ಅಪರಾಧ

Home ಅಪರಾಧ

ವಿಚಾರಣಾಧೀನ ಖೈದಿ ಸಾವು

ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಖೈದಿಯೋರ್ವ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿರುವ ಘಟನೆ ಇಂದು ನಡೆದಿದೆ.

ಚಾನೆಲ್‌ನಲ್ಲಿ ತಾಯಿ, ಇಬ್ಬರು ಮಕ್ಕಳ ಶವಗಳ ಪತ್ತೆ

ಚಾನೆಲ್ ನಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳ ಶವ ಇಂದು ಪತ್ತೆಯಾಗಿದ್ದು, ತನ್ನಿಬ್ಬರು ಮಕ್ಕಳೊಂದಿಗೆ ಚಾನಲ್ ಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. 

ಲಕ್ಕಿ ಡ್ರಾ ನೆಪದಲ್ಲಿ 2 ಲಕ್ಷಕ್ಕೂ ಅಧಿಕ ಹಣ ವಂಚನೆ

ಆನ್ ಲೈನ್ ಶಾಪಿಂಗ್ ಕಂಪನಿಯ ಅಧಿಕಾರಿ ಹೆಸರಿನಲ್ಲಿ ಲಕ್ಕಿ ಡ್ರಾ ನೆಪದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಹಣವನ್ನು ಆನ್ ಲೈನ್ ಮೂಲಕ ದೋಚಿ ವಂಚಿಸಿರುವ ಬಗ್ಗೆ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಲಾರಿ ಹರಿದು ಹಮಾಲಿ ಸಾವು

ಲಾರಿ ಹರಿದ ಪರಿಣಾಮ ಹಮಾಲಿಯೋರ್ವ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ  ನಗರದ ಪಿ.ಬಿ. ರಸ್ತೆಯ ರವಿ ಮಿಲ್ ಬಳಿ ಇಂದು ಬೆಳಿಗ್ಗೆ ನಡೆದಿದೆ.

ಹರಪನಹಳ್ಳಿಯಲ್ಲಿ ಗಾಂಜಾ ಪತ್ತೆ

ಹರಪನಹಳ್ಳಿಯಲ್ಲಿ ಗಾಂಜಾ ಪತ್ತೆ

ಹರಪನಹಳ್ಳಿ : ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪದಡಿ ಪ್ರತ್ಯೇಕವಾಗಿ  ಮಾಲು ಸಮೇತ ಇಬ್ಬರನ್ನು ಇಲ್ಲಿಯ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ.

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ

ಕಾಂಗ್ರೆಸ್ ಪಕ್ಷದ  ರಾಜೀವ್‌ಗಾಂಧಿ ಪಂಚಾಯತ್‌ರಾಜ್‌ ಸಂಘಟನೆಯ ದಾವಣಗೆರೆ ಉತ್ತರ ವಲಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಅಜಯ್‌ ಎ. ಮಿರಜ್‌ಕರ್‌ ನೇಮಕಗೊಂಡಿದ್ದಾರೆ.

ಹರಿಹರದಲ್ಲಿ ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ವಶ

ಹರಿಹರದಲ್ಲಿ ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ವಶ

ಹರಿಹರ : ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟಕ್ಕೆ ಯತ್ನಿಸಿದ ವೇಳೆ ದಾಳಿ ನಡೆಸಿರುವ ಪೊಲೀಸರು ಮೂವರನ್ನು ಬಂಧಿಸಿ 1,25,100 ರೂ. ಮೌಲ್ಯದ 4 ಕೆ.ಜಿ. 170 ಗ್ರಾಂ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಆಟೋವನ್ನು ವಶಪಡಿಸಿಕೊಂಡಿದ್ದಾರೆ.

ಲೊಕೇಶನ್ ವೀಕ್ಷಿಸುತ್ತಿದ್ದ ಶಾರ್ಟ್ ಫಿಲ್ಮ್ ನಿರ್ದೇಶಕನಿಗೆ ಬೆದರಿಸಿ ಸುಲಿಗೆ

ಹೊಸಪೇಟೆಯ ಶಾರ್ಟ್ ಫಿಲ್ಮ್ ನಿರ್ದೇಶಕರೋರ್ವರನ್ನು ಹೆದರಿಸಿ ಚಿನ್ನಾಭರಣ, ನಗದು ದೋಚಿದ್ದ ಸುಲಿಗೆಕೋರರನ್ನು ಘಟನೆ ನಡೆದ ಮೂರು ದಿನಗಳಲ್ಲೇ ಬಂಧಿಸಿ, ಸುಲಿಗೆ ಮಾಡಿದ್ದನ್ನೆಲ್ಲಾ ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳ್ಳರ ಬಂಧನ : ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ವಶ

ಕಳ್ಳರ ಬಂಧನ : ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ವಶ

ಮನೆಗೆ ಕನ್ನ ಹಾಕಿ ಚಿನ್ನಾ ಭರಣ ಮತ್ತು ನಗದು ದೋಚಿ ಪರಾರಿ ಯಾಗಿದ್ದ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಮೂವರನ್ನು ಬಂಧಿಸಿ ಒಂದು ಲಕ್ಷ ಮೌಲ್ಯದ ಚಿನ್ನಾಭರಣ, ನಗದು ವಶಪಡಿಸಿಕೊಂಡಿದ್ದಾರೆ.

ಅಧಿಕಾರಿ ನೆಪ : ಗೃಹಿಣಿಗೆ ವಂಚನೆ

ಬ್ಯಾಂಕ್ ಕಸ್ಟಮರ್ ಕೇರ್ ಅಧಿಕಾರಿ ಎಂದು ನಂಬಿಸಿ ಗೃಹಿಣಿಯೋರ್ವರ ಬ್ಯಾಂಕ್ ಖಾತೆಯಿಂದ 2 ಲಕ್ಷ ರೂ. ಗಳನ್ನು ಆನ್ ಲೈನ್ ಮುಖೇನ ವಂಚಿಸಿರುವ ಘಟನೆ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪೊಲೀಸಪ್ಪನಿಂದ ಪಾಕ್ ಪ್ರೀತಿ ಅನಾವರಣ

ಪೊಲೀಸ್ ಕಾನ್ಸ್ ಟೇಬಲ್ ಓರ್ವ ಪವರ್ ಆಫ್ ಪಾಕಿಸ್ತಾನ್ ಎಂಬ ಫೇಸ್ ಬುಕ್ ಪೇಜ್ ಲೈಕ್ ಮಾಡಿ ವಾಟ್ಸಪ್ ಗ್ರೂಪ್‍ಗೆ ಶೇರ್ ಮಾಡುವ ಮೂಲಕ ಪಾಕಿಸ್ತಾನ ಪರ ತನ್ನ ಪ್ರೇಮವನ್ನು ವ್ಯಕ್ತಪಡಿಸಿರುವ ಘಟನೆ ನಗರದಲ್ಲಿ  ತಡವಾಗಿ ಬೆಳಕಿಗೆ ಬಂದಿದೆ.

ನ್ಯಾಮತಿಯ ಗೋವಿನಕೋವಿಯಲ್ಲಿ ರೈತ ಮಹಿಳೆಯ ಆತ್ಮಹತ್ಯೆ

ನ್ಯಾಮತಿ : ತಾಲ್ಲೂಕಿನ ಗೋವಿನಕೊವಿ ಗ್ರಾಮದ ರೈತ ಮಹಿಳೆ ಎಸ್.ಶ್ವೇತಾ ಮಹೇಶ್ವರಪ್ಪ (24) ಸಾಲಬಾಧೆ ಹೆಚ್ಚಾಗಿರುವುದರಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ. 

ವಕೀಲನ ಮೇಲೆ ಹಲ್ಲೆ : ಮೂವರಿಗೆ ಶಿಕ್ಷೆ

ವಕೀಲರೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಮೂವರಿಗೆ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜಗಳೂರು ತಾಲ್ಲೂಕು ಜಮ್ಮಾಪುರದ ನಿಂಗಪ್ಪ, ಉಮೇಶ್ ಹಾಗೂ ರುದ್ರಮುನಿ ಶಿಕ್ಷೆಗೆ ಗುರಿಯಾದವರಾಗಿದ್ದಾರೆ.

ಅನುತ್ತೀರ್ಣ : ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

ಪರೀಕ್ಷೆಯಲ್ಲಿ ಅನುತ್ತೀರ್ಣ ಹಿನ್ನೆಲೆಯಲ್ಲಿ ಮನನೊಂದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಕೆರೆಯೊಂದರಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ‌ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಜಗಳೂರಿನ ಇಓ ಕಾರು ಅಪಘಾತ; ಅಪಾಯದಿಂದ ಪಾರು

ಜಗಳೂರಿನ ಇಓ ಕಾರು ಅಪಘಾತ; ಅಪಾಯದಿಂದ ಪಾರು

ಜಗಳೂರು, ಆ.18- ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿ ಮಲ್ಲನಾಯ್ಕ ಅವರ ಬುಲೇರೊ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿರುವ ಘಟನೆ ನಿನ್ನೆ ನಡೆದಿದೆ.

ಜೈಲಿನಿಂದ ಹೊರ ಬಂದಿದ್ದ ಆರೋಪಿತನ ಆತ್ಮಹತ್ಯೆ

ಚನ್ನಗಿರಿ : ತನ್ನ ಪತ್ನಿಯನ್ನೇ‌ ಕೊಲೆ‌ ಮಾಡಿದ್ದ ಆರೋಪದಡಿ ಜೈಲು ಸೇರಿದ್ದ ಆರೋಪಿಯೋರ್ವ ಜಾಮೀನಿನ ಮೇಲೆ ಹೊರ ಬಂದ ಎರಡೇ ದಿನಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಗಿರಿ ತಾಲ್ಲೂಕಿನ ದೊಡ್ಡಘಟ್ಟದ ಬಳಿ ಇಂದು ನಡೆದಿದೆ.

ಬೈಕ್ ಶೋ ರೂಂ ಸೆಲ್ಲರ್‌ನಲ್ಲಿ ಆಕಸ್ಮಿಕ ಬೆಂಕಿ

ನಗರದ ಜೆ.ಹೆಚ್. ಪಟೇಲ್ ರಸ್ತೆಯಲ್ಲಿರುವ ರುತ್ವಿ ಬೈಕ್ ಶೋ ರೂಂನ ನೆಲ ಮಾಳಿಗೆಯಲ್ಲಿ ಇಂದು ರಾತ್ರಿ 10 ಗಂಟೆಯ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ, ನಷ್ಟವಾಗಿಲ್ಲ.

ಮಾಳಗೊಂಡನಹಳ್ಳಿಯಲ್ಲಿ ಶವ ಪತ್ತೆ

ತಾಲ್ಲೂಕಿನ ಮಾಳಗೊಂಡನಹಳ್ಳಿ ಗ್ರಾಮದ 3ನೇ ಹಳ್ಳದ ಹತ್ತಿರ ಸುಮಾರು 30-40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ನಿನ್ನೆ ಪತ್ತೆಯಾಗಿದೆ.