July 17, 2019

ಉಕ್ಕಡಗಾತ್ರಿಯಲ್ಲಿ ಸಂಭ್ರಮದ ರಥೋತ್ಸವ

ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಮಹಾಶಿವರಾತ್ರಿ ಜಾತ್ರಾ ಮಹತ್ಸವ

ಮಲಬೆನ್ನೂರು, ಮಾ.12- ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ನಡೆಯುತ್ತಿರುವ ಪವಾಡ ಪುರುಷ ಶ್ರೀ ಗುರು ಕರಿಬಸವಶ್ವರ ಅಜ್ಜಯ್ಯನ ಮಹಾಶಿವರಾತ್ರಿ
ಜಾತ್ರಾ ಮಹತ್ಸವದ ಅಂಗವಾಗಿ ಮಂಗಳವಾರ ಬೆಳಿಗ್ಗೆ ಅಜ್ಜಯ್ಯನ ಬೆಳ್ಳಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು. 250 ಕೆ.ಜಿ. ತೂಕದ ಬೆಳ್ಳಿ ರಥದಲ್ಲಿ ಅಜ್ಜಯ್ಯನ
ಬೆಳ್ಳಿ ಮೂರ್ತಿಯನ್ನು ಇಟ್ಟು ರಥಕ್ಕೆ ನಂದಿಗುಡಿ ಬೃಹನ್ಮಠದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ
ಚಾಲನೆ ನೀಡಲಾಯಿತು. ವಿವಿಧ ಕಲಾ ಮೇಳಗಳು ರಥತ್ಸವದಲ್ಲಿ ಮತ್ತೊಮ್ಮೆ ಗಮನ ಸೆಳೆದವು. ರಾತ್ರಿ ನಡೆದ ಅಜ್ಜಯ್ಯನ ಪಾಲಿಕ ರಥೋತ್ಸವದಲ್ಲಿ  ಭಕ್ತರು
ಭಾಗವಹಿಸಿದ್ದರು. ಪಟಾಕಿಗಳ ಸಿಡಿತ ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸಿ, ಜನರ ಮನಸೂರೆಗಡವು. ಬುಧವಾರ ಬೆಳಿಗ್ಗೆ ಪೂಜೆ ನಂತರ ಅಜ್ಜಯ್ಯನ
ಫಳಾರವನ್ನು ಭಕ್ತರಿಗೆ ಹಂಚುವು ಮೂಲಕ ಜಾತ್ರೆಗೆ ತೆರೆ ಎಳೆಯಲಾಗುವುದು. ಗದ್ದುಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಸುರೇಶ್, ನಿರ್ದೇಶಕರಾದ ಜಿ.
ಸಿದ್ಧನಗೌಡ, ಕಟರ್ ಪ್ರಕಾಶ್, ಜಿಗಳಿ ಇಂದೂಧರ್, ಹೆಚ್. ವೀರನಗೌಡ, ಪಾಳ್ಯ ಬಸವರಾಜ್, ಹಸಳ್ಳಿ ಗದಿಗೆಪ್ಪ ಮತ್ತಿತರರು ಹಾಜರಿದ್ದು ಬೆಳ್ಳಿ ರಥತ್ಸವ
ನಡೆಸಿಕೊಟ್ಟರು.

Please follow and like us: