ಓದುಗರ ಪತ್ರ

Home ಓದುಗರ ಪತ್ರ

ಹಣ್ಣು ಮಾಗುವಿಕೆಗೆ ರಾಸಾಯನಿಕ ಪೌಡರ್‌ ಬಳಕೆ

ಹಣ್ಣು ಮಾರುವವರು ರಾವಸಾಯನಿಕ ಪೌಡರ್ ಬಳಸಿ ಬಾಳೆಹಣ್ಣು, ಮಾವಿನ ಹಣ್ಣು, ಸಪೋಟಾ ಹಣ್ಣು ಸೇರಿದಂತೆ ಇತರೆ ಹಣ್ಣುಗಳನ್ನು ಕೃತಕವಾಗಿ ಮಾಗಿಸುತ್ತಿದ್ದು, ಜನರು ಈ ವಿಷಮಯ ಹಣ್ಣನ್ನು ಸೇವಿಸುತ್ತಿದ್ದಾರೆ.

ಕೊರೊನಾ ವಾರಿಯರ್ಸ್‌ಗಳ ಕಾಳಜಿಗೆ ಹ್ಯಾಟ್ಸಾಪ್

ಎಂಸಿಸಿ ಬಿ ಬ್ಲಾಕ್‌ನಲ್ಲಿ ನಾವು ವಾಸವಾಗಿದ್ದು, ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿ ವರ್ಗದವರು ಆಗಮಿಸಿ ರಸ್ತೆಯ ಎಲ್ಲರನ್ನೂ ವಿಚಾರಿಸಿ, ಸೋಂಕಿತ ವ್ಯಕ್ತಿಯನ್ನು ಆಂಬ್ಯುಲೆನ್ಸ್‌ನಲ್ಲಿ ಕರೆದುಕೊಂಡು ಹೋದರು.

ಇದ್ಯಾವ ನ್ಯಾಯ?

ಸರ್ಕಾರಿ ಶಾಲಾ ಶಿಕ್ಷಕರ ವೇತನದಲ್ಲಿ ಒಂದಷ್ಟು ಭಾಗ ಖಾಸಗಿ ಶಾಲಾ ಶಿಕ್ಷಕರಿಗೆ ಕೊಡುವ ಮನಸ್ಸು ಮಾಡಿ ಎಂದು ಶಿಕ್ಷಣ ಸಚಿವರು ಮಾನವೀಯ ದೃಷ್ಟಿಯಿಂದ ವಿನಂತಿ ಮಾಡಿರುವ ಸುದ್ದಿ ಹರಿದಾಡಿ ನೂರಾರು ಚರ್ಚೆಗೆ ಗ್ರಾಸವಾಗಿದೆ.

ಅಧಿಕಾರಿಗಳಿಗೆ ಇನ್ನೂ ಹೆಚ್ಚಿನ ಭದ್ರತೆ ಒದಗಿಸಿ

ವಿವಾದಿತ ಜಮೀನಿನ ಸರ್ವೆ ಕಾರ್ಯಕ್ಕೆ ಹೋಗಿದ್ದ ಬಂಗಾರಪೇಟೆ ತಾಲೂಕಿನ ತಹಶೀಲ್ದಾರ್ ಬಿ.ಕೆ. ಚಂದ್ರಮೌಳೇಶ್ವರ ಅವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವುದು ನಿಜಕ್ಕೂ ಖಂಡನೀಯ.

ಬ್ಯಾಂಕಿಂಗ್ ವಿನಾಯ್ತಿಗಳನ್ನು ಮುಂದುವರೆಸಲು ಮನವಿ

ಒಂದೆಡೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೇ ಏರುಗತಿಯಲ್ಲಿ ಸಾಗುತ್ತಿದೆ. ಇನ್ನೊಂದೆಡೆ ಜನಸಾಮಾನ್ಯರ ಬದುಕು  ಮೇಲೇಳಲಾರದಂತಹ ಸ್ಥಿತಿ ತಲುಪಿ ಪಾತಾಳಕ್ಕೆ ಕುಸಿಯುತ್ತಿದೆ. 

ಮತ್ತೊಮ್ಮೆ ಲಾಕ್‌ಡೌನ್ ಘೋಷಣೆ ಮಾಡಿ

ರಾಜ್ಯಾದ್ಯಂತ ಕೊರೊನಾ ಸೋಂಕು ಯಾವುದಕ್ಕೂ ಜಗ್ಗದೆ ಗಲ್ಲಿಗಲ್ಲಿಗಳಲ್ಲಿ ಮನೆಮನೆಗಳಲ್ಲಿ ರಣ ಭೀಕರವಾಗಿ ಶರವೇಗದಲ್ಲಿ ನುಗ್ಗುತ್ತಿದೆ. ರಾಜ್ಯದಲ್ಲಿಯೂ  ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

ಪ್ರಾಥಮಿಕ ಶಾಲೆಗಳು-ಅಂಗನವಾಡಿಗಳು ಪ್ರಾರಂಭವಾಗಲಿ

ಮನೆಗೆ ತಳಪಾಯ ಎಷ್ಟು ಮುಖ್ಯವೋ, ಪ್ರಾಥಮಿಕ ಶಿಕ್ಷಣ ಮಕ್ಕಳಿಗೆ ಅಷ್ಟೇ ಮುಖ್ಯ. ಹಾಗಾಗಿ ಸರ್ಕಾರ ತಡಮಾಡದೆ ಆಗಸ್ಟ್ 1 ರಿಂದ ಎಲ್ಲಾ ಶಾಲೆಗಳನ್ನು ಪ್ರಾರಂಭಿಸಬೇಕು.

ಆಸ್ಪತ್ರೆಯಲ್ಲಿ ಅಮಾಯಕರ ಪ್ರಾಣಗಳನ್ನು ಉಳಿಸಲಿ

ರಾಜ್ಯದಲ್ಲಿ  ಕೋವಿಡ್ ಪ್ರಕರಣಗಳು ದಿನೇ ದಿನೇ ತೀವ್ರಗತಿಯಲ್ಲಿ ಏರುತ್ತಿರುವ ಬೆನ್ನಲ್ಲೇ ಒಂದೆಡೆ ಸೋಂಕಿತರು/ಶಂಕಿತರ ಸಂಖ್ಯೆ, ಇನ್ನೊಂದೆಡೆ ಅಷ್ಟೇ ವೇಗದಲ್ಲಿ  ಸಾವಿನ ಸಂಖ್ಯೆಯೂ ಕೂಡ ಹೆಚ್ಚಾಗಿದೆ. 

ಓಡುತ್ತಿರುವ ಜಗತ್ತಿಗೆ ಸುಸ್ತಾಯಿತೇ?

90ರ ದಶಕದ ನಂತರ ಜಗತ್ತು ಬೆಳೆಯುವ ವೇಗ ಎಷ್ಟಿತ್ತೆಂದರೆ ಯಾರಿಗೂ, ಯಾವುದಕ್ಕೂ ಸಮಯವೇ ಇರಲಿಲ್ಲ. ಎಲ್ಲರೂ ಒಂದು ರೀತಿಯಲ್ಲಿ ಬ್ಯುಸಿ ಜೀವ ನಕ್ಕೆ ಹೊಂದಿಕೊಂಡು ಹೋಗಿದ್ದರು.

ರೈತರ ಮೆಕ್ಕೆಜೋಳವನ್ನು ರಾಜಕಾರಣಿಗಳೇ ಖರೀದಿಸಲಿ

ಆಯಾ ಜಿಲ್ಲೆಗಳ ಎಲ್ಲಾ ರಾಜಕೀಯ ಪಕ್ಷಗಳ ಹಾಲಿ, ಮಾಜಿ ಎಂ.ಪಿ., ಎಂ.ಎಲ್.ಎ., ಎಂ.ಎಲ್ಸಿ.ಗಳು ಒಟ್ಟಾಗಿ ತಮ್ಮ ಯೋಗ್ಯತಾನುಸಾರ ನಿಗದಿಪಡಿಸಿದ ಬೆಂಬಲ ಬೆಲೆಯಂತೆ ರೈತರಿಂದ ಮೆಕ್ಕೆಜೋಳ ಖರೀದಿಸಿ, ಸರ್ಕಾರಿ ಗೋಡೌನುಗಳಲ್ಲಿ  ಸಂಗ್ರಹಿಸಿಕೊಳ್ಳಲಿ.