಲ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅನುದಾನಕ್ಕೆ ಯಾವುದೇ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬರುವ ಜೂನ್ ಅಥವಾ ಡಿಸೆಂಬರ್ ಒಳಗೆ ಸಂಜೆ 4 ರಿಂದ  8 ಗಂಟೆ ವರೆಗೆ ಯುಪಿಎಸ್​ಸಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ತರಗತಿಗಳನ್ನು ನಡೆಸುವ ಚಿಂತನೆ ಇದೆ. ಇದರಿಂದ ಅನೇಕರಿಗೆ ಉಪಯೋಗವಾಗಲಿದ್ದು, ಇಲ್ಲಿನ ಅಧ್ಯಾಪಕರ ಸಹಕಾರ ಬೇಕು ಎಂದರು.
ಕಾಲೇಜಿಗೆ 17ಜನ ಸಿಬ್ಬಂದಿಗಳ ಕೊರೆತೆ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಈ ವರ್ಷದೊಳಗೆ ಖಾಲಿ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ದಾವಣಗೆರೆ ವಿವಿಯಲ್ಲೂ 125 ಅಧ್ಯಾಪಕರ ಹುದ್ದೆ ಭರ್ತಿಗೆ ಸರ್ಕಾರ ಅನುಮತಿ ನೀಡಿದ್ದು, ಪ್ರಕ್ರಿಯೆ ಚಾಲನೆಯಲ್ಲಿದೆ ಎಂದರು.

800 ವರ್ಷಗಳ ಹಿಂದಿನ ಅಜಂತಾ-ಎಲ್ಲೋರಾ ಗಳಲ್ಲಿರುವ ಶಿಲ್ಪ ಕಲೆಗಳು  ಅಂದು ವೈಜ್ಞಾನಿಕವಾಗಿ ಜನತೆ ಎಷ್ಟು ಮುಂದುವರೆದಿದ್ದರು ಎಂಬುದನ್ನು ತಿಳಿಸುತ್ತವೆ. ಕಲೆಗಳು ಅಂದಿನ ಕಾಲದ ಕಲ್ಪನೆ ತಿಳಿಸುವಲ್ಲಿ ಮಹತ್ವದ ಪಾತ್ರವನ್ನೂ ವಹಿಸುತ್ತಿವೆ ಎಂದರು. ಆದ್ದರಿಂದ ಪ್ರತಿ ತಿಂಗಳೂ ಚಿತ್ರಕಲಾ ಪ್ರದರ್ಶನಗಳು  ನಡೆಯುತ್ತಿರಬೇಕು ಎಂದು ಆಶಿಸಿದ ಅವರು, ಚಿತ್ರ ಕಲಾ ಪ್ರದರ್ಶನದಲ್ಲಿ 20 ವಿದ್ಯಾರ್ಥಿಗಳ ಚಿತ್ರ ಪ್ರದರ್ಶಿಸಬಹುದು. ಆದರೆ ಅದರ ಹಿಂದೆ 20 ಜನರ ಮೆದುಳು ಕೆಲಸ ಮಾಡಲು ಅವಕಾಶ ನೀಡಿದಂತೆ. ಕಲಾವಿದರ ಜ್ಞಾನ ಅಭಿವೃದ್ಧಿಗೆ ಫೋಟೋಗ್ರಫಿ ಸಹಕಾರಿ ಎಂದು ಅಭಿಪ್ರಾಯಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಾವಣಗೆರೆ ವಿವಿ ಕುಲಪತಿ ಪ್ರೊ.ಎಸ್.ವಿ. ಹಲಸೆ, 1964ರಲ್ಲಿ ಆರಂಭವಾದ ದೃಶ್ಯಕಲಾ ಮಹಾವಿದ್ಯಾಲಯ ರಾಜ್ಯದಲ್ಲಿಯೇ ಹಳೆಯ ಹಾಗು ಉತ್ತಮ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದಾವಣಗೆರೆ ವಿವಿ ವತಿಯಿಂದ  ಕಾಲೇಜಿನ ಅಭಿೃವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ಗಮನ ಸೆಳೆದ ಚಿತ್ರೋತ್ಸವ ಪ್ರದರ್ಶನ
ದೃಶ್ಯಕಲಾ ಮಹಾವಿದ್ಯಾಲಯದ ಆರ್ಟ್ ಗ್ಯಾಲರಿಯಲ್ಲಿ ಆರಂಭವಾದ ಚಿತ್ರೋತ್ಸವ ಪ್ರದರ್ಶನದಲ್ಲಿ ವಿವಿಧ ಕಲಾಕೃತಿಗಳು ಗಮನ ಸೆಳೆದವು.
ನೈಜ ಕಲಾಕೃತಿ, ಕ್ರಿಯೇಟಿವಿ ಆರ್ಟ್, ಕ್ರಿಯೇಟಿವ್ ಫೋಟೋಗ್ರಫಿ, ನೇಚರ ಆರ್ಟ್ ಸೇರಿದಂತೆ ವಿದ್ಯಾರ್ಥಿಗಳು ರಚಿಸಿದ್ದ 60ಕ್ಕೂ ಹೆಚ್ಚು ಕಲಾಕೃತಿಗಳು ಪ್ರದರ್ಶನಕ್ಕಿದ್ದವು.
ತಾಯಿಯೊಂದಿಗೆ ಲವಕುಶರು, ಯಕ್ಷಗಾನ ವೇಷಧಾರಿ, ಮಹಾಭಾರತದ ಪ್ರಸಂಗಗಳು, ತಾಯಿ ಮಗುವಿನ ಮಮತೆ, ಪರಿಸರದ ಕಾಳಜಿ, ಸ್ತ್ರೀ ರಕ್ಷಣೆ ಕುರಿತ ಕಲಾಕೃತಿಗಳು ಗಮನ ಸೆಳೆದವು.
ಮೂರ್ತಿ​ ಶಿಲ್ಪ ವಿಭಾಗದಲ್ಲಿದ್ದ ನೇಗಿಲು ಹಾಗೂ ಚಿಕ್ರದ  ಕಲಾಕೃತಿಯು ಆಧುನೀಕರಣದ ಚಕ್ರಕ್ಕೆ ಸಿಲುಕಿ ಮಾನವ ಅನುಭವಿಸುವ ಯಾತನೆಯನ್ನು ವಿವರಿಸುತ್ತಿದ್ದರೆ, ತಾಜ್ಯವಸ್ತುಗಳಿಂದ ತಯಾರಿಸಿ, ಪ್ರತಿ ಹನಿ ನೀರಿಗೂ ಮಹತ್ವ ಇದೆ ಎಂದು ಹೇಳುವ ಕಲಾಕೃತಿಗಳು ಮೆಚ್ಚುಗೆಗೆ ಪಾತ್ರವಾಗಿದ್ದವು.

ಇಂಜಿನಿಯರಿಂಗ್, ಮೆಡಿಕಲ್ ಓದಿಗಿರುವಷ್ಟೇ ಪ್ರಾಮುಖ್ಯತೆ ದೃಶ್ಯಕಲೆಗೂ ಇದೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತೆಗೆಯಲು ಇಲ್ಲಿ ಸಾಧ್ಯವಿದೆ. ಕಾಲೇಜಿಗೆ ಸೇರುವ ಮುನ್ನವೇ ಗುರಿ ಇಟ್ಟುಕೊಂಡು ಓದಿದಲ್ಲಿ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೂ ಹೆಸರು ಗಳಿಸಲು ಸಾಧ್ಯವಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಡಾ.ವಿಜಿ. ಅಂದಾನಿಯವರನ್ನು ಸನ್ಮಾನಿಸಲಾಯಿತು. ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರವೀಂದ್ರ ಎಸ್.ಕಮ್ಮಾರ್ ಅಧ್ಯಕ್ಷತೆ ವಹಿಸಿದ್ದರು.  ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಸ್.ಎನ್. ಪ್ರವೀಣ್  ಉಪಸ್ಥಿತರಿದ್ದರು. ಬೋಧನಾ ಸಹಾಯಕ ದತ್ತಾತ್ರೇಯ ಎನ್.ಭಟ್ ನಿರೂಪಿಸಿದರು. ಕು. ಹೇಮಲತಾ ಮತ್ತು ಪಲ್ಲವಿ ಪ್ರಾರ್ಥಿಸಿದರು. ಪ್ರಾಧ್ಯಾಪಕ  ಡಾ.ಸತೀಶ್ ಕುಮಾರ್ ವಲ್ಲೇಪುರೆ ಅತಿಥಿಗಳನ್ನು ಸ್ವಾಗತಿಸಿದರು. ಡಾ.ಜೈರಾಜ್ ಚಿಕ್ಕಪಾಟೀಲ್ ವಂದಿಸಿದರು.