November 22, 2019

ಅಶೋಕ ರಸ್ತೆ ರೈಲ್ವೆ ಕ್ರಾಸಿಂಗ್‌; ಸಮಸ್ಯೆ ಒಂದು ಪರಿಹಾರ ಮೂರು

ಶಾಶ್ವತ ಪರಿಹಾರಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ವಿಶ್ವಾಸ

ದಾವಣಗೆರೆ, ಸೆ. 10 – ಅಶೋಕ ರಸ್ತೆಯ ರೈಲ್ವೆ ಕ್ರಾಸಿಂಗ್ ಸಮಸ್ಯೆಗೆ ಕಡಿಮೆ ಖರ್ಚಿನಲ್ಲಿ ಶಾಶ್ವತ ಪರಿಹಾರಕ್ಕೆ ಎಲ್ಲ ಪ್ರಯತ್ನ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ತಿಳಿಸಿದ್ದಾರೆ.

ಅಶೋಕ ರಸ್ತೆಯಿಂದ ಬಂಬೂ ಬಜಾರ್‌ ಅಂಡರ್‌ಪಾಸ್‌ವರೆಗಿನ ಪ್ರದೇ ಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾ ಡುತ್ತಾ ಅವರು ಈ ವಿಷಯ ತಿಳಿಸಿದ್ದಾರೆ.

ರೈಲ್ವೆ ಕ್ರಾಸಿಂಗ್ ಸಮಸ್ಯೆ 30 ವರ್ಷಗಳಿಗೂ ಹೆಚ್ಚು ಕಾಲದಿಂದ ಇದೆ. ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿ ಯಲು ಎಲ್ಲಾ ರಾಜಕೀಯ ಮುಖಂಡರ ಜೊತೆ ಚರ್ಚಿಸಿ, ಒಮ್ಮತದ ತೀರ್ಮಾನ ತೆಗೆದುಕೊಂಡು ಕ್ರಮ ತೆಗೆದುಕೊಳ್ಳಲಾ ಗುವುದು. ಈ ಸಮಸ್ಯೆಗೆ ತಮ್ಮ ಅವಧಿಯಲ್ಲಿ ಪರಿಹಾರ ಸಿಗಲಿದೆ ಎಂಬ ವಿಶ್ವಾಸವಿದೆ ಎಂದವರು ಹೇಳಿದರು.

ಅಧಿಕಾರಿಗಳು ಈಗಾಗಲೇ 3 ರೀತಿಯಲ್ಲಿ ಮೇಲ್ಸೇತುವೆ ಹಾಗೂ ಕೆಳಸೇತುವೆ ನಿರ್ಮಾಣದ ಬಗ್ಗೆ ನಕ್ಷೆ ತಯಾರಿಸಿದ್ದಾರೆ. ಅವುಗಳನ್ನೂ ಸ್ಥಳ ಪರಿಶೀಲನೆಗೆ ಬಂದಿದ್ದೇನೆ. ಇವುಗಳಲ್ಲಿ ಯಾವುದು ಕಾರ್ಯ ಸಾಧುವೋ, ಕಡಿಮೆ ತೊಂದರೆಯಲ್ಲಿ ಜಾರಿ ಸಾಧ್ಯವೋ ಅದನ್ನು ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ಮುಂದುವರಿಕೆ : ಜಿಲ್ಲಾಧಿಕಾರಿ ಬೀಳಗಿ
ಅಧಿಕಾರಿಗಳು ಸಕಾರಣವಿಲ್ಲದೇ ಕಚೇರಿಗೆ ತಡವಾಗಿ ಆಗಮಿಸಿದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಎಚ್ಚರಿಸಿದ್ದಾರೆ. ಸೋಮವಾರ ತಹಶೀಲ್ದಾರ್ ಕಚೇರಿಗೆ ತೆರಳಿದ್ದ ಜಿಲ್ಲಾಧಿಕಾರಿ, ತಡವಾಗಿ ಬಂದ 28 ಅಧಿಕಾರಿಗಳಿಗೆ ನೋಟಿಸ್‌ ಕಳಿಸಲು ಆದೇಶಿಸಿದ್ದರು. ಸಕಾರಣವಿಲ್ಲದೇ ತಡವಾಗಿ ಬಂದವರ ವಿರುದ್ಧ ಇಲಾಖಾ ನಿಯಮಗಳ ಅನ್ವಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ ಅವರು, ಇನ್ನು ಮುಂದೆ ನಿರಂತರವಾಗಿ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಸಕಾಲಕ್ಕೆ ಅಧಿಕಾರಿಗಳು ಬರುತ್ತಿದ್ದಾರೆಯೇ ಎಂಬ ಬಗ್ಗೆ ನಿಗಾ ವಹಿಸುವುದಾಗಿ ತಿಳಿಸಿದರು.

ಈ ಹಿಂದೆ ರೈಲ್ವೆ ಸೇತುವೆಗೆ ಬಿಡುಗಡೆಯಾದ ಹಣ ವಾಪಸ್ ಹೋಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಸಮಸ್ಯೆಯ ಇತಿಹಾಸ ನೋಡುತ್ತಾ ನಕಾರಾತ್ಮಕ ಭಾವನೆ ಹೊಂದಬಾರದು. ಸಮಸ್ಯೆಗೆ ಪರಿಹಾರ ಸಾಧ್ಯ ಎಂಬ ಸಕಾರಾತ್ಮಕ ಭಾವನೆಯಿಂದ ಮುನ್ನಡೆಯುತ್ತೇನೆ ಎಂದು ತಿಳಿಸಿದರು.

ಗೋಡೆ ಏರಿದ ಡಿ.ಸಿ.
ರೈಲ್ವೆ ಗೇಟ್ ಸಮಸ್ಯೆ ಬಗ್ಗೆ ನೇರವಾಗಿ ತಿಳಿದುಕೊಳ್ಳಲು ಅಶೋಕ ಟಾಕೀಸ್ ಬಳಿ ಅಧಿಕಾರಿಗಳ ತಂಡದೊಂದಿಗೆ ಬಂದಿದ್ದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ರೈಲ್ವೆ ಹಳಿ ಬಳಿ ತೆರಳಲು ಕಾಂಪೌಂಡ್ ಗೋಡೆ ಏರಿದರು. ಉಪವಿಭಾಗಾಧಿಕಾರಿಗಳ ಕಚೇರಿಯಿಂದ ಗಾಂಧಿ ವೃತ್ತ, ಮಂಡಿಪೇಟೆ ಹಾಗೂ ಪುಷ್ಪಾಂಜಲಿ ಚಿತ್ರಮಂದಿರದವರೆಗೂ ಖುದ್ದು ಪರಿಶೀಲಿಸಿದರು.ಈರುಳ್ಳಿ ಮಾರ್ಕೆಟ್ ಕೆಳ ಸೇತುವೆಯ ಚರಂಡಿಯ ನೀರು ಯು.ಜಿ. ಮೂಲಕ ಹೋಗದೇ ಇರುವುದನ್ನು ಗಮನಿಸಿದ ಜಿಲ್ಲಾಧಿಕಾರಿ, ನಗರದ ಹಲವೆಡೆ ಯು.ಜಿ. ಸಂಪರ್ಕಗಳು ತಪ್ಪಿವೆ. ಈ ಬಗ್ಗೆ ಕ್ರಮ ತೆಗೆದು ಕೊಳ್ಳಬೇಕೆಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಕಳೆದ 30 ವರ್ಷಗಳಿಂದ ಸಮಸ್ಯೆ ಇದೆ. ನಾನೇನೂ ಇಲ್ಲಿ ಅಷ್ಟೊಂದು ವರ್ಷಗಳ ಕಾಲ ಇರಲಾಗದು. ಇರು ವಷ್ಟು ಸಮಯಯದಲ್ಲೇ ಸಮಸ್ಯೆ ಬಗೆ ಹರಿಸಬೇಕಿದೆ. ಹತ್ತರಲ್ಲೊಬ್ಬರು ಎಂಬ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಮನೋಭಾವ ತಮ್ಮದಲ್ಲ. ದಾವಣ ಗೆರೆಯ ಜನ ನೆನಪಿಟ್ಟು ಕೊಳ್ಳುವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕೆಂಬ ಉದ್ದೇಶವಿದೆ ಎಂದರು. ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರ ಸ್ವಾಮಿ, ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ, ತಹಶೀಲ್ದಾರ್ ಸಂತೋಷ್ ಕುಮಾರ್, ನಗರಾಭಿ ವೃದ್ಧಿ ಕೋಶದ ಯೋಜನಾ ಅಧಿಕಾರಿ ನಜ್ಮಾ, ಪಾಲಿಕೆ ಇಂಜಿನಿಯರ್ ಭಾರತಿ ಇತರರು ಉಪಸ್ಥಿತರಿದ್ದರು.