ಆಯ್ಕೆ-ನೇಮಕ

Home ಆಯ್ಕೆ-ನೇಮಕ

ಹರಪನಹಳ್ಳಿ : ಕೊರಚ ಮಹಾಸಭಾಕ್ಕೆ ರಾಮಮೂರ್ತಿ ಅಧ್ಯಕ್ಷ

ಹರಪನಹಳ್ಳಿ : ಅಖಿಲ ಕರ್ನಾಟಕ ಕೊರಚ ಮಹಾಸಭಾದ ತಾಲ್ಲೂಕು ಅಧ್ಯಕ್ಷರಾಗಿ ಕೆ.ರಾಮಮೂರ್ತಿ ಆಯ್ಕೆಯಾಗಿದ್ದಾರೆ. ಉಳಿದಂತೆ ಗೌರವ ಅಧ್ಯಕ್ಷರಾಗಿ ಎಂ.ಜೀವಪ್ಪ, ಉಪಾಧ್ಯಕ್ಷರುಗಳಾಗಿ ಹಳ್ಳಳ್ಳಿ ಹನುಮಂತಪ್ಪ, ಎಂ.ಹನುಮಂತಪ್ಪ ಆಯ್ಕೆಯಾಗಿದ್ದಾರೆ.

ವಿದ್ಯಾನಗರ ಲಯನ್ಸ್ ಕ್ಲಬ್ ಗೆ ಆಯ್ಕೆ

ಲಯನ್ಸ್ ಕ್ಲಬ್ ದಾವಣಗೆೆರೆ ವಿದ್ಯಾನಗರ ಸಂಸ್ಥೆಗೆ ನೂತನ ಸಾಲಿನ ಅಧ್ಯಕ್ಷರಾಗಿ ಡಾ. ಜಿ.ಎನ್. ಹೆಚ್. ಕುಮಾರ್, ಕಾರ್ಯದರ್ಶಿಯಾಗಿ ಸಿ.ಹೆಚ್. ದೇವರಾಜ್, ಖಜಾಂಚಿಯಾಗಿ ಎಂ.ಎಂ. ಸುದರ್ಶನ್ ಕುಮಾರ್ ಆಯ್ಕೆಯಾಗಿದ್ದಾರೆ.

ಜಿಲ್ಲಾ ಅನುಷ್ಠಾನ ಸಮಿತಿಗೆ ಆನಂದಪ್ಪ

ದಾವಣಗೆರೆ ಜಿಲ್ಲೆಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಸಮುದಾಯಗಳ ಜಿಲ್ಲಾ ಅನುಷ್ಠಾನ ಸಮಿತಿಗೆ ಆನಂದಪ್ಪ ಅವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ಸರ್ಕಾರದ ವತಿಯಿಂದ ನೇಮಕ ಮಾಡಲಾಗಿದೆ.

ಗೋರ್ ಬಂಜಾರ್ ಕ್ರಾಂತಿಯ ಜಿಲ್ಲಾ ಅಧ್ಯಕ್ಷರಾಗಿ ನಾಗರಾಜ್

ರಾಷ್ಟ್ರೀಯ ಗೋರ್ ಬಂಜಾರ್ ಕ್ರಾಂತಿ ಸಂಘಟನೆಯ ಜಿಲ್ಲಾಧ್ಯಕ್ಷರಾಗಿ ಹರಪನಹಳ್ಳಿ ತಾಲ್ಲೂಕು ಮಾಡಲ ಗೇರಿ ತಾಂಡಾದ ಎಲ್. ನಾಗರಾಜ್‌ನಾಯ್ಕ ನೇಮಕಗೊಂಡಿದ್ದಾರೆ.

ಹರಪನಹಳ್ಳಿ : ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಟಿ. ರಾಜಕುಮಾರ

ಹರಪನಹಳ್ಳಿ ತಾಲ್ಲೂಕಿನ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಹುಲಿಕಟ್ಟಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಟಿ.ರಾಜಕುಮಾರ ಆಯ್ಕೆಯಾಗಿದ್ದಾರೆ. 

ಬಿ.ಇ.ಎ. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಡಾ. ಎ.ಜೆ. ನೀತಾ

ನಗರದ ಬಾಪೂಜಿ ವಿದ್ಯಾಸಂಸ್ಥೆಯ ಬಿ.ಇ.ಎ. ಶಿಕ್ಷಣ ಮಹಾವಿದ್ಯಾ ಲಯದ (ಬಿಇಡಿ) ಪ್ರಭಾರ ಪ್ರಾಂಶುಪಾಲರನ್ನಾಗಿ ಡಾ. ಎ.ಜೆ. ನೀತಾ ಅವರನ್ನು ನೇಮಕ ಮಾಡಲಾಗಿದೆ.

ದಿಶಾ ಸಭೆಗೆ ನಾಮ ನಿರ್ದೇಶನ ಸದಸ್ಯರ ನೇಮಕ

ಜಿಲ್ಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಗೆ ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಜಿಲ್ಲೆಯ ನಾಲ್ವರನ್ನು ಅಧಿಕಾರೇತರ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.

ಲಯನ್ಸ್ ಅಧ್ಯಕ್ಷರಾಗಿ ವಿಜಯಕುಮಾರ್

ದಾವಣಗೆರೆ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಕೆ.ಎಂ. ವಿಜಯಕುಮಾರ್, ಕಾರ್ಯದರ್ಶಿಯಾಗಿ ಕೋರಿ ಶಿವಕುಮಾರ್, ಖಜಾಂಚಿಯಾಗಿ ಸಂಪತ್ ಬಿ. ಹಳ್ಳಿಕೇರಿ ಆಯ್ಕೆಯಾಗಿದ್ದಾರೆ.